ನವದೆಹಲಿ: ಉತ್ತರಾಖಂಡ್ ನ ಚಂಪಾವತ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಹಾದಿ ಸುಗಮವಾದಂತಾಗಿದೆ.
ಇದನ್ನೂ ಓದಿ:ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆ…ಸಿದ್ದು ಸಿದ್ಧಾಂತ ಮಜಾವಾದವೇ? ಬಿಜೆಪಿ ಟ್ವೀಟ್ ಸಮರ
ಉತ್ತರಾಖಂಡ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಿಎಂ ಆಗಿದ್ದ ಪುಷ್ಕರ್ ಸಿಂಗ್ ಪರಾಜಯಗೊಂಡಿದ್ದರು. ಆದರೂ ಬಿಜೆಪಿ ಹೈಕಮಾಂಡ್ ಪುಷ್ಕರ್ ಅವರನ್ನೇ ಸಿಎಂ ಆಗಿ ಪುನರಾಯ್ಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪುಷ್ಕರ್ ಸಿಂಗ್ ಧಾಮಿಗೆ ಉಪಚುನಾವಣೆಯಲ್ಲಿ ಗೆಲ್ಲಲೇಬೇಕಾಗಾಗಿತ್ತು.
ಇದೀಗ ಉಪಚುನಾವಣೆಯಲ್ಲಿ ಪುಸ್ಕರ್ ಸಿಂಗ್ 55,000 ಮತಗಳ ಅಂತರದಿಂದ ಜಯ ಸಾಧಿಸುವ ಮೂಲಕ ಸಿಎಂ ಹುದ್ದೆಯಲ್ಲಿ ಮುಂದುವರಿಯಲು ಜನಾದೇಶ ದೊರೆತಂತಾಗಿದೆ ಎಂದು ವರದಿ ವಿವರಿಸಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಚಂಪಾವತ್ ವಿಧಾನಸಭಾ ಕ್ಷೇತ್ರದಲ್ಲಿ 58,258 ಮಂದಿ ಮತ ಚಲಾಯಿಸಿದ್ದು, ಇದರಲ್ಲಿ ಪುಷ್ಕರ್ ಸಿಂಗ್ 55,000 ಮತ ಪಡೆದಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಗಟೋರಿ ಕೇವಲ 3,233 ಮತ ಪಡೆದಿರುವುದಾಗಿ ತಿಳಿಸಿದೆ.