Advertisement

ಸಿಬಿಆರ್‌ಐ ತಂಡದಿಂದ ಜೋಶಿಮಠ ಸ್ಥಳ ಪರಿಶೀಲನೆ

09:57 PM Jan 09, 2023 | Team Udayavani |

ಜೋಶಿಮಠ: ಉತ್ತರಾಖಂಡದ ಜೋಶಿಮಠದ ಪರಿಸ್ಥಿತಿ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ(ಎನ್‌ಡಿಎಂಎ) ಅಧಿಕಾರಿಗಳೊಂದಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಮಿ ಸೋಮವಾರ ಸಭೆ ನಡೆಸಿದರು.

Advertisement

ಇನ್ನೊಂದೆಡೆ, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ(ಸಿಬಿಆರ್‌ಐ) ತಜ್ಞರ ತಂಡ ಜೋಶಿಮಠ ತಲುಪಿದ್ದು, ಪರಿಶೀಲನೆ ನಡೆಸಿದೆ. ಅಪಾಯಕಾರಿ ವಲಯದಲ್ಲಿರುವ ಕಟ್ಟಡಗಳಿಗೆ ಕೆಂಪು ಬಣ್ಣದ ಮಾರ್ಕ್‌ ಹಾಕಿದ್ದು, ಬಿರುಕು ಬಿಟ್ಟ ಮನೆಗಳನ್ನು ಪರಿಶೀಲಿಸಿದೆ.

ಅಲ್ಲದೇ ಉತ್ತರಾಖಂಡ ಸರ್ಕಾರಕ್ಕೆ ಸೋಮವಾರವೇ ಸಿಬಿಆರ್‌ಐ ವರದಿ ಸಲ್ಲಿಸಿದೆ. ಮತ್ತೊಂದೆಡೆ,ಜೋಶಿಮಠದಲ್ಲಿ ಉದ್ಭವಿಸಿರುವ ಆಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನ್ಯಾಯಾಲಯದ ಮಧ್ಯಪ್ರವೇಶ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಂಗಳವಾರವೇ ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ನಮೂದಿಸಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಜೋಶಿಮಠದ ಭೂಕುಸಿತದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕು. ತಜ್ಞರು ಮತ್ತು ಪರಿಸರವಾದಿಗಳು ವರದಿ ಸಲ್ಲಿಸುವವರೆಗೆ ಪ್ರದೇಶದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಇದೇ ವೇಳೆ ಕಾಂಗ್ರೆಸ್‌ ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next