ಹರಿದ್ವಾರ: ಉತ್ತರಾಖಂಡದಲ್ಲಿ ಅತ್ಯಂತ ವಿವಾದ ಮೂಡಿಸಿದ್ದ ಚಾರ್‌ಧಾಮ್ ದೇವಸ್ಥಾನಂ ಮಂಡಳಿ ಕಾಯ್ದೆ ರದ್ದಾಗಿದೆ.
ಕೆಲವು ತಿಂಗಳ ಹಿಂದೆ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಪುಷ್ಕರ್ ಸಿಂಗ್ ಧಾಮೀ, ಈ ಕಾಯ್ದೆಯ ಪರಿಣಾಮವನ್ನು ಪರಿಶೀಲಿಸಲು ಸಮಿತಿ ರಚಿಸಿದ್ದರು.ಅದರ ಶಿಫಾರಸಿನಂತೆ ಕಾಯ್ದೆ ರದ್ದುಗೊಳಿಸಲಾಗಿದೆ.
ಬದರಿನಾಥ್, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮತ್ತು ಇತರ 49 ದೇವಾಲಯಗಳ ಪೂಜ್ಯ ಹಿಂದೂ ದೇವಾಲಯಗಳನ್ನು ದೇಗುಲ ಮಂಡಳಿಯ ವ್ಯಾಪ್ತಿಗೆ ತಂದ ಚಾರ್ ಧಾಮ್ ದೇವಸ್ಥಾನಂ ಮಂಡಳಿ ಕಾಯ್ದೆಯನ್ನು ಉತ್ತರಾಖಂಡ ಸರ್ಕಾರ ಮಂಗಳವಾರ ರದ್ದುಗೊಳಿಸಿದೆ.
2019ರಲ್ಲಿ ಈ ಕಾಯ್ದೆ ಜಾರಿಯಾಗಿತ್ತು.ಮಂಡಳಿ ಸ್ಥಾಪನೆಗೆ ಪುರೋಹಿತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಈ ಕುರಿತು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿತ್ತು.
ಇದು ದೇವಸ್ಥಾನಗಳ ಮೇಲೆ ತಮಗಿರುವ ಪಾರಂಪರಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಯತ್ನ ಎಂದು ದೂರಿದ್ದರು. ಪುರೋಹಿತರ ಈ ವಿರೋಧಕ್ಕೆ ಇದೀಗ ಜಯ ಸಿಕ್ಕಿದೆ.
ಇದನ್ನೂ ಓದಿ:ನೌಕಾಪಡೆಗೆ ಅಡ್ಮಿರಲ್ ಹರಿಕುಮಾರ್ ಮುಖ್ಯಸ್ಥ