Advertisement

ಸುನೀಲ ಹೆಗಡೆಯವರಿಗೆ ನಿಗಮ ಮಂಡಳಿಯಲ್ಲಿ ಅವಕಾಶದ ಬಾಗಿಲು

12:04 PM Sep 07, 2021 | Team Udayavani |

ದಾಂಡೇಲಿ: ಸೋಲರಿಯದ ಮುತ್ಸದ್ದಿ ರಾಜಕಾರಣಿ ಆರ್.ವಿ.ದೇಶಪಾಂಡೆಯವರಿಗೆ ಒಮ್ಮೆ ಸೋಲಿನರುಚಿ ತೋರಿಸುವ ಮೂಲಕ ರಾಜ್ಯ ರಾಜಕಾರಣದ ಚಿತ್ತ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಕಡೆಗೆ ಹರಿಸುವಂತೆ ಮಾಡಿದ ಮಾಜಿ ಶಾಸಕರು ಹಾಗೂ ಪ್ರಸಕ್ತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಸುನೀಲ ಹೆಗಡೆಯವರಿಗೆ ಇದೀಗ ಬಸವರಾಜ ಬೊಮ್ಮಯಿ ಸಾರಥ್ಯದ ರಾಜ್ಯ ಸರಕಾರದ ನಿಗಮ ಮಂಡಳಿಯಲ್ಲಿ ಬಹುದೊಡ್ಡ ಅವಕಾಶ ಒಲಿದು ಬರುವ ಸಾಧ್ಯತೆ ಕಂಡು ಬರುತ್ತಿದೆ. ಹಾಗೆಂದು ಇದು ಕ್ಷೇತ್ರದಲ್ಲಿ ಮುಖಂಡರಾದಿಯಾಗಿ, ಕಾರ್ಯಕರ್ತರಲ್ಲಿಯೂ ಬಹು ಚರ್ಚೆಯ ವಿಷಯವಾಗಿದೆ.

Advertisement

ಹಾಗೆ ನೋಡಿದರೇ, ಒಮ್ಮೆ ಶಾಸಕರಾಗಿ ಅನುಭವವನ್ನು ಹೊಂದಿರುವ ಹಾಗೂ ಬಿಜೆಪಿಯ ಪ್ರಮುಖ ನಾಯಕರ ಜೊತೆ ಆತ್ಮೀಯ ಓಡನಾಟವಿರುವ ಕಾರಣದಿಂದ ನಿಗಮ ಮಂಡಳಿಯಲ್ಲಿ ಸುನೀಲ ಹೆಗಡೆಯವರಿಗೆ ಅದೃಷ್ಟ ಖುಲಾಯಿಸಬಹುದಾಗಿದೆ.  ಇನ್ನೂ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಬಹಳ ಹತ್ತಿರದ ಓಡನಾಡಿಯೆಂದೆ ಹೇಳಬಹುದಾದ ಸುನೀಲ ಹೆಗಡೆಯವರ ಮೇಲೆ ಪ್ರಹ್ಲಾದ್ ಜೋಶಿಯವರ ಪ್ರೀತಿಯು ಇದೆ. ಇತ್ತ ಬಸವರಾಜ ಬೊಮ್ಮಯಿಯವರಿಗೂ ಸುನೀಲ ಹೆಗಡೆಯವರು ಹತ್ತಿರವಾಗಿಯೆ ಇರುವುದು ನೋಡಿದರೇ ಹಾಗೂ ಮಗದೊಮ್ಮೆ ಕಾಂಗ್ರೆಸ್ಸಿನ ಆರ್.ವಿ.ದೇಶಪಾಂಡೆಯವರನ್ನು ಮಣಿಸಲು ಸುನೀಲ ಹೆಗಡೆಯವರಲ್ಲಿ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಬಾರಿ ನಿಗಮ ಮಂಡಳಿಯಲ್ಲೊಂದು ಬಹುದೊಡ್ಡ ಅವಕಾಶ ನೀಡಬಹುದಾದ ಸಾಧ್ಯತೆ ಕಂಡುಬರುತ್ತಿದೆ.

ಇದನ್ನೂ ಓದಿ : ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ಆಹ್ವಾನ ನೀಡಿದ ತಾಲಿಬಾನ್

ಸುನೀಲ ಹೆಗಡೆಯವರು ಏನು ಮಾಡಿದ್ದಾರೆ ಎನ್ನುವುದಕ್ಕಿಂತ ಜನಸಾಮಾನ್ಯರಲ್ಲಿ ಜನಸಾಮಾನ್ಯರಂತೆ ಸರಳತೆಯನ್ನು ಮೈಗೂಡಿಸಿಕೊಂಡ ಜನನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೂ ರಾಜಧಾನಿಯಲ್ಲಿ ನಾಯಕನಾಗದೇ, ಕ್ಷೇತ್ರದ ಜನತೆಯ ನಾಯಕನಾಗಿರುವುದು ಸುನೀಲ ಹೆಗಡೆಯವರಿಗೆ ಪ್ಲಸ್ ಪಾಯಿಂಟ್. ರಾಜಕೀಯದಲ್ಲಿ ಏನು ಆಗಬಹುದು. ಹಾವು ಮುಂಗುಸಿಯಂತಿದ್ದವರು ಕೈ ಕೈ ಕೂಡಿಸಿ ಸ್ನೇಹ ಬೆಳೆಸಿ ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ-ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ನಮ್ಮದಾಗಿರುವಾಗ, ಕ್ಷೇತ್ರದಲ್ಲಿಯೂ ಹಾವು ಮುಂಗುಸಿಯಂತಿರುವ ಘೋಟ್ನೇಕರ ಮತ್ತು ಸುನೀಲ ಹೆಗಡೆಯವರು ಒಂದಾದರೇ ಕ್ಷೇತ್ರವನ್ನು ಬೇರೊಬ್ಬರು ಆಳುವುದುಂಟೆ ಎಂಬ ಮಾತು ಕುತೂಹಲಕರ ರೀತಿಯಲ್ಲಿ ಚರ್ಚೆಯಲ್ಲಿರುವುದಂತು ಸತ್ಯ. ಇವರಿಗೆ ಇನ್ನೂ ವಯಸ್ಸು ಇರುವುದರಿಂದ ಅವರಿವರ ವಯಸ್ಸು ನೋಡಿ ಈ ಭಾರಿ ಅವರಿಗೆ ಅವಕಾಶ ಕೊಟ್ಟು ಮುಂದಿನ ಬಾರಿಗೆ ಇವರಿಗೆ ಅವಕಾಶ ಕೊಡುವ ವಾಗ್ದಾನದ ಜೊತೆ ಉತ್ತಮ ಹುದ್ದೆಯನ್ನು ದಯಾಪಾಲಿಸಿದ್ದಲ್ಲಿ ಏನು ಆಗಬಹುದು? ಯಾಕೆಂದ್ರೆ ಜ್ಯೋತಿಷ್ಯರಿಗೂ ಹಾಗೂ ರಾಜಕೀಯ ವಿಶ್ಲೇಷಕರಿಗೂ ಹೇಳಲಾರದ ಸಂಗತಿಗಳಿಗೆ ಕಾರಣವಾಗುತ್ತಿರುವ ಹಾಗೂ ಮರುಭೂಮಿಯಲ್ಲಿ ಜಲಾಧಾರೆಯನ್ನು ಸೃಷ್ಟಿಸುವಂತಹ ಕನಸನ್ನು ಬಿತ್ತುವ ರಾಜಕೀಯದಲ್ಲಿ ಏನು ಆಗಬಹುದು.

ಈ ಎಲ್ಲ ಸಾಧ್ಯತೆಗಳ ನಡುವೆ ಸುನೀಲ ಹೆಗಡೆಯವರಿಗೆ ನಿಗಮ ಮಂಡಳಿಯಲ್ಲಿ ಬಹುದೊಡ್ಡ ಅವಕಾಶ ಅರಸಿ ಬಂದರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿಬರತೊಡಗಿದೆ.

Advertisement

ಇದನ್ನೂ ಓದಿ : Increase testing in areas with high Covid-19 cases: Min Angara

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next