Advertisement

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

02:57 PM Apr 23, 2024 | Team Udayavani |

ಬೆಂಗಳೂರು: ಡಾಲಿ ಧನಂಜಯ ಅವರ ʼಉತ್ತರಕಾಂಡʼ ಸಿನಿಮಾದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ. ದಿನಕಳೆದಂತೆ ಹೊಸ ಹೊಸ ಅಪ್ಡೇಟ್‌ ಗಳು ಚಿತ್ರತಂಡದಿಂದ ಬರುತ್ತಿದೆ.

Advertisement

ಕಳೆದ ವರ್ಷ ಸಿನಿಮಾದ ಮುಹೂರ್ತ ನಡೆದಿತ್ತು. ಸ್ಯಾಂಡಲ್‌ ವುಡ್‌ ಕ್ವೀನ್‌ ನಟಿ ರಮ್ಯಾ ಅವರು ಈ ಸಿನಿಮಾದ ಮೂಲಕ ಕಂಬ್ಯಾಕ್‌ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ರಮ್ಯಾ ಅವರು ಡೇಟ್‌ ಹೊಂದಿಕೆಯಾಗದ ಕಾರಣ ʼಉತ್ತರಕಾಂಡʼದಿಂ ಹೊರ ಹೋಗಿದ್ದಾರೆ.

ರೋಹಿತ್‌ ಪದಕಿ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇರಲಿದೆ. ಒಂದೊಂದೇ ಪಾತ್ರಗಳ ಪರಿಚಯವನ್ನು ಚಿತ್ರತಂಡ ಮಾಡುತ್ತಿದೆ. ಇದೀಗ ಕಾಲಿವುಡ್‌ ಹಾಗೂ ಟಾಲಿವುಡ್‌ ಸಿನಿಮಾರಂಗದಲ್ಲಿ ಖ್ಯಾತಿಯನ್ನು ಗಳಿಸಿರುವ ನಟಿ ಐಶ್ವರ್ಯಾ ರಾಜೇಶ್ ʼಉತ್ತರಕಾಂಡʼ ತಂಡಕ್ಕೆ ಸೇರಿಕೊಂಡಿದ್ದಾರೆ. ಆ ಮೂಲಕ ಸ್ಯಾಂಡಲ್‌ ವುಡ್‌ ಗೆ  ಎಂಟ್ರಿ ಕೊಟ್ಟಿದ್ದಾರೆ.

ಐಶ್ವರ್ಯ ರಾಜೇಶ್,  ಉತ್ತರಕಾಂಡದಾಗ “ದುರ್ಗಿ” ಎಂದು ಅವರ ಪಾತ್ರದ ಲುಕ್‌ ನ್ನು ಕೆಆರ್ ಜಿ ರಿಲೀಸ್‌ ಮಾಡಿದೆ.

ಐಶ್ವರ್ಯ ರಾಜೇಶ್ ಅವರ ಆಯ್ಕೆ ಅಧಿಕೃತವಾಗಿದ್ದು, ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಶಿವರಾಜ್‌ ಕುಮಾರ್‌ ಅವರಿಗೆ ಜೋಡಿಯಾಗಿ ಭಾವನಾ ಮೆನನ್  ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರ ತಂಡ ಅಧಿಕೃತವಾಗಿ ಹೇಳಿಲ್ಲ.

Advertisement

ಬಹು ನಿರೀಕ್ಷಿತ ʼಉತ್ತರಕಾಂಡʼದಲ್ಲಿ ಮಲಯಾಳಂ ನಟ-ನಿರ್ಮಾಪಕ ವಿಜಯ್ ಬಾಬು, ಚೈತ್ರಾ ಜೆ ಆಚಾರ್, ರಂಗಾಯಣ ರಘು, ಯೋಗರಾಜ್ ಭಟ್, ಗೋಪಾಲಕೃಷ್ಣ ದೇಶಪಾಂಡೆ, ಉಮಾಶ್ರೀ, ಮತ್ತು ದಿಗಂತ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ವಿಜಯಪುರದಲ್ಲಿ ಸಿನಿಮಾದ ಮೊದಲ ಶೆಡ್ಯೂಲ್‌ ಚಿತ್ರೀಕರಣಗೊಳ್ಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next