Advertisement
ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಶಿವರಾಮ ಹೆಬ್ಟಾರ್ ಬಿಜೆಪಿಯಿಂದ ಕಾಂಗ್ರೆಸ್ ಬಂದರೆ ಸ್ವಾಗತ. ಬಿಜೆಪಿ ಅವರನ್ನು ಯಾವ ರೀತಿ ನಡೆಸಿಕೊಂಡಿರಬಹುದು, ಅವರು ಎಷ್ಟು ಕಷ್ಟಪಟ್ಟಿರಬಹುದು ಎನ್ನುವುದನ್ನು ನಾವು ಆಲೋಚಿಸಬೇಕು. ಅವರು ನಮ್ಮಲ್ಲಿಯೇ ಇದ್ದವರು. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ಅವರಿಗೆ ಸ್ವಾಗತವಿದೆ. ಅಲ್ಲಿ ಇಲ್ಲಿ ಹೋದರು, ಅಲ್ಲಿ ಪರಿಸ್ಥಿತಿ ನೋಡಿದರು. ಅಲ್ಲಿ ಬದುಕುವ ಪರಿಸ್ಥಿತಿ ಇಲ್ಲ ಎಂದು ಹೇಳಿ ಅವರಿಗೆ ಗೊತ್ತಾಗಿ ಮರಳಿ ಕಾಂಗ್ರೆಸ್‌ಗೆ ಬರುವ ಯೋಚನೆ ಮಾಡಿರಬಹುದು ಎಂದ ಅವರು, ವಾರದೊಳಗೆ ಎರಡನೇ ಪಟ್ಟಿ ಬಿಡುಗಡೆಯಾಗಬಹುದು ಎಂದರು.
ವೃದ್ಧಿಗೆ ಕೃತಕ ಬಂಡೆ ಯೋಜನೆ
ಮಂಗಳೂರಿನಿಂದ ಕಾರವಾರ ದವರೆಗಿನ 3 ಜಿಲ್ಲೆಗಳ 55 ಕಡೆಗಳಲ್ಲಿ ಸಮುದ್ರದಲ್ಲಿ ಕೃತಕ ಬಂಡೆ ರಚನೆ ಮೂಲಕ ಮೀನು ಸಂತತಿ ವೃದ್ಧಿಸುವ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾರಿಗೊಳಿಸಲಾಗುತ್ತಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಹೀಗಾಗಿ ಸುಮಾರು 17.37 ಕೋ. ರೂ. ವೆಚ್ಚದಲ್ಲಿ ಅಲ್ಲಲ್ಲಿ ಕೃತಕ ಬಂಡೆಗಳನ್ನು ರಚಿಸಿ, ಮೀನು ಮರಿಗಳನ್ನು ಸಂರಕ್ಷಿಸುವ ಉದ್ದೇಶ ಇದಾಗಿದೆ ಎಂದ ಅವರು, ಅವೈಜ್ಞಾನಿಕ ಮೀನುಗಾರಿಕೆಗೆ ಕಡಿವಾಣ ಹಾಕುವ ಅಗತ್ಯ ಇದೆಎಂದವರು ಅಭಿಪ್ರಾಯಪಟ್ಟರು. ಶೀಘ್ರ ಜೆಟ್ಟಿ ಕಾರ್ಯ
ಗಂಗೊಳ್ಳಿ ಬಂದರಿನ ಜೆಟ್ಟಿ ಕುಸಿತ ಪ್ರಕರಣದ ತನಿಖೆ ನಡೆಯುತ್ತಿದೆ. ಜೆಟ್ಟಿ ಪುನರ್ ನಿರ್ಮಿಸಬೇಕೆಂಬುದು ನಮ್ಮ ಉದ್ದೇಶ. 22 ಕೋ.ರೂ. ವೆಚ್ಚದ ಯೋಜನೆ ಸಿದ್ಧಗೊಂಡಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಕರೆದು, ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು. ದೇಶ ದೆಲ್ಲೆಡೆ ಕರಾವಳಿಯ ಭದ್ರತೆಯನ್ನು ಮೀನುಗಾರರೇ ನೋಡಿಕೊಳ್ಳುತ್ತಿದ್ದು, ಆ ವಿಷಯದಲ್ಲಿ ಅವರು ಸಮರ್ಥ ರಿದ್ದಾರೆ ಎಂದರು.
Related Articles
Advertisement