Advertisement
ನ್ಯಾಯಾಧೀಶರ ಕುಟುಂಬ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಾಣಿ ಹಿಂಸೆ ಕಾಯ್ದೆಯಡಿ ಹನ್ನೆರಡಕ್ಕೂ ಹೆಚ್ಚು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ನ್ಯಾಯಾಧೀಶರ ಕುಟುಂಬವು ಬರೇಲಿಯ ಸನ್‌ಸಿಟಿ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಕೆಲವು ದಿನಗಳ ಹಿಂದೆ ನ್ಯಾಯಾಧೀಶರ ಕುಟುಂಬ ಮತ್ತು ಪಕ್ಕದ ಮನೆಯ ಅಹಮ್ಮದ್ ಎಂಬ ವ್ಯಕ್ತಿಯ ಕುಟುಂಬದ ನಡುವೆ ನಾಯಿಯ ವಿಚಾರದಲ್ಲಿ ಗಂಭೀರ ವಿವಾದ ಉಂಟಾಗಿತ್ತು. ಈ ವೇಳೆ ಅಹ್ಮದ್ ಅವರ ಪುತ್ರ ಖಾದಿರ್ ಖಾನ್ ನ್ಯಾಯಾಧೀಶರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಮೇ 16ರಂದು ಎರಡು ಕುಟುಂಬಗಳ ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿದ್ದು.
ನ್ಯಾಯಾಧೀಶರ ದೂರಿನ ಮೇರೆಗೆ ನೆರೆಮನೆಯ ಅಹ್ಮದ್ ಕುಟುಂಬದ 12 ಸದಸ್ಯರ ವಿರುದ್ಧ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳವಾಗಿರುವ ನಾಯಿಯ ಹುಡುಕಾಟದಲ್ಲಿದ್ದಾರೆ. ಇದನ್ನೂ ಓದಿ: Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ