Advertisement

ಕಾರ್ಮಿಕರ ಭದ್ರತೆ ಹೆಚ್ಚಿಸಿದ ಉತ್ತರ ಪ್ರದೇಶ ; ವಲಸೆ ಆಯೋಗ ಜಾರಿಗೆ ಸಿಎಂ ಯೋಗಿ ಚಿಂತನೆ

07:17 AM May 26, 2020 | mahesh |

ಲಕ್ನೋ: ಲಾಕ್‌ಡೌನ್‌ನ ಈ ಎರಡು ತಿಂಗಳಿನಲ್ಲಿ ಬರೋಬ್ಬರಿ 23 ಲಕ್ಷ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಮರಳಿದ್ದು, ಇವರ ಹಿತ ಕಾಯ್ದುಕೊಳ್ಳಲು ಯೋಗಿ ಸರಕಾರ “ವಲಸೆ ಆಯೋಗ’ ರಚಿಸಲು ಮುಂದಾಗಿದೆ. ಉನ್ನತಾಧಿಕಾರಿಗಳೊಂದಿಗೆ ಸೋಮವಾರ ಮಹತ್ವದ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್‌, “ಬೇರೆ ರಾಜ್ಯಗಳು, ನಮ್ಮ ವಲಸೆ ಕಾರ್ಮಿಕರರನ್ನು ದುಡಿಸಿಕೊಳ್ಳುವ ಮುನ್ನ ಉ.ಪ್ರ. ಸರಕಾರದ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಆದೇಶಿಸಿದ್ದಾರೆ.

Advertisement

ಉದ್ದೇಶವೇನು?: ಇಲ್ಲಿಯ ತನಕ ವಲಸೆ ಕಾರ್ಮಿಕರು ದೇಶದ ವಿವಿಧೆಡೆ ಭದ್ರತೆ ಇಲ್ಲದೆ ದುಡಿಯುತ್ತಿದ್ದರು. ಈಗ ಆಯೋಗದ ಕಾನೂನಿನ ಅನ್ವಯ, ಕಾರ್ಮಿಕರ ಅಗತ್ಯವಿರುವ ರಾಜ್ಯಗಳು ಇವರಿಗೆ ಅಗತ್ಯ ವಿಮೆ ಭರಿಸಬೇಕಾಗುತ್ತದೆ. ಸಾಮಾಜಿಕ, ಕಾನೂನು ಹಾಗೂ ವಿತ್ತೀಯ ಹಕ್ಕುಗಳ ಜವಾಬ್ದಾರಿ ಹೊರಬೇಕಾಗುತ್ತದೆ. ಉ.ಪ್ರ. ಸರಕಾರ ವಲಸೆ ಕಾರ್ಮಿಕರ ನಕ್ಷೆ ರಚಿಸಲು ಮುಂದಾಗಿದೆ. ವಲಸಿಗರ ಕೌಶಲಕ್ಕೆ ಅನುಗುಣವಾಗಿ, ಇತರೆ ರಾಜ್ಯಗಳಿಗೆ ಅಗತ್ಯವಿರುವ ಕಾರ್ಮಿಕ ಬೇಡಿಕೆಯನ್ನು ಸರಕಾರವೇ ಪೂರೈಸಲಿದೆ.

ಸಾಕ್ಷ್ಯ ಬೇಕೆ?: ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆರೋಪವನ್ನು ಶಿವಸೇನೆ ಅಲ್ಲಗಳೆದಿದೆ. ವಲಸೆ ಕಾರ್ಮಿಕರು ಮಹಾರಾಷ್ಟ್ರದಿಂದ ಹೊರಡುವಾಗ ಸಿಎಂ ಉದ್ಧವ್‌ ಠಾಕ್ರೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೋಗಳು ನಮ್ಮಲ್ಲಿವೆ ಎಂದು ತಿರುಗೇಟು ನೀಡಿದೆ. ಇದೇ ವೇಳೆ, ಕಾರ್ಮಿಕರು ಮತ್ತೆ ಮಹಾರಾಷ್ಟ್ರಕ್ಕೆ ಹೋಗಬೇಕೆಂದರೆ ಅಲ್ಲಿನ ಸರಕಾರ ನಮ್ಮ ಸರಕಾರದ ಅನುಮತಿ ಪಡೆಯಬೇಕು ಎಂದು ಹೇಳಿದ್ದ ಸಿಎಂ ಯೋಗಿ ವಿರುದ್ಧ ಎಂಎನ್‌ಎಸ್‌ ಕೂಡ ಆಕ್ಷೇಪ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next