Advertisement

ಹೈಡ್ರಾಮದ ಬಳಿಕ ಲಖೀಂಪುರದತ್ತ ರಾಹುಲ್ ಗಾಂಧಿ ; ಪ್ರಿಯಾಂಕಾ ಬಿಡುಗಡೆ ಸಾಧ್ಯತೆ

04:26 PM Oct 06, 2021 | Team Udayavani |

ಲಕ್ನೋ: ಕೊನೆಗೂ ಉತ್ತರ ಪ್ರದೇಶ ಸರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂಸಾಚಾರಕ್ಕೆ ಗುರಿಯಾಗಿದ್ದ ಲಖೀಂಪುರಕ್ಕೆ ತೆರಳಲು ಬುಧವಾರ ಷರತ್ತಿನ ಅನುಮತಿಯನ್ನು ನೀಡಿದೆ.

Advertisement

ನಿಷೇದಾಜ್ಞೆ ಇರುವ ಹಿನ್ನಲೆಯಲ್ಲಿ ಏಕ ಕಾಲಕ್ಕೆ 5 ಜನರನ್ನು ಮಾತ್ರ ಲಖೀಂಪುರ ಒಳಗೆ ಬಿಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ನೋ ವಿಮಾನ ನಿಲ್ದಾಣದಲ್ಲಿ ಧರಣಿ

ಲಕ್ನೋ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ನಾಯಕರ ಜೊತೆಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಭಾರಿ ಸಂಖ್ಯೆಯ ಪೊಲೀಸರು ಲಖೀಂಪುರದತ್ತ ತೆರಳದಂತೆ ತಡೆದರು. ಈ ವೇಳೆ ರಾಹುಲ್ ಗಾಂಧಿ ಅವರು ವಿಮಾನ ನಿಲ್ದಾಣದಲ್ಲೇ ಧರಣಿ ನಡೆಸಿದರು.

ರಾಹುಲ್ ಅವರು ಎಲ್ ಆರ್ ಪಿ ಗೆಸ್ಟ್ ಹೌಸ್ ಗೆ ತೆರಳಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಲಖೀಂಪುರದತ್ತ ತೆರಳಲಿದ್ದಾರೆ. ಅವರೊಂದಿಗೆ ಇನ್ನೂ ಮೂವರು ನಾಯಕರು ತೆರಳಲಿದ್ದಾರೆ. ಮೃತಪಟ್ಟ ರೈತರ ಕುಟುಂಬ ಸದಸ್ಯರನ್ನು ಅವರು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

Advertisement

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ರಾಜಕೀಯ ಪಕ್ಷದ ಮುಖಂಡರು ಮತ್ತು ರೈತ ನಾಯಕರುಗಳಿಗೆ ಲಖೀಂಪುರದತ್ತ ತೆರಳಲು ಅವಕಾಶ ನೀಡಲಾಗಿದ್ದು, ಏಕಕಾಲಕ್ಕೆ 5 ಜನರು ಮಾತ್ರ ತೆರಳಬಹುದಾಗಿದೆ. ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು ಬಿಜಿ ಭದ್ರತೆ ಕೈಗೊಳ್ಳಲಾಗಿದೆ.

ಲಖೀಂಪುರ ಖೇರಿಗೆ ಭೇಟಿ ನೀಡಲು ಆಗಮಿಸುತ್ತಿದ್ದ ಪ್ರಿಯಾಂಕಾರನ್ನು ಶಾಂತಿಗೆ ಭಂಗ, ನಿಷೇಧಾಜ್ಞೆ ಉಲ್ಲಂಘನೆ ಆರೋಪವನ್ನುಹೊರಿಸಿ ಸೋಮವಾರ ಪೊಲೀಸರು ವಶಕ್ಕೆ ಪಡೆದು ಅತಿಥಿ ಗೃಹದಲ್ಲಿ ಇರಿಸಿದ್ದರು. ಮಂಗಳವಾರ ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರಿದ್ದ ಅತಿಥಿಗೃಹವನ್ನೇ ತಾತ್ಕಾಲಿಕ ಜೈಲು ಎಂದು ಘೋಷಿಸಲಾಗಿತ್ತು. . ಇಂದು ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಲಖೀಂಪುರದಲ್ಲಿ ಭಾನುವಾರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಒಟ್ಟು ೮ ಮಂದಿ ಬಲಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next