Advertisement

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

03:23 PM Apr 20, 2024 | Kavyashree |

ತುಮಕೂರು: ರಾಜಧಾನಿ ಬೆಂಗಳೂರಿಗೆ ಹೆಬ್ಟಾಗಿಲಾಗಿರುವ ತುಮಕೂರು ಲೋಕಸಭಾ ಕ್ಷೇತ್ರ ಈಗ ಪ್ರತಿಷ್ಠೆಯ ಕಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಯಿದ್ದು ಗೆಲುವಿಗಾಗಿ ಸೆಣಸಾಟ ನಡೆಯುತ್ತಿದೆ.

Advertisement

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಬೆಂಬಲಿತ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಸೋಮಣ್ಣ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡರು ಕಣದಲ್ಲಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯವೇ ಪ್ರಾಬಲ್ಯವಿರುವ ಹಿನ್ನೆಲೆ ಇದುವರೆಗೂ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿದಿರುವವರು ಒಕ್ಕಲಿಗರು ಮತ್ತು ಲಿಂಗಾಯತರೇ. ಒಂದೊಂದು ಅವಧಿಯಲ್ಲಿ ಮಾತ್ರ ಜೈನ ಮತ್ತು ಹಿಂದುಳಿದ ಕುರುಬ ಸಮುದಾಯದವರು ಸಂಸದರಾಗಿದ್ದರು. ಈಗಲೂ ಬಿಜೆಪಿಯಿಂದ ಲಿಂಗಾಯತ ಸಮುದಾಯದ ವಿ.ಸೋಮಣ್ಣ, ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯದ ಎಸ್‌.ಪಿ.ಮುದ್ದಹನುಮೇಗೌಡರು ಸ್ಪರ್ಧಾಕಣ ದಲ್ಲಿದ್ದು ಇಬ್ಬರ ನಡುವೆ ನೇರ ಸ್ಪರ್ಧೆ ಕಂಡು ಬಂದಿದೆ.

ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಮಾಜಿ ಸಚಿವ ವಿ.ಸೋಮಣ್ಣ “ಹೊರಗಿನವರು’ ಎಂಬ ಅಸ್ತ್ರವನ್ನು ಕಾಂಗ್ರೆಸ್‌ ಪ್ರಯೋಗಿಸುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ತುಮಕೂರಿಗೆ ಸೋಮಣ್ಣ ಚಿರಪರಿಚಿತರಾಗಿದ್ದು, ಶ್ರೀಕ್ಷೇತ್ರ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರಲ್ಲದೆ, ಕಳೆದ 2019ರ ಲೋಕಸಭಾ ಚುನಾವಣೆ, ಮಹಾನಗರ ಪಾಲಿಕೆ ಚುನಾವಣಾ ಉಸ್ತುವಾರಿ ಹೊತ್ತವರು ಎಂದು ಸಮಜಾಯಿಷಿ ನೀಡುತ್ತಿದೆ. ಹಿಂದೆ ಜನತಾಪರಿವಾರದಲ್ಲಿದ್ದ ಸೋಮಣ್ಣ ಅವರಿಗೆ ದೇವೇಗೌಡರ ಬೆಂಬಲ ಸಹ ಸಿಕ್ಕಿರುವುದು ಪ್ಲಸ್‌ ಪಾಯಿಂಟ್‌. ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾಗಿ ಬೇಸತ್ತು ಬಿಜೆಪಿ ಸೇರಿದ್ದರು. ಅಲ್ಲಿ ಟಿಕೆಟ್‌ ಸಿಗುವುದು ಅನುಮಾನವಾದ್ದರಿಂದ ಮತ್ತೆ ಕಾಂಗ್ರೆಸ್‌ ಸೇರಿದರು.

Advertisement

ತುಮಕೂರು ಲೋಕಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಅದನ್ನು ಉಳಿಸಿಕೊಳ್ಳಲು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಜಿ.ಪರಮೇಶ್ವರ್‌ ಮತ್ತು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತೀವ್ರ ಪ್ರಯತ್ನ ಪಡುತ್ತಿದ್ದು, ನಮ್ಮ ಸರಕಾರ ಗ್ಯಾರಂಟಿ ಯೋಜನೆ ನಮಗೆ ಹೆಚ್ಚು ನೆರವಾಗುತ್ತವೆ ಎನ್ನುವ ವಿಶ್ವಾಸದಿಂದ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ ಈ ಹಿಂದೆ ಸಂಸತ್‌ ಸದಸ್ಯರಾಗಿ ಕ್ಷೇತ್ರದಲ್ಲಿ ಮಾಡಿರುವ ಕೆಲಸ ನನ್ನ ಕೈಹಿಡಿ ಯಲಿವೆ ಎನ್ನುವ ವಿಶ್ವಾಸವನ್ನು ಮುದ್ದಹನುಮೇಗೌಡ ಹೊಂದಿ ದ್ದಾರೆ. ಒಟ್ಟಾರೆಯಾಗಿ ಎರಡು ಪ್ರಬಲ ಜಾತಿಗಳ ಮುಖಂಡರು ಚುನಾವಣ ರಣರಂಗದಲ್ಲಿ ಸೆಣಸುತ್ತಿದ್ದಾರೆ. ಇಬ್ಬರಿಗೂ ತಮ್ಮದೇ ಆದ ವೋಟ್‌ಬ್ಯಾಂಕ್‌ ಇದ್ದು ಸಮಬಲದ ಹೋರಾಟ ನಡೆಯುತ್ತಿದೆ. ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿ ಆಗಿರುವ ಮಾಧು ಸ್ವಾಮಿ ತಟಸ್ಥರಾಗಿದ್ದಾರೆ ಎನ್ನಲಾಗಿದ್ದು, ಇದು ಚುನಾವಣೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುದನ್ನು ಕಾದು ನೋಡಬೇಕು.

ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಯವಾಗಲಿದ್ದು ಯಾರಿಗೆ ಹೆಚ್ಚು ಹಿಂದುಳಿದ ವರ್ಗಗಳ ಮತ ಪಡೆಯುತ್ತಾರೋ ಅವರಿಗೆ ಗೆಲುವು ಸುಲಭವಾಗಲಿದೆ.

ತುಮಕೂರನ್ನು 2ನೇ ವಾರಾಣಸಿ ರೀತಿಯಲ್ಲಿ ಅಭಿವೃದ್ಧಿ ಮಾಡಲು ಜನ ನನ್ನನ್ನು ಆಶೀರ್ವದಿಸುವ ನಂಬಿಕೆ ಇದೆ, ನನೆಗುದಿಗೆ ಬಿದ್ದಿ ರುವ ರೈಲ್ವೇ ನೀರಾವರಿ, ಕೈಗಾ ರಿಕೆಗೆ ಒತ್ತು ನೀಡಿ, ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸುವೆ. ●ವಿ.ಸೋಮಣ್ಣ ಬಿಜೆಪಿ

ಅಭ್ಯರ್ಥಿ ನಾನು ಹೊರಗಿನಿಂದ ಬಂದಿಲ್ಲ. ಇಲ್ಲೇ ವಾಸವಾ ಗಿದ್ದೇನೆ. ನಾನು ಹಿಂದೆ ಸಂಸದನಾಗಿದ್ದಾಗ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡಿದ್ದೇನೆ. ಈಗಲೂ ಜಿಲ್ಲೆಯ ಕೊಬ್ಬರಿ ಬೆಳೆಗಾರರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ●ಮುದ್ದಹನುಮೇಗೌಡ ಕಾಂಗ್ರೆಸ್‌ ಅಭ್ಯರ್ಥಿ

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next