Advertisement
ನಿಷೇದಾಜ್ಞೆ ಇರುವ ಹಿನ್ನಲೆಯಲ್ಲಿ ಏಕ ಕಾಲಕ್ಕೆ 5 ಜನರನ್ನು ಮಾತ್ರ ಲಖೀಂಪುರ ಒಳಗೆ ಬಿಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ರಾಜಕೀಯ ಪಕ್ಷದ ಮುಖಂಡರು ಮತ್ತು ರೈತ ನಾಯಕರುಗಳಿಗೆ ಲಖೀಂಪುರದತ್ತ ತೆರಳಲು ಅವಕಾಶ ನೀಡಲಾಗಿದ್ದು, ಏಕಕಾಲಕ್ಕೆ 5 ಜನರು ಮಾತ್ರ ತೆರಳಬಹುದಾಗಿದೆ. ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು ಬಿಜಿ ಭದ್ರತೆ ಕೈಗೊಳ್ಳಲಾಗಿದೆ.
ಲಖೀಂಪುರ ಖೇರಿಗೆ ಭೇಟಿ ನೀಡಲು ಆಗಮಿಸುತ್ತಿದ್ದ ಪ್ರಿಯಾಂಕಾರನ್ನು ಶಾಂತಿಗೆ ಭಂಗ, ನಿಷೇಧಾಜ್ಞೆ ಉಲ್ಲಂಘನೆ ಆರೋಪವನ್ನುಹೊರಿಸಿ ಸೋಮವಾರ ಪೊಲೀಸರು ವಶಕ್ಕೆ ಪಡೆದು ಅತಿಥಿ ಗೃಹದಲ್ಲಿ ಇರಿಸಿದ್ದರು. ಮಂಗಳವಾರ ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರಿದ್ದ ಅತಿಥಿಗೃಹವನ್ನೇ ತಾತ್ಕಾಲಿಕ ಜೈಲು ಎಂದು ಘೋಷಿಸಲಾಗಿತ್ತು. . ಇಂದು ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಲಖೀಂಪುರದಲ್ಲಿ ಭಾನುವಾರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಒಟ್ಟು ೮ ಮಂದಿ ಬಲಿಯಾಗಿದ್ದರು.