ಪ್ರಯಾಗ್‌ರಾಜ್: ಹತ್ಯೆಗೀಡಾದ ಕುಖ್ಯಾತ ದರೋಡೆಕೋರ-ರಾಜಕಾರಣಿ ಅತಿಕ್ ಅಹ್ಮದ್ ಗೆ ಸೇರಿದ್ದ ವಶಪಡಿಸಿಕೊಂಡ ಭೂಮಿಯಲ್ಲಿ ನಿರ್ಮಿಸಲಾದ ಫ್ಲ್ಯಾಟ್‌ಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಬಡವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ.
ವಿಶೇಷ ಉದ್ದೇಶಕ್ಕಾಗಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದು,ವಶಪಡಿಸಿಕೊಂಡ ಜಮೀನಿನಲ್ಲಿ ನಿರ್ಮಿಸಲಾದ 76 ಫ್ಲಾಟ್‌ಗಳ ಕೀಗಳನ್ನು ಬಡವರಿಗೆ ಹಸ್ತಾಂತರಿಸಿದರು.
ವರದಿಗಳ ಪ್ರಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಫ್ಲಾಟ್‌ಗಳನ್ನು ಹಸ್ತಾಂತರಿಸಿದರು. ಸ್ಥಳಕ್ಕೆ ಆಗಮಿಸಿದ ಸಿಎಂ ಮಕ್ಕಳೊಂದಿಗೆ ಸಂವಾದ ನಡೆಸಿ, ಹೊಸದಾಗಿ ನಿರ್ಮಿಸಿರುವ ಫ್ಲಾಟ್‌ಗಳನ್ನು ಪರಿಶೀಲಿಸಿದರು.
ಜನರನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ “ಪ್ರಯಾಗ್‌ರಾಜ್‌ನಿಂದ ಇಂದು ಒಂದು ವಿಶಿಷ್ಟ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಮಾಫಿಯಾದಿಂದ ವಶಪಡಿಸಿಕೊಂಡ ಭೂಮಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಫ್ಲ್ಯಾಟ್‌ಗಳ ಕೀಗಳನ್ನು ಹಸ್ತಾಂತರಿಸಲಾಗುತ್ತಿದೆ. ಇದೇ ರಾಜ್ಯದಲ್ಲಿ 2017ಕ್ಕೆ ಮೊದಲು ಮಾಫಿಯಾಗಳು ಬಡವರು, ಉದ್ಯಮಿಗಳು ಮತ್ತು ಸರ್ಕಾರದ ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದರು. ಆದರೆ ಈಗ ಮಾಫಿಯಾದಿಂದ ಮುಕ್ತವಾದ ಭೂಮಿಯಲ್ಲಿ ವಸತಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ನಾನು ಎಲ್ಲರಿಗೂ ಹೇಳುತ್ತೇನೆ. ಅಧಿಕಾರಿಗಳು ಇಂದು ತಮ್ಮ ತಮ್ಮ ಪ್ರದೇಶಗಳಲ್ಲಿ ಮಾಫಿಯಾದಿಂದ ಮುಕ್ತವಾದ ಭೂಮಿಯಲ್ಲಿ ಇಂತಹ ವಸತಿ ಘಟಕಗಳನ್ನು ನಿರ್ಮಿಸಲು ಮುಂದಾಗಬೇಕು. ಇದು ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ” ಎಂದರು.
ಪ್ರತಿ ಫ್ಲಾಟ್ ಆಧುನಿಕ ಸೌಲಭ್ಯ ಹೊಂದಿದ್ದು, ಮಲಗುವ ಕೋಣೆ, ಅಡುಗೆ ಕೋಣೆ, ಶೌಚಾಲಯ, ಸ್ನಾನಗೃಹ, ಬಾಲ್ಕನಿ, ವಿದ್ಯುತ್, ಒಳಚರಂಡಿ ಮತ್ತು ವಾಹನ ನಿಲುಗಡೆ ಸೌಲಭ್ಯವಿದೆ.