Advertisement

ಐಎಸ್‌ಐಗೆ ಗೌಪ್ಯ ಮಾಹಿತಿ: ಭಾರತೀಯನ ಬಂಧನ

06:00 AM May 25, 2018 | Team Udayavani |

ಲಕ್ನೋ: ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಮನೆಯಲ್ಲಿ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಉತ್ತರಾಖಂಡದಲ್ಲಿ ವ್ಯಕ್ತಿಯೊಬ್ಬನನ್ನು ಉಗ್ರ ನಿಗ್ರಹ ದಳ (ಎಟಿಎಸ್‌) ವಶಕ್ಕೆ ಪಡೆದಿದೆ. 

Advertisement

ಪಿಥೋರ್‌ ಗಢ ಜಿಲ್ಲೆಯ ದೀದಿ ಹತ್‌ನಲ್ಲಿ ವಾಸ್ತವ್ಯ ಹೂಡಿದ್ದ ಈತನನ್ನು ಎಟಿಎಸ್‌ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗಾಗಿ ಲಕ್ನೋಗೆ ಕರೆದೊಯ್ದಿದೆ. 2015ರಿಂದ 2017ರವರೆಗೆ ಇಸ್ಲಾಮಾಬಾದ್‌ನ ಭಾರತೀಯ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಮನೆಯಲ್ಲಿ ಅಡುಗೆ ಭಟ್ಟನಾಗಿ ರಮೇಶ್‌ ಸಿಂಗ್‌ ಕನ್ಯಾಲ್‌(35) ಕೆಲಸ ಮಾಡುತ್ತಿದ್ದ. ಆ ಅವಧಿಯಲ್ಲಿ ಭಾರತಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಣದಾಸೆಗಾಗಿ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್‌ಐಗೆ ರವಾನಿಸಿದ್ದಾನೆ ಎಂಬ ಆರೋಪ ಈತನ ಮೇಲಿದೆ. ಇತ್ತೀಚೆಗಷ್ಟೇ, ಇಸ್ಲಾಮಾಬಾದ್‌ನಿಂದ ಭಾರತಕ್ಕೆ ಹಿಂದಿರುಗಿದ ನಂತರ, ಪಿಥೋರ್‌ಗಢದಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ. 

ಕಲ್ಯಾನ್‌ ತಪಾಸಣೆ ವೇಳೆ ಆತನ ಬಳಿ ಪಾಕಿಸ್ತಾನದ ಕ್ಯೂ-ಮೊಬೈಲ್‌ ಕಂಪನಿಯ ಮೊಬೈಲ್‌ ಇರುವುದು ಪತ್ತೆಯಾಗಿದೆ. ಸೇವಾವಧಿ ಮುಗಿಸಿ ಭಾರತಕ್ಕೆ ಹಿಂದಿರುಗುವಾಗ ಐಎಸ್‌ಐ ಸಂಸ್ಥೆಯು ಭಾರತದಿಂದಲೂ ಗೂಢ ಚರ್ಯೆ ಮಾಡಲು ಅನುಕೂಲವಾಗುವಂತೆ ಈ ಫೋನ್‌ ನೀಡಿತ್ತೆನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next