Advertisement

ಉ.ಪ್ರ: 3 ವರ್ಷಗಳ‌ಲ್ಲಿ 6,126 ಎನ್‌ಕೌಂಟರ್‌

09:43 AM Jul 16, 2020 | mahesh |

ಲಕ್ನೋ: ಉತ್ತರ ಪ್ರದೇಶದಲ್ಲಿ 3 ವರ್ಷಗಳ ಅವಧಿಯಲ್ಲಿ 6,126 ಎನ್‌ಕೌಂಟರ್‌ಗಳು ಸಂಭವಿಸಿದ್ದು, 122 ಅಪರಾಧಿಗಳು ಹತರಾಗಿದ್ದಾರೆ. 13 ಪೊಲೀಸರು ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ “ಪಿಟಿಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ಕಾನೂನು ಸುವ್ಯ ವಸ್ಥೆಯ ಡಿ.ಜಿ. ಪ್ರಶಾಂತ್‌ ಕುಮಾರ್‌. ರಾಜ್ಯದಲ್ಲಿ 2017ರ ಮಾರ್ಚ್‌ 20 – 2020ರ ಜುಲೈ 10ರ ಮೂರು ವರ್ಷಗಳ ಅವಧಿಯಲ್ಲಿ 6 ಸಾವಿರಕ್ಕೂ ಅಧಿಕ ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ 122 ಕ್ರಿಮಿನಲ್‌ಗ‌ಳು ಹತ್ಯೆಯಾಗಿದ್ದಾರೆ. 2,296 ಅಪರಾಧಿಗಳು ಗಾಯಗೊಂಡಿದ್ದಾರೆ. 13,361 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಎನ್‌ಕೌಂಟರ್‌ಗಳಲ್ಲಿ 909 ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಇತ್ತೀಚೆಗೆ ಕಾನ್ಪುರ ಬಳಿ 8 ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕುಖ್ಯಾತ ಪಾತಕಿ ವಿಕಾಸ್‌ ದುಬೆ ಸೇರಿದಂತೆ 6 ರೌಡಿಗಳು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಪ್ರಶಾಂತ್‌ ಕುಮಾರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next