Advertisement

ವಾಲ್ಮೀಕಿಯಿಂದ ರಾಮರಾಜ್ಯ ಪರಿಕಲ್ಪನೆ 

01:18 PM Oct 07, 2017 | |

ತಿ.ನರಸೀಪುರ: ರಾಮರಾಜ್ಯ ನಿರ್ಮಾಣ ಮಾಡುವಂತಹ ಪರಿಕಲ್ಪನೆಯೊಂದಿಗೆ ಎಲ್ಲಾ ವರ್ಗದ ಜನರು ಸಾಮರಸ್ಯದಿಂದ ಬಾಳಲು ಮಹರ್ಷಿ ವಾಲ್ಮೀಕಿ ರಾಮಾಯಣ ರಚನೆ ಮಾಡಿದ್ದಾರೆಂದು ಸಂಸದ ಆರ್‌.ಧ್ರುವನಾರಾಯಣ ಹೇಳಿದರು. ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ಪ್ರಪಂಚದಲ್ಲೇ ಜಾತ್ಯಾತೀತ ರಾಷ್ಟ್ರವಾದ ಭಾರತ ಐತಿಹಾಸಿಕ ಮಹತ್ವವನ್ನು ಸಾದರಪಡಿಸುವ ಪ್ರಸಿದ್ಧತೆಯೊಂದಿಗೆ ರಾಮಯಾಣ ಗ್ರಂಥವನ್ನು ಬರೆದ ವಾಲ್ಮೀಕಿ ಅವರು ದೇಶದ ಸಂಸ್ಕೃತಿಯನ್ನು ಬಿಂಬಿಸಿದ್ದಾರೆಂದರು. 

ರಾಮಾಯಣ ತಿರುಚಲು ಯತ್ನ: ತಾಲೂಕು ಕಚೇರಿ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಅಖೀಲ ಭಾರತ ವಾಲ್ಮೀಕಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ದೇವರಾಜ ಪಾಳೇಗಾರ್‌ ಮಾತನಾಡಿ, ಅಂಬೇಡ್ಕರ್‌ರು ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಸಂವಿಧಾನದಲ್ಲಿ ಅಳವಡಿಸಿರುವ ಅಂಶಗಳನ್ನು ವಾಲ್ಮೀಕಿ ಅವರು ರಾಮಾಯಣ ಗ್ರಂಥದಲ್ಲಿಯೇ ಅಳವಡಿಸಿದ್ದರು. ಆದರೆ ದೇಶದಲ್ಲಿನ ಕೆಲವರು ಮಹರ್ಷಿ ವಾಲ್ಮೀಕಿ ಅವರ ರಾಮಯಾಣವನ್ನು ತಿರುಚಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ತಳವಾರ-ಪರಿವಾರ ಒಂದೇ: ಪರಿಶಿಷ್ಟ ಪಂಗಡ ಸಮುದಾಯಗಳಲ್ಲಿ ಗೊಂದಲ ಉಂಟು ಮಾಡಿರುವುದು ಸರಿಯಲ್ಲ. ತಳವಾರ ಮತ್ತು ಪರಿವಾರ ಸಮುದಾಯ ಒಂದೇ ಆಗಿದ್ದು, ಎರಡು ಉಪ ಜಾತಿಗಳು ನಾಯಕ ಜಾತಿಗೇ ಸೇರಿವೆ ಎಂದು ತಿಳಿಸಿದರು. 

ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ವಿಶ್ವಕರ್ಮ ಬೀದಿ, ಲಿಂಕ್‌ ರಸ್ತೆ, ಖಾಸಗಿ ಬಸ್‌ ನಿಲ್ದಾಣ ವೃತ್ತ, ಹಾಗೂ ಕಾಲೇಜು ರಸ್ತೆ ಮೂಲಕ ಸಂಚರಿಸಿ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದವು. ವೀರಗಸೆ ಕುಣಿತ, ದೊಣ್ಣೆ ವರಸೆ, ಭಜನೆ ಸೇರಿದಂತೆ ವಿವಿಧ ಗ್ರಾಮಗಳ ಕಲಾ ತಂಡಗಳು  ಹಾಗೂ ಹೊಸ ಹೆಮ್ಮಿಗೆ ಗ್ರಾಮದವರಿಂದ ವೀರ ಮದಕರಿ ವೇಷದಾರಿ ಮೆರವಣಿಗೆಗೆ ಕಳೆ ತಂದವು.

Advertisement

ಜಿಪಂ ಸದಸ್ಯ ಮಂಜುನಾಥನ್‌, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಸದಸ್ಯರಾದ ಕೆ.ಎಸ್‌.ಗಣೇಶ್‌, ಎಂ.ರಮೇಶ್‌, ಬಿ.ಸಾಜೀದ್‌ ಆಹಮದ್‌, ಕುಮುದ, ಆರ್‌.ಚಲುವರಾಜ್‌, ಪುರಸಭೆ ಸದಸ್ಯರಾದ ಸಿ.ಉಮೇಶ್‌, (ಪಾಪು), ರಾಘವೇಂದ್ರ, ಟ.ಜೆ.ಪುಟ್ಟಸ್ವಾಮಿ, ಬಸ್‌ ಮಾಲಿಕ ಪಿ.ಪುಟ್ಟರಾಜು, ತಾಲೂಕು ನಾಯಕ ಸಂಘದ ಅಧ್ಯಕ್ಷ ಚಿನ್ನಸ್ವಾಮಿ,

-ಪ್ರಧಾನ ಕಾರ್ಯದರ್ಶಿ ಪಿ.ಶಶಿಧರ್‌, ಉಪಾಧ್ಯಕ್ಷ ಆಲಗೂಡು ನಾಗರಾಜು, ಎಪಿಎಂಸಿ ಸದಸ್ಯ ಶಂಕರ್‌ನಾಯಕ್‌, ಡಾ.ಬಿ.ಆರ್‌.ಅಂಬೇಡ್ಕರ್‌ ಸಂಘದ ಅಧ್ಯಕ್ಷ ಕರೊಹಟ್ಟಿ ಮಹದೇವಯ್ಯ, ಬಾಜೂಜಿ ಸಂಘದ ಅಧ್ಯಕ್ಷ ಮೂಗೂರು ಸಿದ್ದರಾಜು, ಗ್ರಾಪಂ ಮಾಜಿ ಅಧ್ಯಕ್ಷ ಗುರುಮೂರ್ತಿ, ಕಾಂಗ್ರೆಸ್‌ ಮುಖಂಡ ಸೋಸಲೆ ಮಹದೇವಸ್ವಾಮಿ ಮತ್ತಿತರರಿದ್ದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿನ ಪರಿಶಿಷ್ಟ ಪಂಗಡಗಳ ಸಮುದಾಯ ಜನರ ಸಾಮಾಜಿಕ ಪ್ರಗತಿಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ. ಅಲ್ಲದೆ ವಿಧಾನಸೌಧದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸುವ ಮೂಲಕ ಅವರ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಮಾಡಿದ್ದಾರೆ.  
-ಧ್ರುವನಾರಾಯಣ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next