Advertisement

ಕೃಷಿಯಲ್ಲಿ ಮಿತವಾಗಿ ನೀರು ಬಳಸಿ: ಯಶವಂತ್ರಾಯಗೌಡ

03:19 PM Sep 08, 2017 | |

ಇಂಡಿ: ಪ್ರತಿಯೊಬ್ಬರು ತಮ್ಮ ತಂದೆ ತಾಯಿ ರಕ್ಷಣೆ ಮಾಡಿದಂತೆ ನದಿಗಳನ್ನೂ ರಕ್ಷಣೆ ಮಾಡಬೇಕಿದೆ. ರೈತರು ನದಿ ಜಾಗ ಅತಿಕ್ರಮಣ ಮಾಡದೆ ರಕ್ಷಣೆಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ನೀರು ಪೋಲು ಮಾಡಬಾರದು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.

Advertisement

ತಾಲೂಕಿನ ಹಿಂಗಣಿ ಗ್ರಾಮದಲ್ಲಿ ಕೆಬಿಜೆಎನ್‌ಎಲ್‌ ವತಿಯಿಂದ ಭೀಮಾ ನದಿಗೆ ಬಾಗಿನ ಅರ್ಪಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ವಾಡಿಕೆ ಮಳೆ ಕಡಿಮೆಯಾಗುತ್ತಲೆ ಬರುತ್ತಿದೆ. ಇಸ್ರೆಲ್‌ ದೇಶದಲ್ಲಿ ವರ್ಷದಲ್ಲಿ
ಕೇವಲ 12-13 ದಿನ ಮಾತ್ರ ಮಳೆಯಾಗುತ್ತದೆ. ಅಷ್ಟೇ ದಿನಗಳಲ್ಲಿ ಆದ ಮಳೆ ನೀರು ಸಂಗ್ರಹಿಸಿ ಅವರು ಬೆಳೆ ಬೆಳೆಯುತ್ತಾರೆ.ಆದ್ದರಿಂದ ನಮ್ಮ ರೈತರೂ ಮಿತವಾಗಿ ನೀರು ಬಳಸಿಕೊಂಡು ಬೆಳೆ ಬೆಳೆಯಬೇಕು ಎಂದು ಕರೆ ನೀಡಿದರು. 

ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆಯಿಂದ ಕಬ್ಬು ನುರಿಸಲು ಪ್ರಾರಂಭಿಸಲಾಗುತ್ತದೆ. ತಾಲೂಕಿನ ರೈತರು ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ತಮ್ಮ ಕಬ್ಬು ನೀಡಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಹಣಮಂತಯ್ಯ ಮಠ ಸಾನ್ನಿಧ್ಯ ವಹಿಸಿದ್ದರು. ಕೆಬಿಜೆಎನ್‌ಎಲ್‌ ಅಧಿಕಾರಿ ಎನ್‌. ಮಹಿಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ತಹಶೀಲ್ದಾರ ಸಂತೋಷ ಮ್ಯಾಗೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಕುಮಾರ ತೊರವಿ, ಕಾಂಗ್ರೆಸ್‌ ಮುಖಂಡರಾದ ಜಟ್ಟೆಪ್ಪ ರವಳಿ, ಶ್ರೀಕಾಂತ ಕುಡಿಗನೂರ, ಭೀಮಣ್ಣ ಕವಲಗಿ, ರುಕುದ್ದಿನ್‌ ತದ್ದೇವಾಡಿ, ಸುಭಾಸ ಕಲ್ಲೂರ, ಮಹಾದೇವ ಪೂಜಾರಿ, ಬಿ.ಬಿ. ಪಾಟೀಲ, ಗುರಣಗೌಡ ಪಾಟೀಲ, ಇಲಿಯಾಸ್‌ ಬೋರಾಮಣಿ, ಪ್ರಕಾಶ ಪ್ಯಾಟಿ, ಕೆಬಿಜೆಎನ್‌ಎಲ್‌ ಅಧಿಕಾರಿ ದಿಕ್ಷಿತ್‌, ಚಂದು ಸೊನ್ನ, ಪ್ರಕಾಶ ಕಟ್ಟಿಮನಿ, ರಮೇಶ ದಾಯಗೋಡೆ, ಪ್ರಶಾಂತ ಕಾಳೆ, ಅಣ್ಣಪ್ಪ ಬಿದರಕೋಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next