Advertisement

ಅರ್ಹರು ಯೋಜನೆ ಉಪಯೋಗಿಸಿಕೊಳ್ಳಿ

06:25 AM May 27, 2020 | Lakshmi GovindaRaj |

ಮೈಸೂರು: ಸೇಫ್ ವ್ಹೀಲ್ಸ್‌ ಮತ್ತು ಭಾರತ್‌ ಅನೌಪಚಾರಿಕ ಉಪಕ್ರಮ(ರಿ) ಆಶ್ರಯದಲ್ಲಿ ಸರ್ಕಾರದಿಂದ ಆಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಸೇವಾ ಸಿಂಧು ಪೋರ್ಟಲ್‌ ಆನ್‌ಲೈನ್‌ ನಲ್ಲಿ ಉಚಿತ ಅರ್ಜಿ ಸಲ್ಲಿಸುವ ಸೇವಾ ಕೇಂದ್ರಕ್ಕೆ  ಸರಸ್ವತಿಪುರಂನಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ದೀಪ  ಬೆಳಗಿಸುವ ಮೂಲಕ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿ, ಸಿಎಂ ಯಡಿಯೂರಪ್ಪ ರಾಜ್ಯದ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಹಾಯ ಧನ  ನೀಡಲು ಈ ಯೋಜನೆ ಜಾರಿಗೊಳಿಸಿದರು. ಅದರಲ್ಲಿ ವಿಶೇಷವಾಗಿ ಆಟೋ, ಕ್ಯಾಬ್‌ ಚಾಲಕರಿಗೆ ಒತ್ತು ನೀಡಲಾಗಿದೆ. ಅವರ ಖಾತೆಗೆ 5 ಸಾವಿರ ರೂ. ಹಣ ಹಾಕುವಂತಹ ಒಂದು ಯೋಜನೆ ಜಾರಿಗೊಳಿಸಿ, ಅದಕ್ಕೆ ಬೇಕಾದ ಮಾಹಿತಿಯನ್ನು  ಸೇವಾ ಸಿಂಧುಗೆ ಅಪ್‌ಲೋಡ್‌ ಮಾಡುವುದಕ್ಕಾಗಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ ಎಂದರು.

ಮೈಸೂರಲ್ಲಿ ಯಾವುದೇ ಸಾವು ನೋವು ಇಲ್ಲದೇ ಕೊರೊನಾ ನಿಯಂತ್ರಣ ಯಶಸ್ವಿಯಾಗಿದೆ. ಜಿಲ್ಲಾಡಳಿತ, ವೈದ್ಯರು, ಪ್ಯಾರಾಮೆಡಿಕಲ, ನರ್ಸಿಂಗ್‌ ಸಿಬ್ಬಂದಿ, ಪೊಲೀಸ್‌, ಆಶಾಕಾರ್ಯಕರ್ತರು ಸೇರಿ  ದಂತೆ ಎಲ್ಲರೂ ಮೈಸೂರನ್ನು ಕೊರೊನಾ ಮುಕ್ತವಾಗಿಸುವಲ್ಲಿ ಶ್ರಮಿಸಿದ್ದಾರೆ. ಮೈಸೂರು ಪ್ರವಾಸೋದ್ಯಮ  ನಂಬಿಕೊಂಡಿದೆ. ವಿಶೇಷ ಪ್ಯಾಕೇಜ್‌ ಬಗ್ಗೆ  ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಹೇಳಿದರು. ಸೇಫ್ ವ್ಹೀಲ್ಸ್‌ ಸ್ಥಾಪಕಾಧ್ಯಕ್ಷ ಬಿ.ಎಸ್‌. ಪ್ರಶಾಂತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next