Advertisement

ಪರಿಹಾರ ಧನ ಬಳಸಿಕೊಳ್ಳಿ: ಪೂರ್ಣಿಮಾ

05:22 AM Jun 21, 2020 | Lakshmi GovindaRaj |

ಮೈಸೂರು: ಅಗಸರು ಹಾಗೂ ಕ್ಷೌರಿಕ ವೃತ್ತಿ ಅವಲಂಭಿಸಿ ಜೀವನ ನಿರ್ವಹಣೆ ಮಾಡುತ್ತಿರುವ ಅಸಂಘಟಿತ ಕಾರ್ಮಿಕರು ಸರ್ಕಾರವು ನೀಡುತ್ತಿರುವ ನೆರವು ಪಡೆಯಲು ನಿಗದಿತ ಸಮಯಕ್ಕೆ ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಅರ್ಜಿಯನ್ನು ಸಲ್ಲಿಸಿ, ಸದುಪಯೋಗ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ತಿಳಿಸಿದರು.

Advertisement

ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡುವ ಸಂಬಂಧ ಶನಿವಾರ ಡೀಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ  ಸಮಿತಿಯ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರದ ನಿಯಮಾನುಸಾರ ಪರವಾನಗಿ ಪಡೆದ ಕ್ಷೌರಿಕ ಹಾಗೂ ಅಗಸ ಸಂಸ್ಥೆಯಲ್ಲಿ ನಾಲ್ವರಿಗಿಂತ ಹೆಚ್ಚು ಕಾರ್ಮಿಕರು ಮತ್ತು ಪರವಾನಗಿ ಪಡಿಯದೇ ಕರ್ತವ್ಯ ನಿರ್ವಹಿಸುತ್ತಿರುವ  ಸಂಸ್ಥೆಯಲ್ಲಿ ಇಬ್ಬರಿಗಿಂತ ಹೆಚ್ಚು ಕಾರ್ಮಿಕರು ಅರ್ಜಿ ಸಲ್ಲಿಸಿದ್ದಲ್ಲಿ,

ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕ್ರಮ ವಹಿಸಲಾಗುತ್ತದೆ ಎಂದರು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್‌.ಆರ್‌ .ನಾಗೇಶ್‌ ಮಾತನಾಡಿ, ನಮ್ಮ ಸಮಾಜದಲ್ಲಿ ಹೆಚ್ಚು ಜನರು ಬಡವರೆ ಆಗಿದ್ದು, ತಮ್ಮ ವೃತ್ತಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಘೋಷಿಸಿರುವ ಪರಿಹಾರವು ಎಲ್ಲಾ ಅರ್ಹ  ಫ‌ಲಾನುಭವಿಗಳಿಗೆ ತಲುಪಿಸಬೇಕೆಂದು ಮನವಿ ಮಾಡಿದರು.

ಕಾರ್ಮಿಕಾಧಿಕಾರಿ ಎಂ.ಎಸ್‌.ಮಂಜುಳಾದೇವಿ, ಹಿರಿಯ ಕಾರ್ಮಿಕ ನಿರೀಕ್ಷಕ ಜಿ.ಬಿ.ವೀಣಾ, ಎಸ್‌. ಶಶಿಧರ, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಶಶಿಕುಮಾರ್‌, ಸವಿತಾ  ಸಮಾಜದ ನಗರ ಕಾರ್ಯದರ್ಶಿ ಹರೀಶ್‌, ಅಶೋಕ್‌, ಮಾಚಿದೇವರ ಸಹಕಾರ ಸಂಘದ ಅಧ್ಯಕ್ಷ ಮೋಹನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next