Advertisement

ಇದ್ದು ಜಯಿಸಬೇಕು ಎಂಬುದಕ್ಕೆ ಮಾದರಿಯಾದ ಉತ್ತಪ್ಪ

02:38 PM Jun 10, 2020 | mahesh |

ಪ್ರತಿಯೋರ್ವರ ಬಾಳಲಿ ಏರುಪೇರುಗಳು, ಕಷ್ಟದ ದಿನಗಳು, ನೋವಿನ ಕ್ಷಣಗಳು ಇದ್ದೇ ಇರುತ್ತೇವೆ. ಆದರೆ ಎದುರಾದ ಸಮಸ್ಯೆಗಳನ್ನು ಮೆಟ್ಟಿ ನಿಂತು ಬದುಕು ಬಂಗಾರ ಮಾಡಿಕೊಂಡರೆ, ಇನ್ನೂ ಕೆಲವರು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಅರಳುವ ಮುನ್ನವೇ ಬಾಡಿ ಹೋಗುತ್ತಾರೆ. ಆದರೆ ಎಲ್ಲ ತೊಂದರೆ, ಸಮಸ್ಯೆ, ಕಷ್ಟಗಳಿಗೆ ಸಾವೇ ಪರಿಹಾರ ಅಲ್ಲ. ಹುಟ್ಟಿಸಿದಾತ ಹುಲ್ಲು ಮೇಯಿಸದೇ ಬಿಡುತ್ತಾನೆಯೇ ಎನ್ನುವಾಗ ಕಷ್ಟಗಳನ್ನು ಕೊಟ್ಟ ದೇವರು ಅದಕ್ಕೆ ಪರಿಹಾರವನ್ನು ನೀಡಿರುತ್ತಾನೆ. ಅದನ್ನು ಅರಿತುಕೊಂಡು ತಾಳ್ಮೆಯಿಂದ ಮುನ್ನುಗ್ಗುವ ಮನಸ್ಥಿತಿ ನಮ್ಮಲ್ಲಿರಬೇಕು ಅಷ್ಟೇ. ಹೀಗೆ ಹುಚ್ಚು ನಿರ್ಧಾರಗಳನ್ನು, ನನಗೆ ಕಾಡುತ್ತಿರುವ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರ ಅಂದುಕೊಂಡು ಬಾಲ್ಕನಿಯಿಂದ ಹಾರಲು ಪ್ರಯತ್ನಪಟ್ಟಿದ್ದೆ ಎಂದು ತಮ್ಮ ಜೀವನದ ಏಳು-ಬೀಳುಗಳನ್ನು ಬಿಚ್ಚಿಟ್ಟದ್ದಾರೆ ಕರ್ನಾಟಕ ಸ್ಟೈಲಿಶ್‌ ಬ್ಯಾಟ್ಸ್‌ಮನ್‌ ಎಂದೇ ಖ್ಯಾತಿ ಗಳಿಸಿರುವ ರಾಬಿನ್‌ ಉತ್ತಪ್ಪ.

Advertisement

ನಾನೋರ್ವ ಸದೃಢ ಮನುಷ್ಯನಾಗಿದ್ದೇನೆ
2006ರಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತವನ್ನು ಪ್ರತಿನಿಧಿಸುವ ಮೂಲಕ ಕ್ರಿಕೆಟ್‌ ಲೋಕಕ್ಕೆ ಪಾದಾರ್ಪಣೆ ಮಾಡಿದ ಉತ್ತಪ್ಪ ಇಲ್ಲಿಯವರೆಗೆ 46 ಏಕದಿನ ಮತ್ತು 13 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್‌ ಜೀವನಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸಾಕಷ್ಟು ನೋವು-ನಲಿವು, ಏಳು-ಬೀಳುಗಳನ್ನು ಎದುರಿಸಿದ್ದು, ಸಾಕಷ್ಟು ಹುಳಿ ಪೆಟ್ಟುಗಳನ್ನು ತಿಂದು ಇದು ಒಂದು ಅದ್ಭುತ ಶಿಲೆಯಾಗಿದ್ದಾರೆ. ಇನ್ನು ಈ ಕುರಿತು ಸ್ವತಃ ಒಂದು ಸಂದರ್ಶನಲ್ಲಿ ಹೇಳಿಕೊಂಡಿರುವ ಉತ್ತಪ್ಪ 2006ರಲ್ಲಿ ನಾನು ಮೊದಲ ಪಂದ್ಯ ಎದುರಿಸುವಾಗ ನನ್ನ ಬಗ್ಗೆ , ನನ್ನ ಸಾಮರ್ಥ್ಯದ ಬಗ್ಗೆ ನನಗೆ ಅಷ್ಟೊಂದು ತಿಳಿದಿರಲಿಲ್ಲ . ಆದರೆ ಈಗ ನನ್ನ ಜೀವನದಲ್ಲಿನ ನಕಾರಾತ್ಮಕ ಸಂದರ್ಭಗಳನ್ನು ನನ್ನನ್ನು ಗಟ್ಟಿಗೊಳಿಸಿದ್ದು, ಎದುರಾದ ಕಷ್ಟಗಳನ್ನು ದಿಟ್ಟಿಸುವ ಮೂಲಕ ನಾನೋರ್ವ ಸದೃಢ ಮನುಷ್ಯನಾಗಿದ್ದೇನೆ ಎನ್ನುತ್ತಾರೆ ಉತ್ತಪ್ಪ.

ಆತ್ಮಹತ್ಯೆ ಮುಂದಾಗಿದ್ದ ಸ್ಟೈಲೀಶ್‌ ಬ್ಯಾಟ್ಸ್‌ಮೆನ್‌
2009 ರಿಂದ 2011ರವರೆಗೆ ಸಾಕಷ್ಟು ಏರಿಳಿತಗಳನ್ನು ಎದುರಿಸಿದ್ದ ರಾಬಿನ್‌ ಪ್ರತಿನಿತ್ಯವೂ ಆತ್ಮಹತ್ಯೆಯ ಕುರಿತು ಆಲೋಚನೆ ಮಾಡುತ್ತಿದರಂತೆ. ಅವರ ಮನಸ್ಥಿತಿ ಎಷ್ಟರ ಮಟ್ಟಿಗೆ ಹದೆಗೆಟ್ಟಿತ್ತು ಎಂದರೆ ಕ್ರಿಕೆಟ್‌ ನನ್ನ ಸರ್ವಸ್ವ ಎಂದು ಆರಾಧಿಸುತ್ತಿದ್ದ ಆ ದಿನಗಳಲ್ಲಿ ಕ್ರಿಕೆಟ್‌ ಬಗ್ಗೆಯೂ ಹೆಚ್ಚು ಆಲೋಚಿಸುತ್ತಿರಲಿಲ್ಲ. ಸಂಪೂರ್ಣವಾಗಿ ತನ್ನ ಜೀವನದಲ್ಲಿ ಏನಾಗುತ್ತಿದೆ, ಎತ್ತ ಸಾಗುತ್ತಿದೆ, ಈ ಸಂಕಷ್ಟಗಳ ದಿನವನ್ನು ಕಳೆಯುವುದು ಹೇಗೆ? ಎಂಬಿತ್ಯಾದಿ ಯೋಚನೆಗಳು ಕಾಡುತ್ತಿತ್ತಂತೆ. ಕ್ರಿಕೆಟ್‌ ಇಲ್ಲದಿದ್ದ ಸಮಯದಲ್ಲಿ ಕಾಲ ಕಳೆಯುವುದು ತುಂಬಾ ಕಷ್ಟವಾಗುತ್ತಿತ್ತು. ಒಂದು ದಿನ ಒಂದು ಓಡಿ ಬಾಲ್ಕನಿಯಿಂದ ಜಿಗಿದು ಬಿಡುವ ಆಲೋಚನೆಯನ್ನೂ ಮಾಡಿದ್ದರಂತೆ. ಆದರೂ ಅದೆನೆಲ್ಲ ಮೆಟ್ಟಿನಿಂತು ಭವಿಷ್ಯದ ಕೇಂದ್ರಿಕರಿಸಿದ್ದರ ಪರಿಣಾಮ ಇಂದು ಉತ್ತಮ ಆಟಗಾರನ್ನಾಗಿ ಗಕ್ಷಿುರುತಿಸಿಕೊಂಡಿದ್ದಾರೆ. ಹೇಗೋ ಅಂತಹ ದುಡುಕಿನ ನಿರ್ಧಾರಗಳಿಂದ ತನ್ನನ್ನು ತಾನೇ ತಡೆದು ನಿಲ್ಲಿಸಿದ್ದು, ವೃತ್ತಿ ಜೀವನದಲ್ಲಿನ ಏರಿಳಿತಗಳಿಂದ ಆ ಘಟನೆಗಳಿಂದ ಹೊರಬಂದು ಯೋಚಿಸಿದ್ದಕ್ಕಾಗಿ ಇಂದಿಗೂ ಉತ್ತಪ್ಪ ಜೀವಂತವಾಗಿದ್ದಾರೆ.

ಹೀಗೆ ಪ್ರತಿಯೋರ್ವರ ಬಾಳಿನಲ್ಲಿ ಜೀವನದ ಕಹಿ ನೆನಪುಗಳು, ಕ್ಲಿಷ್ಟಕರ ಸನ್ನಿವೇಶಗಳ ಮೂಲಕ ಕಲಿತ ಪಾಠಗಳು ಜೀವನದ ಹಾದಿಯನ್ನು ಬದಲಿಸಿ ಇನ್ನಷ್ಟು ಬಲಿಷ್ಠನಾಗಲು ಸಹಾಯ ಮಾಡುತ್ತದೆ. ಯಶಸ್ವಿ ಬದುಕನ್ನು ಸಾಗಿಸಲು ಹಲವಾರು ಕಠಿನ ಸನ್ನಿವೇಶಗಳು ನಮ್ಮಮ್ಮ ವ್ಯಕ್ತಿತ್ವದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಹಕರಿಸುತ್ತದೆ. ಇಂತಹದೇ ಸನ್ನಿವೇಶಗಳು ರಾಬಿನ್‌ ಬಾಳಲ್ಲಿ ಎದುರಾಗಿದ್ದು, ಅದರಿಂದ ಹೊರ ಬರುವುದೇಗೆ ಎಂದು ಪ್ರಯತ್ನಿಸಿದ್ದರ ಪರಿಣಾಮ ಓರ್ವ ಯಶಸ್ವಿ ಮನುಷ್ಯನನ್ನಾಗಿ ಗುರುತಿಸಿಕೊಂಡಿದ್ದಾರೆ. ಅದಲ್ಲದೆ, ಜೀವನದಲ್ಲಿನ ನಕಾರಾತ್ಮಕ ಅನುಭವಗಳು ಜೀವನದ ಮೇಲೆ 2 ರೀತಿಯ ಪರಿಣಾಮಗಳನ್ನು ಬೀರುತ್ತದೆ. ಅದನ್ನು ಹೇಗೆ ಸ್ವೀಕರಿಸುತ್ತೇವೆ ಅನ್ನುವುದು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಜೀವಮಾನದ ಪ್ರತಿಯೊಂದು ಅನುಭವಗಳು ಸರ್ವಶಕ್ತ ವ್ಯಕ್ತಿಯಾಗಿ ರೂಪಿಸಿಲು ಸಹಕಾರಿಯಾಗುತ್ತದೆ. ಹಾಗಾಗಿ ನಕಾರಾತ್ಮಕ ಅನುಭವದ ಬಗ್ಗೆ ಯಾವುದೇ ಪಶ್ಚಾತ್ತಾಪ ಪಡದೇ ಅವುಗಳನ್ನು ಸಕಾರಾತ್ಮಕವಾಗಿ ಅಭಿವೃದ್ಧಿ ಹೊಂದಲು ಬಳಸಿಕೊಳ್ಳಬಹುದು ಎಂಬುದಕ್ಕೆ ರಾಬಿನ್‌ ಉತ್ತಪ್ಪವರ ರಾಜಸ್ಥಾನ್‌ ರಾಯಲ್ಸ್‌ ತಂಡದ ಫೌಂಡೇಷನ್‌ “ಮೈಂಡ್‌,ಬಾಡಿ ಮತ್ತು ಸೋಲ್‌’ನ ವಿಶೇಷ ಕಾರ್ಯಕ್ರಮದಲ್ಲಿ ನೀಡಿದ ಸಂದರ್ಶನವೇ ಸಾಕ್ಷಿ.

– ಚಿರಂತ್‌ ಜೈನ್‌, ಹಾಸನ

Advertisement
Advertisement

Udayavani is now on Telegram. Click here to join our channel and stay updated with the latest news.

Next