ನಾನು 20 ವರ್ಷಗಳಿಂದ ಸ್ತ್ರೀರೋಗ ಶಾಸ್ತ್ರ ವಿಭಾಗದಲ್ಲಿ ವೃತ್ತಿಪರ ಳಾಗಿದ್ದೇನೆ, ಆದರೆ ಮಹಿಳೆಯ ಆರೋಗ್ಯದ ವಿಚಾರಕ್ಕೆ ಬಂದರೆ ಏನೂ ಬದಲಾಗಿಲ್ಲ ಎಂದನ್ನಿಸುತ್ತದೆ. ಅನಾದಿ ಕಾಲದಿಂದ ಸ್ತ್ರೀಯ ಆರೋಗ್ಯವನ್ನು ಕಡೆಗಣಿಸುತ್ತ ಬರಲಾಗಿದೆ; ಆದರೆ ಪ್ರಸ್ತುತ 21ನೇ ಶತಮಾನದಲ್ಲಿ ಆಕೆ ಶಿಕ್ಷಣ, ಉದ್ಯೋಗಾವಕಾಶಗಳು, ರಾಜಕೀಯ, ಆಲೋಚನೆಗಳ ಅಭಿವ್ಯಕ್ತಿ – ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿಸಮಾನಳಾಗಿ ಮುನ್ನಡೆಯುತ್ತಿದ್ದಾಳೆ. ಹಾಗಾದರೆ ಆಕೆಯ ಆರೋಗ್ಯ ಮತ್ತು ಆಕೆಯನ್ನು ಕಾಡುವ ಅನಾರೋಗ್ಯಗಳ ವಿಚಾರದಲ್ಲಿಯೂ ಇದೇ ರೀತಿಯ ಪರಿಗಣನೆ ಬೇಡವೇ? ಮಹಿಳೆಯರ ಆರೋಗ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಉಂಟುಮಾಡುವುದಕ್ಕಾಗಿ ಲೇಖನಗಳು, ಪುಸ್ತಕಗಳು ಪ್ರಕಟವಾಗುತ್ತವೆ. ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಕ್ರಿಯಾತ್ಮಕ ವಿಚಾರಗಳನ್ನು ಪ್ರಕಟಿಸುವುದಕ್ಕೆ ಅಸಾಧಾರಣವಾಗಿ ಶ್ರಮಿಸಲಾಗುತ್ತಿದೆ. ಮಹಿಳೆಯರ ಆರೋಗ್ಯ ಮತ್ತಿತರ ವಿಚಾರಗಳ ಬಗ್ಗೆ ನಾಚಿಕೆಪಟ್ಟುಕೊಳ್ಳಬಾರದು ಎಂಬ ಅರಿವನ್ನು ಸಮಾಜದಲ್ಲಿ ಮೂಡಿಸುವುದಕ್ಕಾಗಿ ಸಿನೆಮಾಗಳನ್ನು ತಯಾರಿಸಿ ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ.
Advertisement
ದುರದೃಷ್ಟವಶಾತ್, ನಾವೆಲ್ಲರೂ ನಮ್ಮ ಪ್ರಯತ್ನಗಳನ್ನು ಒಗ್ಗೂಡಿಸಿ ಮಹಿಳೆಯರ ಋತುಚಕ್ರದ ಬಗ್ಗೆ ಇರುವ ಮೂಢನಂಬಿಕೆಗಳು, ಗರ್ಭಧಾರಣೆ ಮತ್ತು ಶಿಶು ಜನನಕ್ಕೆ ಸಂಬಂಧಿಸಿದ ತಪ್ಪುಕಲ್ಪನೆಗಳನ್ನು ದೂರ ಮಾಡುವ ಹೋರಾಟದಲ್ಲಿ ಜಯ ಸಾಧಿಸಿದ್ದೇವೆ ಎಂದುಕೊಳ್ಳು ವಾಗಲೇ ಅಜ್ಞಾನದ ಪಿಶಾಚಿ ಮತ್ತೆ ಗವಾಕ್ಷಿಯಲ್ಲಿ ಇಣುಕುತ್ತಾ, “ನಾನು ಇಲ್ಲೇ ಇದ್ದೇನೆ…’ ಎನ್ನುತ್ತದೆ.
Related Articles
Advertisement
ಪೆಲ್ವಿಕ್ ಆರ್ಗನ್‌ಗಳ ಜಾರುವಿಕೆ ಮಹಿಳೆಯರನ್ನು ಬಾಧಿಸುವ ಒಂದು ಸಾಮಾನ್ಯ ಅನಾರೋಗ್ಯ ಸ್ಥಿತಿ. ಸಾಮಾನ್ಯವಾಗಿ ಇದು ಜೀವಾಪಾಯಕ್ಕೆ ಕಾರಣ ವಾಗುವುದಿಲ್ಲವಾದರೂ ಅದು ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ. ಆರಂಭಿಕ ಹಂತಗಳಲ್ಲಿ ಇದನ್ನು ಪತ್ತೆ ಮಾಡಿದರೆ ತುಂಬಾ ಸರಳವಾಗಿ ಚಿಕಿತ್ಸೆ ನೀಡಬಹುದು. ನಿಮ್ಮ ತಾಯಿಯ ಜತೆ, ನಿಮ್ಮ ಪತ್ನಿಯ ಜತೆಗೆ, ನಿಮ್ಮ ಅಜ್ಜಿಯ ಜತೆಗೆ, ನಿಮ್ಮ ಚಿಕ್ಕಮ್ಮ/ಅತ್ತೆ ಮತ್ತಿತರರ ಜತೆಗೆ ಇಂತಹ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ, ಅವರು ಹಿಂಜರಿಕೆಯಿಲ್ಲದೆ ಇಂತಹ ವಿಚಾರಗಳನ್ನು ಹಂಚಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಿ.ಯಾಕೆಂದರೆ, ಆಗಲೇ ಹೇಳಿದಂತಹ ರತ್ನಾ ಅವರಲ್ಲೊಬ್ಬರೂ ಆಗಿರಬಹುದು… ಮಲ್ಟಿ ಆರ್ಗನ್ ಪ್ರೊಲ್ಯಾಪ್ಸ್
ಗರ್ಭಕೋಶ, ಮೂತ್ರಕೋಶ, ಮೂತ್ರನಾಳ, ದೊಡ್ಡಕರುಳಿನ ಕೊನೆಯ ಭಾಗ, ಗುದದ್ವಾರ ಇತ್ಯಾದಿ ಬಹು ಅಂಗಗಳು ಒಟ್ಟಾಗಿ ಜಾರುವ ಅನಾರೋಗ್ಯ ಸ್ಥಿತಿಯನ್ನು ಮಲ್ಟಿ ಆರ್ಗನ್ ಪ್ರೊಲ್ಯಾಪ್ಸ್ ಅಥವಾ ಬಹು ಅಂಗ ಜಾರುವಿಕೆ ಎನ್ನುತ್ತಾರೆ. ಮುಂದುವರಿದ ಹಂತಗಳಲ್ಲಿ ಪತ್ತೆಯಾದಾಗ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಮತ್ತು ಅಂಗಗಳ ಕಾರ್ಯಚಟುವಟಿಕೆಗಳನ್ನು ಪುನರ್‌ಸ್ಥಾಪಿಸಲು ಮಹಿಳೆಯನ್ನು ತಜ್ಞ ಆರೋಗ್ಯ ಸೌಲಭ್ಯಗಳುಳ್ಳ ಆಸ್ಪತ್ರೆಗಳಿಗೆ ಕಳುಹಿಸಬೇಕು. ಆಧುನಿಕ ಯುರೊಗೈನಕಾಲಜಿಯಲ್ಲಿ ಜಾರುವಿಕೆಗೆ ಚಿಕಿತ್ಸೆಯಾಗಿ ಗರ್ಭಕೋಶವನ್ನೇ ತೆಗೆದುಬಿಡುವ ವಿಧಾನ ಬಹು ಚರ್ಚೆಯಲ್ಲಿದೆ. ಜಾರುವಿಕೆಯ ರೋಗಶಾಸ್ತ್ರವನ್ನು ಪರಿಗಣಿಸಿ ಹೇಳುವುದಾದರೆ ಗರ್ಭ ಕೋಶವು ಯಾವುದೇ ಪಾತ್ರವಿಲ್ಲದ ಅಂಗವಾಗಿದ್ದು, ಗರ್ಭಕೋಶವನ್ನು ಉಳಿಸಿಕೊಳ್ಳುವುದು ಕಾಯಿಲೆ ಪುನರಾವರ್ತನೆಯಾಗದಂತೆ ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಪಾತ್ರ ವಹಿಸುತ್ತದೆ. ಆಧುನಿಕಗೊಂಡಿರುವ ಯುರೊಗೈನಕಾಲಜಿಯಲ್ಲಿ ಅಂಗಗಳು ಜನನಾಂಗದ ಮೂಲಕ ಜಾರದಂತೆ ತಡೆಯುವುದಕ್ಕೆ ಸಹಾಯ ಮಾಡುವ ಹಲವು ಉಪಕರಣಗಳಿವೆ. ಆದ್ದರಿಂದ ಸಮಸ್ಯೆಯೇನಿದ್ದರೂ ಹಿಂಜರಿಕೆ, ಸಂಕೋಚ ಇಲ್ಲದೆ ನಿಮ್ಮ ವೈದ್ಯರ ಜತೆಗೆ ಮುಕ್ತವಾಗಿ ಹಂಚಿಕೊಳ್ಳಿ. ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಗರ್ಭಕೋಶ ಜಾರುವಿಕೆ ಅಥವಾ ಪ್ರೊಲ್ಯಾಪ್ಸ್ ಎಂದರೆ ಏನು?
ಗರ್ಭಕೋಶ ಜಾರುವಿಕೆ, ಪ್ರೊಲ್ಯಾಪ್ಸ್ ಅಥವಾ ಯುಟೆರೊ ವೆಜೈನಲ್ ಪ್ರೊಲ್ಯಾಪ್ಸ್ ಅಥವಾ ಪೆಲ್ವಿಕ್ ಆರ್ಗನ್ ಪ್ರೊಲ್ಯಾಪ್ಸ್ – ಇದು ಋತುಚಕ್ರಬಂಧಕ್ಕೆ ಒಳಗಾಗಿರುವ ಅಥವಾ ಆ ಸ್ಥಿತಿ ಯನ್ನು ಮುಟ್ಟುವ ವಯಸ್ಸಿನ ಮಹಿಳೆಯರಲ್ಲಿ ಬಹಳ ಸಾಮಾನ್ಯ ವಾಗಿ ಕಂಡುಬರುವ ಅನಾರೋಗ್ಯ ಸ್ಥಿತಿ. ಜಾಗತಿಕ ಅಂಕಿ ಅಂಶಗಳ ಪ್ರಕಾರ, 50 ವರ್ಷ ವಯಸ್ಸಿಗಿಂತ ಹಿರಿಯರಾದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ಪೆಲ್ವಿಕ್ ಆರ್ಗನ್ ಪ್ರೊಲ್ಯಾಪ್ಸ್‌ನ ಕೆಲವು ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ 80 ವರ್ಷ ವಯಸ್ಸಿನ ಹೊತ್ತಿಗೆ ಪ್ರತೀ ಹತ್ತರಲ್ಲಿ ಒಬ್ಬರು ಮಹಿಳೆಗೆ ಗರ್ಭಕೋಶ ಜಾರು ವಿಕೆಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುತ್ತದೆ. ಮುಂದಿನ ವಾರಕ್ಕೆ -ಡಾ| ದೀಕ್ಷಾ ಪಾಂಡೆ
ಡಾ| ಸುನಯಾ ಪುರಾಣಿಕ್
ಡಾ| ವಿವಲ್ ವೆನಿಸಾ ಲೊಬೊ
ಡಾ| ಶ್ರೀಪಾದ ಹೆಬ್ಟಾರ್
ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ