Advertisement

ಬಾಯ್ತಪ್ಪಿ ಆಡಿದ ಮಾತು: ಖಾದರ್‌

02:56 PM Mar 01, 2017 | Harsha Rao |

ಮಂಗಳೂರು: ಕೇರಳದ ಮುಖ್ಯಮಂತ್ರಿಯವರು ಮಂಗಳೂರಿಗೆ ಆಗಮಿಸಿದ ಸಂದರ್ಭ ಇಲ್ಲಿ ನಡೆದ ವಿದ್ಯಮಾನಗಳನ್ನು ಕಂಡು ನೋವು ವ್ಯಕ್ತಪಡಿಸುವ ಸಂದರ್ಭದಲ್ಲಿ ನಾನಾಡಿದ ಒಂದು ಶಬ್ದ ನನ್ನ ಬಾಯ್ತಪ್ಪಿನಿಂದ ಬಂದಿದೆ. ನನ್ನಿಂದ ಇಂತಹ ಶಬ್ದ ಬರಬಾರದಿತ್ತು ಎಂಬುದು ನನ್ನ ಭಾವನೆಯಾಗಿದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಹರತಾಳಕ್ಕೆ ಕರೆ ನೀಡಿರುವ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಟೀಕಿಸುತ್ತಾ ಚಪ್ಪಲಿ ಶಬ್ದ ಬಳಸಿ ನೀಡಿರುವ ಹೇಳಿಕೆ ಬಗ್ಗೆ ನಗರದ ಸಕೀìಟ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್‌, ನಾನು ಯಾವುದೇ ಸಂಘಟನೆ, ಧರ್ಮಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಯಾರಿಗೂ ನೋವುಂಟು ಮಾಡುವ ಉದ್ದೇಶವೂ ನನಗಿಲ್ಲ. ಸಂವಿಧಾನಕ್ಕೆ ವಿರುದ್ಧವಾದ ಕೆಲಸಗಳನ್ನು ಮಾಡುವವರಿಗೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ನನ್ನ ನೋವು ವ್ಯಕ್ತಪಡಿಸುವ ಭರದಲ್ಲಿ ನನ್ನಿಂದ ಒಂದು ಶಬ್ದ ತಪ್ಪಿ ಬಂದಿತ್ತು ಎಂದರು.

ಜನರಿಂದ ಚುನಾಯಿತರಾದ, ಸಂವಿಧಾನಬದ್ಧವಾಗಿ ಆಯ್ಕೆಯಾದ ಮುಖ್ಯಮಂತ್ರಿಯವರು ನಮ್ಮ ಜಿಲ್ಲೆಗೆ ಬರುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುವುದು ಸಂವಿಧಾನ ವಿರೋಧಿಯಾಗಿದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಕಚೇರಿಗೆ ಬೆಂಕಿ ಹಾಕುವುದು, ಬಸ್‌ಗಳಿಗೆ ಕಲ್ಲು ತೂರುವುದು, ಫ್ಲೆಕ್ಸ್‌ಗಳನ್ನು ಹೊತ್ತಿಸುವುದು ಮುಂತಾದ ಕೃತ್ಯಗಳನ್ನು ನಡೆಸುವುದು ಸರಿಯಲ್ಲ. ಇದು ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ತರುತ್ತದೆ. ಇದು ನನಗೆ ನೋವು ತಂದಿದೆ ಎಂದರು. 

ಸೌಹಾರ್ದ ರ್ಯಾಲಿಯಲ್ಲಿ ಕೂಡ ಹಾಕಿರುವ ಕೆಲವು ಘೋಷಣೆಗಳು ನನ್ನ ಗಮನಕ್ಕೆ ಬಂದಿವೆ. ಈ ರೀತಿಯ ಘೋಷಣೆಗಳು ಸರಿಯಲ್ಲ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next