Advertisement
ಆ ವರ್ಷ ಒಟ್ಟು ಮೂರು ಬಾರಿ ಮಂಗಳೂರಿಗೆ ಜಾಕೀರ್ ಭೇಟಿ ನೀಡಿ ದ್ದರು. ಅದೇ ವರ್ಷ ಅವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಅವರು ತಮ್ಮ ತಬಲಾ ವಾದನದ ಮೂಲಕ ಶ್ರೋತೃ ಗಳನ್ನು ಮಂತ್ರಮುಗ್ಧಗೊಳಿಸಿದ್ದರು.
Related Articles
Advertisement
ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪರ್ಯಾಯ 2016-17ರಲ್ಲಿ ಉಡು ಪಿಗೆ ಆಗಮಿಸಿದ್ದ ಅವರು ರಾಜಾಂ ಗಣದಲ್ಲಿ ಹಿರಿಯ ಕಲಾವಿದ ಕುಮರೇಶ್ ಅವರ ಪಿಟೀಲು, ಜಯಂತಿ ಕುಮರೇಶ್ ಅವರ ವೀಣೆ ವಾದನಕ್ಕೆ ತಬಲದ ಸಾಥ್ ನೀಡಿದ್ದರು.
1984ರಲ್ಲಿ ಉಡುಪಿ ಸಂಗೀತ ಸಭಾದಿಂದ ಮಣಿಪಾಲದಲ್ಲಿ ನಡೆದಿದ್ದ ಐಟಿಸಿ ಮ್ಯೂಸಿಕ್ ಫೆಸ್ಟ್‌ನಲ್ಲಿ ಮೊದಲ ಬಾರಿಗೆ ಉಡುಪಿಗೆ ಆಗಮಿಸಿ ಭಾಗವಹಿ ಸಿದ್ದರು. ಹರಿಪ್ರಸಾದ ಚೌರಾಸಿ ಯಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
1986ರ ಸಂಗೀತ ಸಭಾ ಕಾರ್ಯಕ್ರಮ, 1997ರಲ್ಲಿ ಎಂಜಿಎಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ತಮ್ಮ ಫೈಜಲ್ ಕುರೇಶಿ ಅವರೊಂದಿಗೆ ಕಾರ್ಯಕ್ರಮ ನೀಡಿದ್ದರು. ಮುಕುಂದ ಕೃಪಾ ಶಾಲಾವರಣದಲ್ಲಿ ಇರುವ ಸಂಗೀತ ಸಭಾದ ಶಾಲೆಗೂ ಭೇಟಿ ನೀಡಿ ಮಕ್ಕಳ ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಣಿಪಾಲದ ಪೈ ಕುಟುಂಬದವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಜಾಕೀರ್ ಹುಸೇನ್ ಅವರು ಟಿಎಂಎ ಪೈ ಅವರ ಪುತ್ರರಾದ ಟಿ. ಮೋಹನದಾಸ್ ಪೈ ಮತ್ತು ಟಿ. ಪಾಂಡುರಂಗ ಪೈ ಅವರ ಮನೆಗೂ ಭೇಟಿ ನೀಡಿದ್ದರು.
ಜಿಎಸ್‌ಬಿ ಶೈಲಿ ಊಟಕ್ಕೆ ವಾವ್ಕಾರ್ಕಳ ಸಂಗೀತ ಸಭಾ ಸಂಸ್ಥೆ ವತಿಯಿಂದ ನಡೆದ “ಪಂಚಮ ಇಂಚರ’ ಕಾರ್ಯಕ್ರಮದಲ್ಲಿ 1997 ಫೆ.4ರಂದು ಸಂಗೀತ ಕಾರ್ಯಕ್ರಮ ನೀಡಿ ಸಂಗೀತ ಪ್ರಿಯರನ್ನು ರಂಜಿಸಿದ್ದರು. ಅಂದು ಮಧ್ಯಾಹ್ನ ಜಿಎಸ್‌ಬಿ ಶೈಲಿ ಉಪ್ಕರಿ, ದಾಲ್ ತೋವೆ, ಪತ್ರೊಡೆ, ಜಿ ಗುಜ್ಜೆ ಖಾದ್ಯವನ್ನು ಸವಿದ ಅವ ರು ಸಂಜೆಯು ಇದೇ ಜಿಎಸ್‌ಬಿ ಶೈಲಿಯ ಊಟವೇ ಇರಲಿ ಎಂದು ಬಯಕೆ ವ್ಯಕ್ತಪಡಿಸಿ, ರಾತ್ರಿ ಇಲ್ಲಿಯೇ ಊಟ ಮಾಡಿ ಪತ್ರೊಡೆ ಯನ್ನು ಪಾರ್ಸೆಲ್ ಪಡೆದುಕೊಂಡಿದ್ದರು. ಜಾಕೀರ್ ಹುಸೇನ್ ಅವರಿಗೆ ಅಂದು ವಯೋಲಿನ್‌ನಲ್ಲಿ ಜಿ. ಟಿ. ಗೋಪಾಲ ಕೃಷ್ಣ, ಹಾರ್ಮೋನಿಯಂನಲ್ಲಿ ಸುಧೀರ್ ನಾಯಕ್, ಕಾರ್ಕಳದ ಮೀರಾ ಶೆಣೈ ಸಾಥ್ ನಿಡಿ ಸಹಕರಿಸಿದ್ದರು. ಸಂಗೀತ ಕೇಳಲು ಸಾವಿ ರಾರು ಮಂದಿ ಸೇರಿ ದ್ದರು. ಕಾರ್ಯ ಕ್ರಮದಲ್ಲಿ ಪಂಚಮ ಇಂಚರ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು.