Advertisement

ಭವಿಷ್ಯದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್‌ಗಳ ಓಟ!

12:16 AM Jun 22, 2021 | Team Udayavani |

ಕಿಂಗ್‌ಸ್ಟನ್‌ (ಜಮೈಕಾ) : “ಫಾದರ್ ಡೇ’ಯಂದೇ ವಿಶ್ವದ ಅತೀ ವೇಗದ ಓಟಗಾರ ಉಸೇನ್‌ ಬೋಲ್ಟ್ ಸಿಹಿ ಸುದ್ದಿಯೊಂದನ್ನು ಬಿತ್ತರಿಸಿದ್ದಾರೆ. ಅವಳಿ ಗಂಡು ಮಕ್ಕಳ ತಂದೆಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

Advertisement

“ನನ್ನ ಹೆಂಡತಿ ಕ್ಯಾಸಿ ಬೆನೆಟ್‌ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾಳೆ’ ಎಂದು ಬೋಲ್ಟ್ ಪೋಸ್ಟ್‌ ಮಾಡಿದ್ದಾರೆ. ಜತೆಗೆ ಈ ಅವಳಿಗಳ ಹೆಸರನ್ನೂ ಹೇಳಿದ್ದಾರೆ. ಒಬ್ಬ ಥಂಡರ್‌ ಬೋಲ್ಟ್, ಮತ್ತೂಬ್ಬ ಸೆಂಟ್‌ ಲಿಯೋ ಬೋಲ್ಟ್.
ಬೋಲ್ಟ್ ದಂಪತಿಗೆ “ಒಲಿಂಪಿಯಾ ಲೈಟ್ನಿಂಗ್‌ ಬೋಲ್ಟ್’ ಹೆಸರಿನ ಮಗಳೂ ಇದ್ದಾಳೆ.

2040ರ ಒಲಿಂಪಿಕ್ಸ್‌ನಲ್ಲಿ ಓಟ!
ಉಸೇನ್‌ ಬೋಲ್ಟ್ ಅವಳಿ ಗಂಡು ಮಕ್ಕಳ ತಂದೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸ್ವಾರಸ್ಯಕರ ಪ್ರತಿಕ್ರಿಯೆ ಗಳು ಹರಿದು ಬಂದಿವೆ. “ಭವಿಷ್ಯದ ಟ್ರ್ಯಾಕ್‌ನಲ್ಲಿ ಅವಳಿ ಬೋಲ್ಟ್ ಗಳ ಓಟ’ ಎಂಬುದು ಇವುಗಳಲ್ಲೊಂದು.

ಇದನ್ನೂ ಓದಿ :Kingston, 

ಹಾಗೆಯೇ, “2040ರ ಒಲಿಂಪಿಕ್ಸ್‌ನಲ್ಲಿ ಥಂಡರ್‌ ಬೋಲ್ಟ್ ಮತ್ತು ಸೇಂಟ್‌ ಲಿಯೋ ಬೋಲ್ಟ್ ಪುರುಷರ 100 ಮೀ. ಓಟದ ಫೈನಲ್‌ನಲ್ಲಿ ಓಡುವುದನ್ನು, ಒಲಿಂಪಿಯಾ ಲೈಟ್ನಿಂಗ್‌ ಬೋಲ್ಟ್ 200 ಮೀ. ಫೈನಲ್‌ನಲ್ಲಿ ಓಡುವುದನ್ನು ಕಲ್ಪಿಸಿಕೊಳ್ಳಿ’ ಎಂಬುದು ಕಚಗುಳಿ ಇಡುವ ಇನ್ನೊಂದು ಪೋಸ್ಟ್‌!

Advertisement
Advertisement

Udayavani is now on Telegram. Click here to join our channel and stay updated with the latest news.

Next