Advertisement

ಆಸ್ಟ್ರೋ ಮೋಹನ್‌ಗೆ ಯುಎಸ್‌ಪಿಎ ಗೌರವ ಫೆಲೋಶಿಪ್‌

11:28 AM Jul 20, 2020 | mahesh |

ಉಡುಪಿ: ಅಮೆರಿಕದ ಯುನೈಟೆಡ್‌ ಸ್ಟೇಟ್ಸ್‌ ಫೋಟೋಗ್ರಾಫ‌ರ್ ಅಲಿಯನ್ಸ್‌ (ಯುಎಸ್‌ಪಿಎ) ಸಂಸ್ಥೆ 2020 ಸಾಲಿನ ಗೌರವ ಫೆಲೋಶಿಪ್‌ ಅನ್ನು ಪ್ರಕಟಿಸಿದ್ದು ಉದಯವಾಣಿಯ ಹಿರಿಯ ಪತ್ರಿಕಾ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್‌ ಅವರಿಗೆ ಗೌರವ ಫೆಲೋಶಿಪ್‌ ಲಭಿಸಿದೆ.

Advertisement

ಎರಡು ವರ್ಷಗಳ ಹಿಂದೆ ಅಮೆರಿಕದ ಇಮೇಜ್‌ ಕೊಲೀಗ್‌ ಸೊಸೈಟಿಯಿಂದ ಮಾಸ್ಟರ್‌ ಪದವಿ ಪಡೆದಿದ್ದ ಆಸ್ಟ್ರೊ ಮೋಹನ್‌ ಅವರು ತಮ್ಮ ಛಾಯಾಚಿತ್ರ ಪತ್ರಿಕೋದ್ಯಮದ ರಜತ ಸಂಭ್ರಮವನ್ನು ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಚಿತ್ರ ಪ್ರದರ್ಶನ ಮತ್ತು ತರಬೇತಿ ಮೂಲಕ ಆಚರಿಸಿದ್ದರು.

5 ಪುಸ್ತಕಗಳ ಗ್ರಂಥಕರ್ತರೂ ಆಗಿರುವ ಆಸ್ಟ್ರೊ ಮೋಹನ್‌ ಕೆನಾನ್‌ ಕೆಮರಾ ಸಂಸ್ಥೆಯ ಅಧಿಕೃತ ತರಬೇತಿದಾರರೂ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next