Advertisement

AI News: ಅನ್ಯಗ್ರಹ ಜೀವಿ ಪತ್ತೆಗೆ ಎಐ ಬಳಕೆ

08:21 PM Sep 29, 2023 | Team Udayavani |

ಭೂಮಿ ಮೇಲಿನ ಬಹುತೇಕ ಕೆಲಸ-ಕಾರ್ಯಗಳಿಗೆ ಮಾತ್ರವಲ್ಲದೇ, ಅಂತರಿಕ್ಷದತ್ತಲೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ಕೃತಕ ಬುದ್ಧಿಮತ್ತೆ ತಯಾರಾಗಿದೆ. ಇದೇ ಉದ್ದೇಶದ ಭಾಗವಾಗಿ ಅಮೆರಿಕದ ವಿಜ್ಞಾನಿಗಳು ಅನ್ಯಗ್ರಹಗಳಲ್ಲಿನ ಜೀವಿಗಳ ಪತ್ತೆಗಾಗಿ ಎಐ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಜಾರ್ಜ್‌ ಮೇಸನ್‌ ವಿವಿಯ ಸಂಶೋಧಕ ರಾಬರ್ಟ್‌ ಹ್ಯಾಜೆನ್‌ ಅವರ ಮಾಹಿತಿ ಪ್ರಕಾರ, ಈ ತಂತ್ರಜ್ಞಾನವನ್ನು ಮಾನವರಹಿತ ಬಾಹ್ಯಾಕಾಶ ನೌಕೆಗಳಲ್ಲಿ ಅಳವಡಿಸಬಹುದಾಗಿದೆ.

Advertisement

ಆ ತಂತ್ರಜ್ಞಾನವು ಅನ್ಯಗ್ರಹಗಳಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಅಲ್ಲಿ ಜೀವರಾಶಿಯ ಉಗಮ, ಅಭಿವೃದ್ಧಿ ಆಗಿದೆಯೇ ಎನ್ನುವಂಥ ಮಾಹಿತಿ ಕಲೆಹಾಕುತ್ತದೆ. ವಿಶೇಷವೆಂದರೆ ಈ ಎಐ ಜೀವರಾಶಿಯ ಅಭಿವೃದ್ಧಿ ಕುರಿತು ಶೇ.90ರಷ್ಟು ನಿಖರ ಫ‌ಲಿತಾಂಶ ತಿಳಿಸಬಲ್ಲದ್ದಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next