Advertisement
ರಾತ್ರಿ ಮಲಗುವ ಮುನ್ನ ತೊಡುತ್ತಿದ್ದ ಪಜಾಮಾ (ಪೈಜಾಮ) ಸೂಟ್ ಇದೀಗ ಸ್ಪ್ರಿಂಗ್- ಸಮ್ಮರ್‌ನ (ವಸಂತ-ಬೇಸಿಗೆ) ಫ್ಯಾಶನ್ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು! ಹೌದು! ಮಹಿಳೆಯರು ಕಾಲರ್ ಇರುವ, ಇಡೀ ತೋಳಿನ (ಫುಲ… ಸ್ಲಿàವ್) ಪ್ಲೇನ್ ಅಥವಾ ಸಾಲಿಡ್ ಕಲರ್ಡ್ (ಒಂದೇ ಬಣ್ಣದ) ಪಜಾಮಾ ಸೂಟ್‌ಗಳನ್ನು ಆಕರ್ಷಕ ಆಕ್ಸೆಸರೀಸ್ ಮತ್ತು ಟೈ- ಅಪ್ ಹೀಲ್ಸ… ಜೊತೆ ಧರಿಸಿ ಫ್ಯಾಶನ್ ಲೋಕದಲ್ಲಿ ಹೊಸ ಅಲೆ ಆರಂಭಿಸಿ¨ªಾರೆ. ನೆನಪಿರಲಿ – ಚೆಕÕ… ಇರುವ ಅಥವಾ ಪ್ರಿಂಟೆಡ್ ಪೈಜಾಮಾ ತೊಡಲೇ ಬೇಡಿ! ಬಣ್ಣ ಆಯ್ಕೆ ಮಾಡುವಾಗಲೂ ಹೊಳೆಯುವ ಬಣ್ಣ ಆಯ್ಕೆ ಮಾಡಬೇಡಿ. ಪೇಸ್ಟಲ… ಶೇvÕ…, ಅಂದರೆ ತಿಳಿ ಬಣ್ಣದ ಬಟ್ಟೆಯನ್ನು ಕೊಂಡುಕೊಳ್ಳಿ.
Related Articles
Advertisement
ಈ ಲುಕ್ ಪಡೆಯಲು ಹರಸಾಹಸ ಏನೂ ಪಡಬೇಕಾಗಿಲ್ಲ. ಏಷ್ಟು ಸರಳವಾಗಿರುತ್ತದೋ ಅಷ್ಟು ಒಳ್ಳೆಯದು. ಮೇಕಪ್ ಕೂಡ ಮಿನಿಮಲ… ಅಂದರೆ ಎಷ್ಟು ಕಡಿಮೆ ಹಚ್ಚಿಕೊಳ್ಳುತ್ತೀರೋ ಅಷ್ಟು ಉತ್ತಮ. ಉಟ್ಟ ಬಟ್ಟೆ ಎದ್ದು ಕಾಣಬೇಕು ಎಂದಾಗ ಯಾವತ್ತೂ ಮೇಕಪ್ ಸರಳ ಹಾಗು ಮಿತವಾಗಿ ಬಳಸಬೇಕು.
ಈ ಲುಕ್ ಜೊತೆ ಪೋನಿ ಟೇಲ… ಹೇರ್‌ಸ್ಟೈಲ್ ಮಾಡುವುದು ಒಳ್ಳೆಯದು. ಬೇಸಿಗೆಯ ಸೆಕೆಯ ದೃಷ್ಟಿಯಿಂದಲೂ ಇದು ಉತ್ತಮ. ಮತ್ತು ನೀವು ತೊಟ್ಟಿರುವ ಡ್ಯಾಂಗ್ಲರ್ ಚೆನ್ನಾಗಿಯೂ ಕಾಣಿಸುವುದು. ಪೋನಿ ಟೇಲ… ಕೇಶವಿನ್ಯಾಸ ಮಾಡುವಾಗ ಹೈ ಪೋನಿಯನ್ನು ಆಯ್ಕೆ ಮಾಡಿರಿ. ಲೋ ಪೋನಿ ಕೂಡ ಹಾಕಿಕೊಳ್ಳಬಹುದು, ಆದರೆ ಹೈ ಪೋನಿ ನಿಮ್ಮ ಮುಖಕ್ಕೆ ನೀಡುವಷ್ಟು ಆತ್ಮವಿಶ್ವಾಸವನ್ನು ಲೋ ಪೋನಿ ನೀಡಲಾರದು.
ಈ ದಿರಿಸಿನ ಜೊತೆ ಸ್ಲಿಂಗ್ ಬ್ಯಾಗ್ ಬದಲಿಗೆ ಕ್ಲಚ್ ಬಳಸಿ. ಕ್ಲಚ್ ಪರ್ಸುಗಳನ್ನು ಬಳಸುವುದರಿಂದ ಮತ್ತದೇ ಉಪಯೋಗ- ಫೋಕಸ್ ನಿಮ್ಮ ಉಡುಪಿನ ಮೇಲೆ ಇರುತ್ತದೆ. ದೊಡ್ಡ ಹ್ಯಾಂಡ್ ಬ್ಯಾಗ್, ಸ್ಲಿಂಗ್ ಬ್ಯಾಗ್, ಶೋಲ್ಡರ್ ಬ್ಯಾಗ್, ಮುಂತಾದವುಗಳು ಈ ಲುಕ್ ಜೊತೆ ಚೆನ್ನಾಗಿ ಕಾಣಿಸುವುದಿಲ್ಲ.
– ಅದಿತಿಮಾನಸ ಟಿ. ಎಸ್.