Advertisement
ಹೌದು, ಜೆ.ಸಿ.ನಗರದ ಲಕ್ಷ್ಮೀ ಸದನದಲ್ಲಿ ವಿವಿಧ ದೇಶಗಳಿಂದ ತರಿಸಲಾಗಿರುವ ವಿವಿಧ ಲೇಖಕರ ಹಾಗೂ ಆಂಗ್ಲ ಭಾಷೆಗಳ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಮೂಲತಃ ಬೆಂಗಳೂರಿನವರಾಗಿರುವ ಸತೀಶಕುಮಾರ “ಯೂಸ್ಡ್ ಬುಕ್ ಫ್ಯಾಕ್ಟರಿ’ ಎನ್ನುವ ಹೆಸರಿನಡಿ ದೇಶದ ವಿವಿಧ ಭಾಗಗಳಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳುತ್ತಿದ್ದಾರೆ. ಓದುವಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಇಂತಹ ಪುಸ್ತಕ ಮಾರಾಟ ಹಾಗೂ ಪ್ರದರ್ಶನ ನಡೆಸಲಾಗುತ್ತಿದೆ. ಅದೀಗ ಹುಬ್ಬಳ್ಳಿಗೂ ಕಾಲಿಟ್ಟಿದೆ.
Related Articles
ಪುಸ್ತಕ ಪ್ರೇಮಿಗಳಿಗೆ ಸತೀಶಕುಮಾರ ಅವರು ವಿಶೇಷ ಪುಸ್ತಕ ಮಾರಾಟ ವ್ಯವಸ್ಥೆ ಕಲ್ಪಿಸಿದ್ದು, ಮೂರು ವಿಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ. ಚಿಕ್ಕ, ಮಧ್ಯಮ, ದೊಡ್ಡ ಗಾತ್ರದ ಮೂರು ಬಾಕ್ಸ್‌ಗಳಿದ್ದು, ತಲಾ 1199, 1799, 2999 ರೂ. ದರ ನಿಗದಿ ಮಾಡಿದ್ದಾರೆ. ಆಯಾ ಬಾಕ್ಸ್‌ಗೆ ನಿಗದಿಯಾದ ದರ ನೀಡಿ ಅದರಲ್ಲಿ ಹಿಡಿಯುವಷ್ಟು ನಮಗಿಷ್ಟವಾದ ಪುಸ್ತಕವನ್ನು ಜೋಳಿಗೆಗೆ ಹಾಕಿಕೊಳ್ಳಬಹುದಾಗಿದೆ. ಮಧ್ಯಮ ಗಾತ್ರದ ಬಾಕ್ಸ್‌ನಲ್ಲಿ ಕಡಿಮೆ ಎಂದರೂ 17ರಿಂದ 19 ಪುಸ್ತಕಗಳು ತುಂಬಲಿವೆ!
Advertisement
ವೈವಿಧ್ಯಮಯ ಹೊತ್ತಿಗೆಗಳುಮಕ್ಕಳಿಗೆ ಬೇಕಾಗುವ ಪುಸ್ತಕಗಳು, ವಯಸ್ಕರು, ಮಹಿಳೆಯರು, ಇತಿಹಾಸ, ಥ್ರಿಲ್ಲರ್ ಹಾಗೂ ಕ್ರೈಂಗೆ ಸಂಬಂಧಿಸಿದ, ಲಿಟರೇಚರ್, ಬಯೋಗ್ರಫಿ, ರೊಮ್ಯಾನ್ಸ್, ಆರ್ಟ್ಸ್, ಟ್ರಾವೆಲ್, ಬಿಜಿನೆಸ್, ಸೆಲ್ಫ್ ಹೆಲ್ಪ್, ಆಟೋ ಬಯೋಗ್ರಫಿ ಮಕ್ಕಳಿಗಾಗಿ ಲೆಫ್ಟ್ ದಿ ಫಿಲ್ಪ್, ಥಿನ್ ಫಂಕ್ಷನ್, ಎನ್‌ಕ್ಲೋಪಿಡಿಯಾ, ಬೋರ್ಡ್ ಬುಕ್ಸ್, ಲರ್ನಿಂಗ್ ಬುಕ್ಸ್ ಸೇರಿದಂತೆ ನೂರಾರು ಬಗೆಯ ಪುಸ್ತಕಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ದೇಶ-ವಿದೇಶಗಳಲ್ಲಿ ಲಭ್ಯವಾಗುವ ಪುಸ್ತಕಗಳು ನಮ್ಮ ಕೈಯಲ್ಲಿ ಇಂದು ಸ್ಥಳೀಯವಾಗಿ ಸಿಗುತ್ತಿವೆ ಎಂದರೇ ಅದಕ್ಕೆ usedbooksfactory ಕಾರಣ ಎನ್ನಬಹುದು. ಯುಕೆ, ಯುಎಸ್‌ನಲ್ಲಿ ಲಭ್ಯವಾಗುವ ಪುಸ್ತಕಗಳು ಇಂದು ನಮಗೆ ಇಲ್ಲಿಯೇ ಸಿಗುತ್ತಿವೆ. ಅಷ್ಟೇ ಅಲ್ಲದೇ ಲಕ್ಷ್ಮೀ ಸದನದಲ್ಲಿ ಸರದಿಯಲ್ಲಿ ನಿಂತು ಪುಸ್ತಕ ಖರೀದಿಸಿದ್ದು, ಇನ್ನೂ ಕೂಡಾ ನಮ್ಮಲ್ಲಿ ಪುಸ್ತಕ ಓದುವ ಜನರಿದ್ದಾರೆ ಎಂದು ಸಂತೋಷವಾಯಿತು. ಆದರೆ ಪುಸ್ತಕ ಖರೀದಿಗೆ ಹೋಗುವಾಗ ನಮಗೆ ಇಂತಹದೇ ಪುಸ್ತಕ ಬೇಕೆಂದು ಹೋಗದೇ ಅಲ್ಲಿರುವ ಅತ್ಯುತ್ತಮ ಪುಸ್ತಕಗಳು ನಮ್ಮವಾಗಲಿ ಎಂದುಕೊಂಡು ಖರೀದಿಗೆ ಮುಂದಾಗಬೇಕು.
ಪ್ರಶಾಂತ ಆಡೂರ, ಪುಸ್ತಕ ಪ್ರೇಮಿ ಜನರು ಓದುವ ಹವ್ಯಾಸ ಕಳೆದುಕೊಂಡಿದ್ದು, ಮರು ಓದುವಂತಾಗಬೇಕು. ಮಕ್ಕಳೊಂದಿಗೆ ಪಾಲಕರು ಕುಳಿತು ಓದಿದಾಗ ಮಕ್ಕಳು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಆ ಎಲ್ಲ ದೃಷ್ಟಿಯಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ಜು.21ರಿಂದ ಇಲ್ಲಿಯವರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ. ಜು.30ರವರೆಗೆ ಈ ಪ್ರದರ್ಶನ ಮಾರಾಟ ನಡೆಯಲಿದೆ.
ಸತೀಶ ಕುಮಾರ, ವ್ಯವಸ್ಥಾಪಕ *ಬಸವರಾಜ ಹೂಗಾರ