ಬೆಂಗಳೂರು: ಸರ್ಕಾರವು ಇಲಾಖೆಗೆ ಬಿಡುಗಡೆ ಮಾಡಿರುವ ಅನುದಾನವನ್ನ ಅಧಿಕಾರಿಗಳು ಸೂಕ್ತವಾಗಿ ಬಳಸಿಕೊಂಡು ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನ ಸಂರಕ್ಷಣೆ ಮಾಡುವುದರ ಜೊತೆಗೆ ಹೆಚ್ಚಿಸುವ ನಿಟ್ಟಿನಲ್ಲಿಯೂ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ಅರಣ್ಯ ಸಚಿವರಾದ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ಅರಣ್ಯ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದ ಸಚಿವರು,ಇಲಾಖೆಯು ಈ ಸಾಲಿನ ಅನುದಾನವನ್ನ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ;- ಅಜಾಗೃತೆಯಿಂದ ಬಂದ ಟ್ಯಾಂಕರ್ ಢಿಕ್ಕಿ : ಬೈಕ್ ಸವಾರ ದಾರುಣ ಸಾವು.
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ಗಾರಿ ಯುದ್ದಕ್ಕೂ ಸಸಿ ನೆಡುವ ಕಾರ್ಯಕ್ರಮವನ್ನ ಹಮ್ಮಿಕೊಂಡು ಹಸಿರು ಪ್ರದೇಶವನ್ನ ಹೆಚ್ಚಿಸಲು ಗಮನ ಹರಿಸಬೇಕು. ರಾಜ್ಯದಲ್ಲಿರುವ ಸವಳು, ಜವಳು ಭೂಮಿಯ ಮಾಹಿತಿ ಕಲೆಹಾಕಿ, ಆ ಭೂಮಿಯಲ್ಲಿ ಬಂಬೂ ಸೇರಿದಂತೆ ಅರಣ್ಯಬೆಳೆಗಳನ್ನ ಬೆಳೆಸುವಂತೆ ರೈತರಿಗೆ ಮಾಹಿತಿ ನೀಡಿ, ಅವರ ಮನವೊಲಿಸಬೇಕು ಎಂದು ಹೇಳಿದರು.
ವನ್ಯಜೀವಿಗಳ ಅಂಚೆಚೀಟಿ ಪ್ರದರ್ಶನಕ್ಕೆ ಚಾಲನೆ: 67ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಜಾಗೃತಿ ಮೂಡಿಸಲು ಅರಣ್ಯ ಭವನದಲ್ಲಿ ಆಯೋಜಿಸಲಾಗಿದ್ದವಿವಿಧ ಪ್ರಾಣಿ, ಪಕ್ಷಿಗಳ ಚಿತ್ರಗಳಿರುವ ಅಂಚೆಚೀಟಿ ಹಾಗೂ ವಿವಿಧ ದೇಶಗಳ ನೋಟುಗಳ ಪ್ರದರ್ಶನವನ್ನು ಅರಣ್ಯ ಸಚಿವ ಉಮೇಶ ಕತ್ತಿ ಉದ್ಘಾಟಿಸಿದರು.
ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೇದ್ ಅಖ್ತರ್, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್ ಎಸ್ ಬಿಜೂjರ್ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ ಇದ್ದರು.