Advertisement

ಸೈಕಲ್‌ ಬಳಸಿ-ಇಂಧನ ಉಳಿಸಿ ಅಭಿಯಾನ

03:02 PM Apr 21, 2022 | Shwetha M |

ವಿಜಯಪುರ: ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕಂಪನಿಗಳು ಮಿಲಿಟರಿ ವ್ಯವಸ್ಥೆಗೆ ಪೆಟ್ರೋಲ್‌, ಡೀಸೆಲ್‌ ಸರಬರಾಜು ಮಾಡಲು ನಿರಾಕರಿಸಿದವು. ಪರಿಣಾಮ ಅಂದಿನ ಪ್ರಧಾನಿ ಪ್ರಧಾನಿ ಇಂದಿರಾ ಗಾಂಧಿ ಇಂಧನ ಪೂರೈಕೆಯ ಖಾಸಗಿ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಸೇನೆಯ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಮತ್ತೆ ಖಾಸಗೀಕರಣದ ಮಾತು ಕೇಳಿ ಬರುತ್ತಿದೆ. ಇದು ಸತ್ಯವೇ ಆಗಿದ್ದಲ್ಲಿ ಸರ್ಕಾರ ಕೂಡಲೇ ಇಂಥ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ ಅಧ್ಯಕ್ಷ ಡಾ| ಮಹಾಂತೇಶ ಬಿರಾದಾರ ಹೇಳಿದರು.

Advertisement

ನಗರದಲ್ಲಿ ಭಾರತ ಪೆಟ್ರೋಲಿಂ ಸಂಸ್ಥೆ ಅಥಣಿ ರಸ್ತೆಯ ಕುಮಾರೇಶ್ವರ ಪೆಟ್ರೋಲ್‌ ಪಂಪ್‌ನಿಂದ ಏರ್ಪಡಿಸಿದ್ದ ಸೈಕಲ್‌ ಬಳಸಿ, ಇಂಧನ ಉಳಿಸಿ ಹಾಗೂ ಹಸಿರು-ಸ್ವತ್ಛ ಶಕ್ತಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

70ರ ದಶಕದ ವೇಳೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಯಲ್‌-ಬ್ರಿಟಿಷ್‌ ಪೆಟ್ರೋಲಿಂ ಕಂಪನಿ, ಕಾಲ್ಟೆàಕ್ಸ್‌ನಂತಹ ಕಂಪನಿಗಳು ಚೀನಾ ಜೊತೆಗಿನ ಯುದ್ಧದ ಸಂದರ್ಭದಲ್ಲಿ ಮಿಲಟರಿ ವಾಹನಗಳಿಗೆ ಇಂಧನವನ್ನು ಪೂರೈಸಲು ನಿರಾಕರಿಸಿದವು. ಇದರಿಂದ ಕೆರಳಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಈ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಸೇನೆಯ ವಶಕ್ಕೆ ನೀಡಿದ್ದರು. ನಂತರದಲ್ಲಿ ಬಿಪಿಸಿಎಲ್‌ ಹಾಗೂ ಹಿಂದೂಸ್ತಾನ ಪೆಟ್ರೋಲಿಂ ಕಂಪನಿಗಳಾಗಿ ಪರಿವರ್ತಿಸಿದರು ಎಂದು ಅರ್ಧ ಶತಮಾನದ ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.

ಅಂತಾರಾಷ್ಟ್ರೀಯ ಕೋರ್ಟ್‌ಗಳಲ್ಲಿ ಈ ಕಂಪನಿಗಳು ದಾವೆ ಹೂಡಬಹುದು ಎಂಬ ಆಲೋಚನೆಯಿಂದ ಸರ್ಕಾರಿ ಸ್ವಾಮ್ಯದಲ್ಲೇ ಇಂಡಿಯನ್‌ ಆಯಿಲ್‌ ಕಂಪನಿ ಹುಟ್ಟು ಹಾಕಿದರು. ಖಾಸಗಿ ಕಂಪನಿಗಳು ತಮ್ಮ ಬಂಕ್‌ಗಳನ್ನು ಸ್ಥಾಪಿಸಿ ಪೈಪೋಟಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಹಕರು ಸಾರ್ವಜನಿಕ ವಲಯದ ಈ ಕಂಪನಿಗಳನ್ನು ಉಳಿಸಿಬೇಕಿದೆ. ಕಳೆದ 20 ವರ್ಷಗಳಿಂದ ಸರ್ಕಾರ ಈ ಕಂಪನಿಗಳನ್ನು ಖಾಸಗಿಕರಣಗೊಳಿಸಲು ಪ್ರಯತ್ನ ಪಡುತ್ತಲೇ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಸಣ್ಣ ಪುಟ್ಟ ಕೆಲಸಗಳಿಗೆ ವಾಹನಗಳ ಬದಲಾಗಿ ನಡೆದು ಹೋಗುವುದು ಅಥವಾ ಸೈಕಲ್‌ ಬಳಸುವುದು ಉತ್ತಮ. ದೂರದ ಪ್ರಯಾಣಕ್ಕೆ ರೈಲು ಬಸ್‌ನಂತಹ ಸಾರ್ವಜನಿಕ ಸಾರಿಗೆಗಳನ್ನು ಬಳಸುವುದರಿಂದ ಕೂಡ ಇಂಧನ ಉಳಿಸಿ, ನಾವೆಲ್ಲರೂ ನಮ್ಮ ಆರ್ಥಿಕ ವೆತ್ಛವನ್ನು ಉಳಿಸುವುದಲ್ಲದೇ ಭಾರತ ವ್ಯವಸ್ಥೆಗೆ ಬಲ ನೀಡಬೇಕು ಎಂದು ಆಗ್ರಹಿಸಿದರು.

Advertisement

ಬಿಪಿಸಿಎಲ್‌ ಪ್ರಾದೇಶಕ ಅಧಿಕಾರಿ ಎಂ.ಮಹೇಶ ಸೈಕಲ್‌ ಜಾಥಾಗೆ ಹಸಿರು ನಿಶಾನೆ ನೀಡಿದರು. ಮಾರುಕಟ್ಟೆ ಅಧಿಕಾರಿ ಸಾದಿಕ ಸೈಯ್ಯದ್‌ ಸ್ವಾಗತಿಸಿದರು. ಬಿಪಿಸಿಎಲ್‌ ಡೀಲರ್‌ಗಳಾದ ಸಂಗಮೇಶ ಪಾಟೀಲ, ಡಾ| ವಿಜಯಕುಮಾರ ವಾರದ, ಅಮರೇಶ, ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿ ಮಾಜಿ ಸದಸ್ಯ ಸುರೇಶ ಘೋಣಸಗಿ ವೇದಿಕೆಯಲ್ಲಿದ್ದರು. ಡಾ| ರಾಜು ಎಲೆಗೊಂಡ, ಸಮೀರ ಬಳಗಾರ, ಸಂತೋಷ ಅವರಸಂಗ, ಶಿವರಾಜ್‌ ಪಾಟೀಲ, ವಿಶಾಲ ಹಿರಾಸ್ಕರ್‌, ಸಂದೀಪ ಮಡಗೊಂಡ, ಸೋಮು ಮಠ, ಅಮೀತ್‌ ಬಿರಾದಾರ, ಮನೀಶ್‌ ದೇವಗಿರಿಕರ, ವಿನಾಯಕ ಕೋಟಿ, ಸಂದೀಪ ಜೋಶಿ ಸೇರಿದಂತೆ ಹಲವರು ಸೈಕ್ಲಿಂಗ್‌ ಜಾಥಾದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next