Advertisement

ಆಕ್ಸಿ ಬಸ್‌ ಸೇವೆ ಉಪಯೋಗಿಸಿಕೊಳ್ಳಿ

10:00 PM May 19, 2021 | Team Udayavani |

ಕೆ.ಆರ್‌.ಪುರ: ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ಪರಿಣಾಮ ಜೀವವಾಯುವಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಕಡಿತಗೊಳಿಸುವ ಸಲುವಾಗಿಬಸ್‌ನಲ್ಲಿ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗಿದ್ದು ಸೋಂಕಿತರು ಬಳಕೆ ಮಾಡಿಕೊಳ್ಳಬೇಕು ಎಂದು ಪಾಲಿಕೆ ಮಾಜಿ ಸದಸ್ಯಕಲ್ಕೆರೆ ಶ್ರೀನಿವಾಸ್‌ ಹೇಳಿದರು.

Advertisement

ಕ್ಷೇತ್ರದ ರಾಮಮೂರ್ತಿನಗರಮುಖ್ಯರಸ್ತೆಯಲ್ಲಿರುವ ಬಿಜೆಪಿ ವಾರ್ಡ್‌ ಕಚೇರಿ ಬಳಿ ರಾಷ್ಟ್ರೀಯ ಸ್ವಯಂ ಸೇವಕಸಂಘ, ಎನ್‌.ಎಸ್‌ ನಂದೀಶ ರೆಡ್ಡಿಫೌಂಡೇಶನ್‌ ಇಂಡಿಯಾ ಹಾಗೂಕೆ.ಆರ್‌.ಪುರ ಬಿಜೆಪಿ ಸಹಕಾರದೊಂದಿಗೆಆಕ್ಸಿಜನ್‌ ಆನ್‌ ವ್ಹೀಲ್ಸ್‌ ಬಸ್‌ ಸೇವೆಗೆಚಾಲನೆ ನೀಡಿ ಮಾತನಾಡಿದರು.ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರಿ,ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಎದುರಾಗಿ ಜನ ಪ್ರಾಣ ಬಿಡುತ್ತಿರುವ ಘಟನೆಗಳು ನಡೆಯುತ್ತಿವೆ.

ಜನರಪ್ರಾಣರಕ್ಷಣೆಯ ಉದ್ದೇಶದಿಂದ ಈಸೇವೆ ಒದಗಿಸಲಾಗುತ್ತಿದೆ ಎಂದರು.ರಾಮಮೂರ್ತಿನಗರ ವಾರ್ಡ್‌ನಕೋವಿಡ್‌ ಸೋಂಕಿತರು ತುರ್ತುಪರಿಸ್ಥಿತಿಯಲ್ಲಿ ಆಕ್ಸಿಜನ್‌ ಬಸ್‌ ಮೂಲಕಆಮ್ಲಜನಕ ಪಡೆದುಕೊಳ್ಳಬಹುದಾಗಿದೆ. ನುರಿತ ತಜ್ಞರು ಸೋಂಕಿತರನ್ನುನೋಡಿಕೊಳ್ಳಲಿದ್ದಾರೆ. ಸುಮಾರು 15ಜನ ಸೋಂಕಿತರು ಆಮ್ಲಜನಕಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆಎಂದು ತಿಳಿಸಿದರು. ವಾರ್ಡ್‌ ಅಧ್ಯಕ್ಷ ಗೋವಿಂದಪ್ಪ,ಮುಖಂಡರಾದ ಬಾಲು, ಮುನಿರಾಜು,ಉನ್ನಿಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next