ಚೇಳೂರು: ಮುಂದಿನ ದಿನಗಳಲ್ಲಿ ಗುಬ್ಬಿ ತಾಲೂಕಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ನಿಗಮ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ಚೇಳೂರಿನ ಪಟೇಲ್ ಕಲ್ಯಾಣ ಮಂಟಪದಲ್ಲಿ ಸ್ನೇಹ ಜೀವನ ಫೌಂಡೇಶನ್, ಸಾಮಾಜಿಕ ಆರಣ್ಯ ವಲಯ ಗುಬ್ಬಿ, ಕೆನರಾ ಬ್ಯಾಂಕ್ ಚೇಳೂರು ಸಂಯುಕ್ತಾಶ್ರಯದಲ್ಲಿ ಮಹಿಳಾ ಸಂಘಗಳಿಗೆ ಸಾಲ ಜೋಡಣೆ, ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಮಹಿಳೆಯರೇ ಆಧಾರ ಸ್ತಂಭವಾಗಿದ್ದಾರೆ. ಅವರಿಂದಲೇ ಮಕ್ಕಳ ಏಳ್ಗೆ, ಸಂಸಾರ ನಡೆಸುವವರೂ ಅವರೇ ಆಗಿದ್ದಾರೆ. ಹೀಗಾಗಿ ಸ್ವಂತ ಉದ್ಯೋಗ ಕಲ್ಪಿಸಿಕೊಳ್ಳಲು ನಿಗಮದ
ವತಿಯಿಂದ ತರಬೇತಿಗಳು ಸಿಗುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ತುಮಕೂರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿಗಣೇಶ್ ಮಾತನಾಡಿ, ಯಾವ ಬ್ಯಾಂಕ್‌ನವರೂ ಸಾಲ ಕಟ್ಟಿ ಎಂದು ಬಲವಂತ ಮಾಡುತ್ತಿಲ್ಲ ಎಂದರು. ಸ್ನೇಹ ಜೀವನ ಫೌಂಡೇಶನ್ ನವಕೋಟಿ, ನಮ್ಮ ಸಂಸ್ಥೆ ಗ್ರಾಮೀಣ ಮಟ್ಟದ ಜನತೆಗೆ. ಅದರಲ್ಲೂ ರೈತರ ಪರವಾಗಿ ಕೆಲಸ ಮಾಡುತ್ತಿದ್ದು ಸಹಕರಿಸಬೇಕೆಂದರು. ಕಾರ್ಯಕ್ರಮದಲ್ಲಿ 47 ಸಂಘಗಳಿಗೆ 1.36 ಕೋಟಿ ರೂ., ಸಾಲ ವಿತರಣೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಸಸಿ ವಿತರಿಸಲಾಯಿತು. ಕೆನರಾ ಬ್ಯಾಂಕ್ ಎಜಿಎಂ ಬಸವರಾಜು,ನಬಾರ್ಡ್ ಜಿಲಾ ಅಭಿವೃದ್ಧಿ ಅಧಿಕಾರಿ ವೀರಭದ್ರನ್, ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಪಾಪಣ್ಣ, ಗ್ರಾಪಂ ಸದಸ್ಯ ಸಿ.ಎನ್.ಬಸವರಾಜು, ಚಾರ್ಟೆಡ್ ಆಕೌಂಟೆಡ್ ಕೆ.ಆರ್.ವೀರೇಶ್, ಇಒ ಶಿವಪ್ರಕಾಶ್ ಮತ್ತಿತರರಿದ್ದರು.