Advertisement

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಮಹದೇವ್‌

02:31 PM Sep 02, 2020 | Suhan S |

ಪಿರಿಯಾಪಟ್ಟಣ: ರೈತರು ಸಾವಯವ ಗೊಬ್ಬರಗಳ ಬಳಕೆಗೆ ಮುಂದಾಗಬೇಕು ಎಂದು ಶಾಸಕ ಕೆ. ಮಹದೇವ್‌ ತಿಳಿಸಿದರು.

Advertisement

ತಾಲೂಕಿನ ಹಬಟೂರು ಗ್ರಾಮದಲ್ಲಿ ಆತ್ಮಯೋಜನೆ ಮತ್ತು ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಿ ಮಾತನಾಡಿ, ರಾಸಾಯನಿಕ ಗೊಬ್ಬರ ಬಳಕೆಯಿಂದ ಬೆಳೆಯುತ್ತಿರುವ ಬೆಳೆಗಳಲ್ಲಿ ರುಚಿ ಇಲ್ಲದಂತಾಗಿದೆ. ಹೆಚ್ಚಿಗೆ ಬೆಳೆಯಬೇಕು ಎಂಬ ಹಂಬಲಕ್ಕೆ ಬಿದ್ದು, ರೈತರು ಗುಣಮಟ್ಟ ಮತ್ತು ಆರೋಗ್ಯಕರವಾದ ಬೆಳೆಯನ್ನು ಮರೆಯುತ್ತಿದ್ದಾರೆ.ಬೀಜೋಪಚಾರ ಆಂದೋಲನದಡಿ ಕೇವಲ 480 ಹೆಕ್ಟೇರ್‌ ಜನರಿಗೆ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ 2 ಸಾವಿರ ಹೆಕ್ಟೇರ್‌ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಬೇಕು ಎಂದು ಕೃಷಿ ಸಚಿವರಿಗೆ ಮನವಿ ಮಾಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ಧನ: ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್‌ ಮಾತನಾಡಿ, ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ 480 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಮತ್ತು ಅಲಸಂದೆ ಬಿತ್ತನೆ ಬೀಜವನ್ನು ನೀಡಲಾಗುತ್ತಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಆದಾಯ ಪಡೆದುಕೊಳ್ಳಬೇಕು. ರೈತರು ಕೃಷಿ ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಪಡೆದು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಪಂ ಸ್ಥಾಯಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಸದಸ್ಯೆ ಆಶಾ, ಮುಖಂಡರಾದ ಕರೀಗೌಡ, ರಾಮಚಂದ್ರ, ರಘು, ರಮೇಶ್‌, ಶಿವರಾಜು, ಗೋವಿಂದ್‌, ಚನ್ನೇಗೌಡ, ಮಹದೇವ್‌, ಕೃಷಿ ಇಲಾಖೆ ಅಧಿಕಾರಿಗಳಾ ಮಹೇಶ್‌, ಆತ್ಮಯೋಜನೆ ವ್ಯವಸ್ಥಾಪಕಿ ಪಿ.ಆರ್‌.ವೀಣಾ, ತಾಂತ್ರಿಕ ವ್ಯವಸ್ಥಾಪಕರು ಕೆ.ಎಂ.ಸುಸ್ಮಿತಾ, ಜಿ.ಎಸ್‌.ಚಂದ್ರಕಲಾ, ಟಿ.ವಿದ್ಯಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next