Advertisement

ಆಧಾರ್‌ ಜಾಗೃತಿಗೆ ಮದುವೆ ಕಾರ್ಡ್‌ ಬಳಕೆ

03:49 PM Apr 02, 2022 | Team Udayavani |

ಬೆಟಗೇರಿ: ಇಲ್ಲೊಂದು ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಆಧಾರ್‌ ಕಾರ್ಡ್‌ ಮಾದರಿಯಲ್ಲಿ ಪ್ರಕಟಿಸಿದ್ದು, ಭಾರಿ ವೈರಲ್‌ ಆಗಿದೆ. ಬಗರನಾಳ ಗ್ರಾಮದಲ್ಲಿ ಇದೇ ಏ.21ರಂದು ಮಠದ-ಹಿರೇಮಠ ಬಂಧುಗಳ ಮದುವೆ ಸಮಾರಂಭ ನಡೆಯಲಿದೆ.

Advertisement

ಬಗರನಾಳ ಗ್ರಾಮದ ಮಠದ ಸಹೋದರರಾದ ಈಶ್ವರಯ್ಯ-ಕಾವೇರಿ, ಬಸಯ್ಯ-ಪವಿತ್ರಾ ಎಂಬ ಜೋಡಿಗಳು ಹಸೆಮಣೆ ಏರಲಿದ್ದಾರೆ. ತಮ್ಮ ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಆಧಾರ್‌ ಕಾರ್ಡ್‌ ಮಾಡಿಸಲು ಎಲ್ಲರೂ ಮುಂದಾಗುವಂತೆ ತಿಳಿಸುವ ಪ್ರಯತ್ನ ಮಾಡಿ, ವಿಭಿನ್ನವಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಬಂಧು ಬಾಂದವರಿಗೆ, ಮಿತ್ರರಿಗೆ ನೀಡುತ್ತಿದ್ದೇವೆ ಎಂದು ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿರುವ ಮದುಮಗ ಬಸಯ್ಯ ಮಠದ ಅವರು ಹೇಳುತ್ತಾರೆ.

ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮದುವೆ ದಿನ, ಸ್ಥಳ ಮೊದಲಾದ ಮಾಹಿತಿ ಜತೆಗೆ ಆಧಾರ್‌ ಕಾರ್ಡ್‌ ಮಾಡಿಸುವಂತೆ ಈ ಜೋಡಿಗಳು ಕರೆ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೇ ಆಧಾರ್‌ ಕಾರ್ಡ್‌ದಿಂದ ಆಗುವ ವಿವಿಧ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ.

ತಪ್ಪದೇ ಮದುವೆಗೆ ಬನ್ನಿ, ಮರೆಯದೆ ಆಧಾರ್‌ ನೋಂದಣಿ ಮಾಡಿಸಿ ಎಂದು ಬರೆದು ವಿವಾಹ ಆಮಂತ್ರಣ ನೀಡುತ್ತಿರುವ ಈ ಜೋಡಿಗಳಿಗೆ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next