Advertisement

Training ಇಲ್ಲದ ಪೈಲಟ್‌ ಬಳಕೆ: ಏರ್‌ ಇಂಡಿಯಾಕ್ಕೆ 90 ಲಕ್ಷ ರೂ. ದಂಡ!

01:45 AM Aug 24, 2024 | Team Udayavani |

ಹೊಸದಿಲ್ಲಿ: ಟಾಟಾ ಗ್ರೂಪ್‌ ಮಾಲಕತ್ವದ ಏರ್‌ ಇಂಡಿಯಾ ಸಂಸ್ಥೆಗೆ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ 90 ಲಕ್ಷ ರೂ. ದಂಡ ಹೇರಿದೆ. ಸರಿಯಾಗಿ ತರಬೇತಾಗದ ಪೈಲಟ್‌ಗಳನ್ನು ವಿಮಾನ ಸಂಚಾರ ನಡೆಸಿದ್ದೇ ಇದಕ್ಕೆ ಕಾರಣ ಎಂದು ಡಿಜಿಸಿಎ ಹೇಳಿದೆ.

Advertisement

ಈ ವೇಳೆ ಏರ್‌ ಇಂಡಿಯಾದ ಕಾರ್ಯನಿರ್ವಹಣ ನಿರ್ದೇಶಕರಿಗೆ ತಲಾ 6 ಲಕ್ಷ ರೂ., ತರಬೇತಿ ನಿರ್ದೇಶಕರಿಗೆ ತಲಾ 3 ಲಕ್ಷ ರೂ. ದಂಡ ಹೇರಿದೆ. ಏರ್‌ ಇಂಡಿಯಾದ ವಿಮಾನವೊಂದರ ಸಂಚಾರವೊಂದನ್ನು ಇನ್ನೂ ಪೂರ್ತಿ ತರಬೇತಾಗದ ಕ್ಯಾಪ್ಟನ್‌ ಹಾಗೂ ಹೊಸ ಅಧಿಕಾರಿಯೊಬ್ಬರಿಂದ ನಡೆಸಲಾಗಿದೆ. ಜು.10ರಂದು ಏರ್‌ ಇಂಡಿಯಾ ತಾನೇ ಸಲ್ಲಿಸಿದ ವರದಿಯೊಂದರ ಮೂಲಕ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಡಿಜಿಸಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next