Advertisement

ಕಹಿ ಮೆಂತ್ಯೆಯ ಸವಿ: ಆರೋಗ್ಯಕ್ಕೆ ಬಹು ಉಪಕಾರಿ

12:06 PM Jan 09, 2021 | Team Udayavani |

ಆಹಾರ ಶಾಸ್ತ್ರದಲ್ಲಿ ಮೆಂತ್ಯೆಕ್ಕಿದೆ ಅತೀ ಶ್ರೇಷ್ಠ ಸ್ಥಾನ. ಬಾಯಿಗೆ ಕಹಿ ಎನಿಸಿದರೂ ಆರೋಗ್ಯದ ದೃಷ್ಟಿಯಿಂದ ಮೆಂತ್ಯೆ ಬಹು ಉಪಕಾರಿ. ಮೆಂತ್ಯೆಬೀಜದ ಹಲವು ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ

Advertisement

* ಮೆಂತ್ಯೆಬೀಜವು ವಿಶಿಷ್ಟ ನಾರಿನಂಶ Ga lactomannan ಅನ್ನು ಹೊಂದಿದೆ. ಇದು ಕರುಳಿನಲ್ಲಿ ಗ್ಲುಕೋಸ್‌ನ ಹೀರುವಿಕೆಯನ್ನು ಕಡಿಮೆಗೊಳಿಸುತ್ತದೆ.

* ಪ್ರತಿದಿನ 5-10 ಗ್ರಾಂ ನಷ್ಟು ನೆನೆಸಿದ ಮೆಂತ್ಯೆವನ್ನು ಸೇವಿಸುವುದರಿಂದ ಮದುಮೇಹವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು.

* ಒಂದು ಟೇಬಲ್ ಸ್ಪೂನಷ್ಟು ಮೆಂತ್ಯೆ ಬೀಜದಲ್ಲಿ 35.5 Kcals, 2.5 ಗ್ರಾಂ ಪ್ರೋಟಿನ್, 6.4 ಗ್ರಾಂ ಕಾಬೋಹೈಡ್ರೇಟ್, 0.7 ಎಂ.ಜಿ ಪ್ಯಾಟ್, 2.7 ಗ್ರಾಂ ನಾರಿನಂಶ, 3.7 ಗ್ರಾ ಕಬ್ಬಿಣಾಂಶ ಹೊಂದಿರುತ್ತದೆ

* cಬೀಜದ ಉಪಯೋಗದಿಂದ ಎದೆ ಹಾಲಿನ ಉತ್ಪತ್ತಿಗೆ ಸಹಾಯಕಾರಿ, ಪಚನ ಕ್ರೀಯೆಗೆ, ಕೊಲಸ್ಟ್ರಾಲ್ ನಿಯಂತ್ರಣಕ್ಕೆ, ಆಸಿಡಿಟಿ ನಿಯಂತ್ರಣಕ್ಕೆ, ಋತುಚಕ್ರ ಸಂಬಂಧಿ ಸಮಸ್ಯೆಗಳಿಗೆ ಸಹಕಾರಿ.

Advertisement

* ಮೆಂತ್ಯೆ ಸೊಪ್ಪಿನ ಪಲ್ಯಾ, ಸಾಂಬಾರು ಅಥವಾ ಚಪಾತಿಯೊಂದಿಗೆ ಬೇಯಿಸಿ ಸೇವಿಸಬಹುದು.

* ಚರ್ಮದ ಕಾಂತಿಗೆ ಮೆಂತ್ಯೆವನ್ನು ಹಾಲಿನೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು, ಕೂದಲಿನ ಬೆಳವಣಿಗೆಗೂ ಮೊಸರಿನೊಂದಿಗೆ ಸೇರಿಸಿ ಹಚ್ಚಿಕೊಳ್ಳಬಹುದು.

ಮೆಂತ್ಯೆ ಟೀ ಮಾಡುವ ವಿಧಾನ

ನೀರು ಕುದಿಯುವಾಗ 1/4 ಚಮಚದಷ್ಟು ಮೆಂತ್ಯೆ ಪುಡಿ ಹಾಕಿ 3-5 ನಿಮಿಷ ಕುದಿಸಬೇಕು, ಸೋಸಿದ ನೀರಿಗೆ 2-3 ಹನಿ ನಿಂಬೆ ರಸ ಹಾಗೂ 2-3 ಹನಿ ಜೇನು ತುಪ್ಪ ಹಾಕಿ ಸೇವಿಸಬಹುದು. (ತುಳಸಿ ಎಲೆ ಮತ್ತು ಪುದೀನಾ ಎಲೆಗಳನ್ನ ಸಹ ಸೇರಿಸಬಹುದು) ಇದು ಮಧುಮೇಹಿಗಳಿಗೆ ಅಷ್ಟೇ ಅಲ್ಲದೆ ಇತರರಿಗೂ ಸಹಕಾರಿ.

ಅಕ್ಷಯ ಶೆಟ್ಟಿ

ಅಹಾರ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next