Advertisement

Cauvery Water: ಅನ್ಯ ಕೆಲಸಕ್ಕೆ ಕಾವೇರಿ ನೀರು ಬಳಸಿದ 407 ಜನರಿಗೆ ದಂಡ

10:51 AM Apr 13, 2024 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗೂ ಭಾರಿ ಕಂಟಕ ಎದುರಾಗಿರುವ ಬೆನ್ನಲ್ಲೇ ಜಲಮಂಡಳಿ ಎಚ್ಚೆತ್ತುಕೊಂಡಿದ್ದು, ಕಾವೇರಿ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಿದ 407 ಮಂದಿಯಿಂದ 20.25 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನಧಿಕೃತ ಕೊಳವೆ ಬಾವಿ ಕೊರೆಸುತ್ತಿದ್ದ 36 ಮಂದಿ ವಿರುದ್ಧ ಕ್ರಮ ಕೈಗೊಂಡಿದೆ.

Advertisement

ಬೆಂಗಳೂ ರಿನಲ್ಲಿ ನೀರು ದುರ್ಬಳಕೆ ಮಾಡುವವರ ವಿರುದ್ಧ ಜಲಮಂಡಳಿ ಹದ್ದಿನ ಕಣ್ಣಿಟ್ಟಿದೆ. ಸಿಲಿಕಾನ್‌ ಸಿಟಿಯ ಬಹುತೇಕ ಕಡೆಗಳಲ್ಲಿ ಕುಡಿ ಯುವ ನೀರಿಗಾಗಿ ಬೆಂಗಳೂರಿಗರು ಪರದಾಡು ತ್ತಿದ್ದು, ಇವರಿಗೆ ನೀರು ಪೂರೈಸುವುದು ಮಂಡಳಿಗೆ ತಲೆನೋವಾಗಿದೆ.

ಈ ನಡುವೆ ನೀರಿಗೆ ಹಾಹಾಕಾರ ಬಂದೊದಗಿದರೂ ನಿಯಮ ಉಲ್ಲಂಘಿಸಿ ಕಾವೇರಿ ನೀರನ್ನು ನಿಷೇಧಿತ ಅನ್ಯ 6 ಉದ್ದೇಶಗಳಿಗೆ ಬಳಸು ತ್ತಿದ್ದ 407 ಮಂದಿ ವಿರುದ್ಧ ದೂರು ದಾಖಲಿಸಿಕೊಂಡು 20.25 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

407 ಪ್ರಕರಣಗಳ ಪೈಕಿ ಶೇ.90ರಷ್ಟು ಪ್ರಕರಣವು ಕಾವೇರಿ ನೀರಿನಲ್ಲಿ ಕಾರು ತೊಳೆಯುತ್ತಿರುವುದಾಗಿದೆ. ಶೇ.10ರಷ್ಟು ಪ್ರಕರಣಗಳಲ್ಲಿ ಗಾರ್ಡನ್‌, ಮನೆ ಸ್ವಚ್ಛಗೊಳಿಸಲು, ಕಟ್ಟಡ ನಿರ್ಮಾಣಕ್ಕೆ ಬಳಸಿರುವುದಾಗಿದೆ. ದಂಡ ಪಾವತಿಸಿದವರಲ್ಲಿ ಬಹುತೇಕರು ಬೆಂಗಳೂರಿನ ಪೂರ್ವ ಹಾಗೂ ದಕ್ಷಿಣ ಭಾಗದವರಾಗಿದ್ದಾರೆ ಎಂದು ಜಲಮಂಡಳಿ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಸಾಕ್ಷ್ಯ ಸಮೇತ ಪತ್ತೆ: ಕಳೆದ 25 ದಿನಗಳಿಂದ ಕಾವೇರಿ ನೀರನ್ನು ವಾಹನ ತೊಳೆಯಲು ಬಳಸು ತ್ತಿರುವ ಬಗ್ಗೆ ಜಲ ಮಂಡಳಿಯ ಸಹಾಯವಾಣಿ 1916ಗೆ ದೂರುಗಳು ಬರುತ್ತಿದ್ದವು. ದೂರುದಾರರು ತಿಳಿಸಿದ ವಿಳಾಸಕ್ಕೆ ತೆರಳಿ ಕಾವೇರಿ ನೀರು ದುರ್ಬಳಕೆ ಮಾಡುತ್ತಿರುವುದನ್ನು ಸಾಕ್ಷ್ಯ ಸಮೇತ ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ಇನ್ನು ಬಹುತೇಕ ಪ್ರಕರಣಗಳಲ್ಲಿ ನೆರೆ-ಹೊರೆಯ ಮನೆಯವರೇ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

Advertisement

ಉಳಿದಂತೆ ಮಂ ಡಳಿಯ ಮೀಟರ್‌, ವಾಟರ್‌ ರೀಡಿರ್ಸ್‌ಗಳು, ವಾಟರ್‌ ಇನ್‌ಸ್ಪೆಕ್ಟರ್‌ಗಳು ಗಸ್ತು ತಿರುಗುವ ವೇಳೆ ಯೂ ಕೆಲವರು ಸಿಕ್ಕಿ ಬಿದ್ದಿದ್ದಾರೆ ಎಂದು ಜಲಮಂ ಡಳಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ದಂಡ ಏಕೆ ?: ವಾಹ ನಗಳ ಸ್ವಚ್ಛತೆಗೆ, ಕೈ ದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ ಮನರಂಜನೆಯ ಕಾರಂಜಿ ಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ, ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವತ್ಛತೆಗೆ ಕಾವೇರಿ ನೀರು ಬಳಸದಂತೆ ಜಲಮಡಂಳಿಯು ಮಾ.8ರಂದು ಆದೇಶ ಹೊರಡಿಸಿತ್ತು. ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ವಿಧಿಸುವು ದಾಗಿ ಎಚ್ಚರಿಕೆ ಕೊಡಲಾಗಿತ್ತು. ಇದಾಗಿಯೂ ಹಲವು ದಿನಗಳ ಕಾಲ ಅನ್ಯ ಉದ್ದೇಶಕ್ಕಾಗಿ ಕಾವೇರಿ ನೀರು ಬಳಸದಂತೆ ಜಾಗೃತಿ ಮೂಡಿಸಲಾಗಿತ್ತು. ಇದೀಗ ಕಾವೇರಿ ನೀರು ದುರ್ಬಳಕೆ ಮಾಡುವವರ ವಿರುದ್ಧ ಜಲಮಂಡಳಿ ಬಿಸಿ ಮುಟ್ಟಿಸಿದೆ.

ಬೆಂಗಳೂರಿನಲ್ಲಿ ಕಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1.40 ಕೋಟಿ ಜನಸಂಖ್ಯೆಯಿದ್ದು, ಈ ಪೈಕಿ 10 ಲಕ್ಷ ಕುಟುಂಬಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅನಧಿಕೃತವಾಗಿ ಕೊಳವೆ ಬಾವಿ ಕೊರೆಸಿದ 36 ಮಂದಿ ವಿರುದ್ಧ ಪ್ರಕರಣ ದಾಖಲು : ಮಳೆ ನೀರಿನ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದು ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದರಿಂದಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಇದಾಗ್ಯೂ ಕಳೆದ 20 ದಿನಗಳಲ್ಲಿ ಬೆಂಗಳೂರಿನ ವಿವಿಧೆಡೆ ಅನಧಿಕೃತವಾಗಿ ಕೊಳವೆಬಾವಿ ಕೊರೆಯು ತ್ತಿದ್ದ 36 ಕಡೆ ಜಲಮಂಡಳಿ ಅಧಿಕಾರಿಗಳು ದಾಳಿ ನಡೆಸಿ 36 ಕೇಸ್‌ ದಾಖಲಿಸಿ ಕೊಂಡಿ ದ್ದಾರೆ. ಸಿಕ್ಕಿ ಬಿದ್ದ ಕೊಳವೆಬಾವಿ ಕೊರೆದವರಿಗೆ ರಿಗ್‌ ಪಡೆಯಲು ನೀಡಿರುವ ಅನು ಮತಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಳವೆಬಾವಿ ಕೊರೆಸಿರುವ ಮಾಲೀಕರ ವಿರುದ್ಧ ವೂ ದೂರು ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನುಮತಿ ಪಡೆ ದಿರುವ ಜಾಗದಲ್ಲಿ ಮಾತ್ರ ಕೊಳವೆಬಾವಿಗಳನ್ನು ಕೊರೆಯಬೇಕು ಎಂಬ ನಿಯಮವಿದೆ.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿರುವ ಈ ಸಂದರ್ಭದಲ್ಲಿ ಕಾವೇರಿ ನೀರನ್ನು ಕಾರು ತೊಳೆಯುವುದು ಸೇರಿದಂತೆ ಅನ್ಯ ಉದ್ದೇಶಗಳಿಗೆ ಬಳಸಬೇಡಿ. ಅನಧಿಕೃತವಾಗಿ ಕೊಳವೆ ಬಾವಿ ಕೊರೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಿ.ಸುರೇಶ್‌, ಮುಖ್ಯ ಪ್ರಧಾನ ಅಭಿಯಂತರ, ಜಲಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next