Advertisement

ಕೃಷಿ ಚಟುವಟಿಕೆಗಳಿಗೆ ನರೇಗಾ ಸದ್ಬಳಕೆ ಮಾಡಿಕೊಳ್ಳಿ

03:58 PM Mar 30, 2021 | Team Udayavani |

ರಾಮನಗರ: ಗ್ರಾಮದ ಕೆರೆ ಕುಂಟೆ ರಕ್ಷಣೆ, ಜಲಮೂಲ ಅಭಿವೃದ್ಧಿಗೆ ಗ್ರಾಮದ ರಸ್ತೆ, ಚರಂಡಿ,ಸೇರಿದಂತೆ ವೈಯಕ್ತಿಕವಾಗಿ ದನದಕೊಟ್ಟಿಗೆ, ಕುರಿ, ಕೋಳಿ, ಮೇಕೆಶೆಡ್‌, ಬದು ನಿರ್ಮಾಣ, ಕೃಷಿಹೊಂಡ ನಿರ್ಮಾಣ ಮಾಡಲು ನರೇಗಾ ಯೋಜನೆಯಲ್ಲಿ ಸೌಲಭ್ಯ ನೀಡುತ್ತದೆ, ಈ ಯೋಜ ನೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲೆಯ ಸಾಮಾಜಿಕ ಲೆಕ್ಕಪರಿಶೋಧನಾ ಅಧಿಕಾರಿಹಾಗೂ ವಿಭೂತಿಕೆರೆ ಗ್ರಾಪಂ ಮಾರ್ಗದರ್ಶಿ ಅಧಿಕಾರಿ ಸಂಪತ್‌ಕುಮಾರ್‌ ಹೇಳಿದರು.

Advertisement

ತಾಲೂಕಿನ ಕುಂಭಾಪುರ ಕಾಲೋನಿ ಶಾಲಾ ಆವರಣದಲ್ಲಿ ನಡೆದ ವಿಭೂತಿಕೆರೆ ಗ್ರಾಪಂ ವಿಶೇಷಗ್ರಾಮಸಭೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನಾಗ್ರಾಮಸಭೆಯಲ್ಲಿ ಮಾತನಾಡಿದರು.ರೈತರ ಜಮೀನಿನ ಕೃಷಿ ಅಭಿವೃದ್ಧಿಗೆ ಪೂರಕವಾಗುವ ಕೃಷಿ ಹೊಂಡ, ಬದು ನಿರ್ಮಾಣ ಸೇರಿ ದಂತೆ ಹಲವು ಚಟುವಟಿಕೆಗಳು ಹಾಗೂ ಗ್ರಾಮೀಣಅಭಿವೃದ್ಧಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗಖಾತ್ರಿ ಯೋಜನೆ ಎಂದರು.

ನರೇಗಾ ಯೋಜನೆಯ ಲಾಭ ಪಡೆಯಲು ಸಾರ್ವಜನಿಕರುಗ್ರಾಪಂ ನಡೆಸುವ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿತಮಗೆ ಬೇಕಾದ ಯೋಜನೆಯ ಕ್ರಿಯಾ ಯೋಜನೆಮಾಡಿಸಿ ನರೇಗಾ ಯೋಜನೆ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

ಗ್ರಾಮಸಭೆ ಮಾರ್ಗದರ್ಶಿ ಅಧಿಕಾರಿ ಪ್ರಸನ್ನ ಕುಮಾರ್‌ ಮಾತನಾಡಿ, ನರೇಗಾ ಯೋಜನೆಪ್ರಮುಖವಾಗಿ ಅಂತರ್ಜಲ ರಕ್ಷಣೆಗೆ ಒತ್ತು ನೀಡಲಿದೆ. ಕೆರೆ, ಕುಂಟೆ, ಕಾಲುವೆ ಅಭಿವೃದ್ಧಿಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆಗ್ರಾಪಂನಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಕಾಲಕಾಲಕ್ಕೆ ವಾರ್ಡ್‌ಸಭೆ, ಗ್ರಾಮಸಭೆಗಳಮೂಲಕ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಗ್ರಾಪಂ ಮಾಡುತ್ತಿದೆ ಎಂದರು.

ಸಾಮಾಜಿಕ ಲೆಕ್ಕಪರಿಶೋಧನಾ ತಾಲೂಕುಸಂಯೋಜಕಿ ಎಸ್‌. ಶಿವಮ್ಮ ಮಾತನಾಡಿ, ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ 2,74,6496 ರೂ. ಕೆಲಸ ನಿರ್ವಹಿಸಲಾಗಿದೆ. ವೈಯಕ್ತಿಕ 282, ಸಮುದಾಯ 49, ಒಟ್ಟು 331 ಕಾಮಗಾರಿ ನಡೆದಿದ್ದು99,659 ದಿನಗಳ ಮಾನವ ದಿನಗಳ ಸೃಜನೆಯಾಗಿದೆ. ನಾಮಫ‌ಲಕ, ಕಡತ ವಿಲೇವಾರಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಮುಂತಾದ ವಿಷಯಗಳ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಓದಿ ಮಂಡಿಸಿದರು.

Advertisement

ಗ್ರಾಮದ ಪಾರ್ಥ ಮತ್ತು ಇತರ ಸಾರ್ವಜನಿಕರು ಕುಂಭಾಪುರ ಕಾಲೋನಿ ಸುತ್ತಮುತ್ತ ಕಟ್ಟಿರುವ ಚೆಕ್‌ಡ್ಯಾಂಗಳು ಒಂದಕ್ಕೊಂದು ಹತ್ತಿರದಲ್ಲೇಕಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಡಿಸಿದರು. ಕುಂಭಾ ಪುರ ಕಾಲೋನಿಯಲ್ಲಿ ವಾಸಿಸುತ್ತಿರುವ ಬಹುತೇಕ ಜನರಿಗೆ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಅಂಚಿನಲ್ಲಿನ ತೊಂದರೆಯಿಂದ ನಿವೇಶನ ಇ-ಖಾತೆಆಗುತ್ತಿಲ್ಲ ಇದರಿಂದ ಇಲ್ಲಿನ ಜನರಿಗೆ ಸರ್ಕಾರದಮನೆ, ಸಾಲ ಇನ್ನಿತರ ಸೌಲಭ್ಯ ಪಡೆಯಲುತೊಂದರೆ ಉಂಟಾಗುತ್ತಿದೆ. ಕೂಡಲೇ ಗ್ರಾಪಂ ಇ-ಖಾತೆ ಮಾಡಿಕೊಡಲು ಕಾನೂನು ತೊಡಕುನಿವಾರಿಸಬೇಕು ಎಂದು ಗ್ರಾಮದ ಪಿಳ್ಳಪ್ಪ ಮತ್ತಿತರಗ್ರಾಮಸ್ಥರು ಆಗ್ರಹಿಸಿದರು.ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ, ಉಪಾಧ್ಯಕ್ಷ ಮಲ್ಲೇಶ್‌, ಪಿಡಿಓಬೆಟ್ಟಸ್ವಾಮಿಗೌಡ, ಕಾರ್ಯದರ್ಶಿ ಪದ್ಮಯ್ಯ, ಸದಸ್ಯರಾದ ಭಾಸ್ಕರ್‌, ಮಹದೇವಮ್ಮ, ರಂಗಸ್ವಾಮಿ, ಸಿದ್ದರಾಜು, ಜ್ಯೋತಿ ಬಾಲಕೃಷ್ಣ, ಸುನಿತ ನಾಗರಾಜ್‌ಸಿಂಗ್‌ ಬಾಬು, ಲಕ್ಷ್ಮಮ್ಮ ಗೋವಿಂದರಾಜು, ಲೆಕ್ಕಸಹಾಯಕಿ ಅನುರಾಧ, ಬಿಲ್‌ ಕಲೆಕ್ಟರ್‌ ರೇವು ಮಲ್ಲೇಶ್‌ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next