Advertisement

ಸಂಸದರ ನಿಧಿಯಿಂದ ದೇವಸ್ಥಾನಗಳಲ್ಲಿ ಭಜನೆ- ಕೀರ್ತನೆ ಮಾಡಿ: ಬಿಜೆಪಿ ಸಂಸದ ವೀರೇಂದ್ರ ಸಿಂಗ್

09:14 AM Dec 13, 2022 | Team Udayavani |

ಬಲ್ಲಿಯಾ (ಉ.ಪ್ರ) : ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಸಂಸದರ ನಿಧಿ (ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ) ಯನ್ನು ದೇವಸ್ಥಾನಗಳಲ್ಲಿ ಭಜನೆ-ಕೀರ್ತನೆಗಳನ್ನು ಆಯೋಜಿಸಲು ಬಳಸುವಂತೆ ಬಲ್ಲಿಯಾದ ಬಿಜೆಪಿ ಸಂಸದ ವೀರೇಂದ್ರ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಆಡಳಿತ ಪಕ್ಷದ ಸಂಸದರು ಹೇಳಿದರು.

ಜಿಲ್ಲೆಯ ಮುನ್ಸಿಪಲ್ ಕೌನ್ಸಿಲ್ ವ್ಯಾಪ್ತಿಯಲ್ಲಿರುವ ಎಲ್ಲಾ ಚಿಕ್ಕ ಮತ್ತು ದೊಡ್ಡ ದೇವಾಲಯಗಳನ್ನು ಸಮೀಕ್ಷೆ ಮಾಡಿ, “ಭಜನೆ-ಕೀರ್ತನೆ” ಮತ್ತು ಸಂಗೀತ ಉಪಕರಣಗಳನ್ನು ಖರೀದಿಸಲು ವ್ಯವಸ್ಥೆ ಮಾಡಬೇಕು ಎಂದು ಸಂಸದರು ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ವಾರ್ತಾ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ: ದಬಾಂಗ್‌ ಡೆಲ್ಲಿಗೆ ತಿವಿದೀತೇ ಬೆಂಗಳೂರು ಬುಲ್ಸ್‌?

MPLADS ಅಡಿಯಲ್ಲಿ, ಸಂಸದರು ಪ್ರತಿ ವರ್ಷ ಐದು ಕೋಟಿ ರೂ. ಹಣ ಪಡೆಯುತ್ತಾರೆ. ಈ ನಿಧಿಯನ್ನು ಯಾವ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಬೇಕು ಎನ್ನುವ ಕುರಿತು ಜಿಲ್ಲಾಧಿಕಾರಿಗೆ ಸೂಚಿಸಬೇಕು.

Advertisement

ಸಂಸದರು ಈ ನಿಧಿಯನ್ನು ಬಳಸುವಾಗ ಮಾರ್ಗಸೂಚಿಯನ್ನು ಅನುಸರಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಮತ್ತು ದೀರ್ಘಕಾಲ ಬಾಳಿಕೆ ಬರುವಂತಹ, ಸಮಾಜಕ್ಕೆ ನೆರವಾಗುವಂತಹ ಕೆಲಸಗಳಿಗೆ ಈ ಫಂಡ್ ಬಳಕೆಯಾಗಬೇಕು. ಉದಾಹರಣೆಗೆ, ಸಂಸದರು ಅವುಗಳನ್ನು ರಸ್ತೆಗಳು, ಶಾಲೆಗಳು ಮುಂತಾದ ಯೋಜನೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಆದರೆ ಸಂಸದರ ನಿಧಿಯನ್ನು ಭಜನೆಗೆ ಬಳಸುವ ಬಗ್ಗೆ ಮಾತನಾಡಿದ ಬಲಿಯಾ ಸಂಸದ ವೀರೇಂದ್ರ ಸಿಂಗ್, ಪ್ರಸ್ತುತ ಸನ್ನಿವೇಶದಲ್ಲಿ ಸಾಂಪ್ರದಾಯಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಆದ್ದರಿಂದ ಭಜನೆಗಳು, ಕೀರ್ತನೆಗಳು ಮತ್ತು ಅವುಗಳಿಗೆ ಸಂಗೀತ ವಾದ್ಯಗಳ ಬಳಕೆಯು ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next