Advertisement

ವ್ಯವಹಾರಕ್ಕೆ ಕನ್ನಡ: ಶೇ. 83 ಮಂದಿಯ ಅಭಿಪ್ರಾಯ

01:50 AM Apr 01, 2021 | Team Udayavani |

ಹೊಸದಿಲ್ಲಿ: ನಮಗೆ ಕನ್ನಡವೇ ಮೊದಲು, ನಮ್ಮ ವ್ಯವಹಾರ ಕನ್ನಡದಲ್ಲೇ… ಇದು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿ.ವಿ., ಲೋಕನೀತಿ – ಸಿಎಸ್‌ಡಿಎಸ್‌ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಶ. “2016ರಿಂದ 2018ರ ವರೆಗೆ ರಾಜಕೀಯ ಮತ್ತು ಸಮಾಜದ ನಡುವೆ ಚುನಾವಣೆ’ ಎಂಬ ವಿಚಾರದಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡಿಗರು ತಮ್ಮ ಕನ್ನಡಾಭಿಮಾನದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಜತೆಗೆ ಭಾಷೆಯ ಮೇಲೆ ಪ್ರಾಣವಿದ್ದರೂ ನಾವು ಗುರುತಿಸಿಕೊಳ್ಳುವುದು ಮಾತ್ರ ದೇಶದ ಹೆಸರಿನಲ್ಲೇ ಎಂದಿದ್ದಾರೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿ ಯಾವ ಭಾಷೆ ಎಂಬುದಕ್ಕೆ ಶೇ. 83ರಷ್ಟು ಮಂದಿ ಕನ್ನಡಕ್ಕೆ ಆದ್ಯತೆ ನೀಡಿದ್ದಾರೆ. ಯಾವುದೇ ಭಾಷೆ ಎಂದವರು ಶೇ. 9, ಹಿಂದಿ ಭಾಷೆಗೆ ಸಮ್ಮತಿ ಸೂಚಿಸಿ, ಇಂಗ್ಲಿಷ್‌ ಬೇಡ ಎಂದವರು ಶೇ. 2ರಷ್ಟು ಮಂದಿ.

ಯಾರ ಜತೆಗೆ ಸ್ನೇಹ? :

“ನಿಮಗೆ ಯಾವ ಸಮುದಾಯದವರ ಜತೆಗೆ ಮಿತ್ರತ್ವ ಇದೆ’ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಕರ್ನಾಟಕ ಸಹಿತ 12 ರಾಜ್ಯಗಳಲ್ಲಿ ಶೇ. 50ಕ್ಕಿಂತ ಕಡಿಮೆ ಮಂದಿ ತಮಗೆ ದಲಿತ ಸಮುದಾಯದ ಸ್ನೇಹಿತ ಇದ್ದಾನೆ ಎಂದಿದ್ದಾರೆ. ಶೇ. 35 ಮಂದಿ ಆದಿವಾಸಿ ಸ್ನೇಹಿತರು ಇದ್ದಾರೆ ಎಂದಿದ್ದಾರೆ. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ವ್ಯಕ್ತಿಗಳು ಮಿತ್ರರಾಗಿದ್ದಾರೆ ಎಂದು ಹೇಳಿದವರ ಪ್ರಮಾಣ ಶೇ. 50ಕ್ಕಿಂತ ಹೆಚ್ಚಿದೆ. ಹಿಂದೂ ಸಮುದಾಯದವರು ಮಿತ್ರರು ಎಂದವರ ಸಂಖ್ಯೆ ಶೇ. 72.

ರಾಜ್ಯಗಳ ಅಭಿಮತ :

Advertisement

ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಅಭಿಮಾನ ಹೆಚ್ಚಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 65, ತ. ನಾಡು ಶೇ. 56, ಮಿಜೋರಾಂ ಶೇ. 51, ಒಡಿಶಾ ಶೇ. 47, ನಾಗಾಲ್ಯಾಂಡ್‌ ಶೇ. 46 ಮತ್ತು ಗುಜರಾತ್‌ ಶೇ. 37 ಇದೆ.

 ಕರ್ನಾಟಕದ ಅಂಕಿಸಂಖ್ಯೆ :

ಶೇ. 83 – ವ್ಯವಹಾರಕ್ಕೆ ಸ್ಥಳೀಯ ಭಾಷೆ

ಶೇ. 34 – ರಾಷ್ಟ್ರದ ಮೂಲಕ ಗುರುತು

ಶೇ. 32 – ರಾಜ್ಯದ ಮೂಲಕ ಗುರುತು

ಶೇ. 29 – ಎರಡರ ಮೂಲಕವೂ ಗುರುತು

ಶೇ. 83 – ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ

ಶೇ. 09 – ಯಾವುದೇ ಭಾಷೆ

ಶೇ. 02 – ಹಿಂದಿ ಭಾಷೆ

ದೇಶ: ಯಾವುದರ ಮೂಲಕ ಗುರುತು? :

ಶೇ. 36- ರಾಷ್ಟ್ರದ ಮೂಲಕ ಗುರುತು

ಶೇ. 30- ರಾಜ್ಯಗಳ ಮೂಲಕ ಗುರುತು

ಶೇ. 27- ಎರಡರ ಮೂಲಕವೂ ಗುರುತು

ಶೇ. 7- ಗೊತ್ತಿಲ್ಲ

ಪ್ರಾದೇಶಿಕ ಭಾಷೆ ಬಳಕೆ :

ಶೇ. 44- ಆಯಾ ರಾಜ್ಯ ಭಾಷೆ

ಶೇ. 42- ಯಾವುದೇ ಭಾಷೆ

ಶೇ. 12- ಗೊತ್ತಿಲ್ಲ

ಶೇ. 2- ಹಿಂದಿ, ಆದರೆ ಇಂಗ್ಲಿಷ್‌ ಬೇಡ

Advertisement

Udayavani is now on Telegram. Click here to join our channel and stay updated with the latest news.

Next