Advertisement

ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನೇ ಬಳಸಿ

12:06 PM Jan 17, 2018 | Team Udayavani |

ಬೆಂಗಳೂರು: ಹಾಫ್ ಅಥವಾ ಫ‌ುಲ್‌ ಹೆಲ್ಮೆಟ್‌ ಎಂಬುದರ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖವಿಲ್ಲ, ಆದರೆ  ಐಎಸ್‌ಐ ಗುರುತಿನ ಹೆಲ್ಮೆಟ್‌ಗಳ ಬಳಕೆ ಬಗ್ಗೆ ಮಾತ್ರ ಉಲ್ಲೇಖೀಸಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ ಸ್ಪಷ್ಟಪಡಿಸಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಲ್ಮೆಟ್‌ ಬಳಕೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಐಎಸ್‌ಐ ಗುರುತಿನ ಹೆಲ್ಮೆಟ್‌ ಬಳಸಬೇಕು ಎಂಬ ನಿಯಮ ಸ್ಪಷ್ಟವಾಗಿದೆ. ಅರ್ಧ ಅಥವಾ ಫ‌ುಲ್‌ ಎಂಬ ವ್ಯತ್ಯಾಸಗಳಿಲ್ಲ, ಆದಾಗ್ಯೂ ಯಾಕೆ ಮತ್ತು ಯಾರಿಗೆ ಗೊಂದಲವಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದರು. 

ನಕಲಿ ಐಎಸ್‌ಐ ಗುರುತಿನ ಬಗ್ಗೆ ಕೇಳಿದಾಗ, “ಯಾವುದು ನಕಲಿ ಮತ್ತು ಅಸಲಿ ಐಎಸ್‌ಐ ಎಂಬ ಅರಿವು ಜನರಿಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನೇ ಬಳಸಬೇಕು. ಅದರಲ್ಲಿ ಫ‌ುಲ್‌ ಅಥವಾ ಹಾಫ್ ಎಂಬ ವ್ಯತ್ಯಾಸಗಳಾವುದೂ ಇಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next