Advertisement

Indian Army; ಗಡಿಭಾಗದ ನೆಲೆಗಳಲ್ಲಿ ಸರಕು ಸಾಗಣೆಗೆ ಖಾಸಗಿ ಕಾಪ್ಟರ್‌ ಬಳಕೆ?

01:23 AM Oct 14, 2024 | Team Udayavani |

ಹೊಸದಿಲ್ಲಿ: ಸರಕು ಸಾಗಣೆ ಉದ್ದೇಶಗಳಿಗಾಗಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಲು ಭಾರತೀಯ ಸೇನೆ ಯೋಜಿಸಿದೆ. ಇದಕ್ಕಾಗಿ ಟೆಂಡರ್‌ ಸಹ ಕರೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisement

ಹೆಲಿಕಾಪ್ಟರ್‌ಗಳನ್ನು ಖರೀದಿ ಮಾಡುವುದು ದುಬಾರಿಯಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾ­ಗಿದೆ ಎನ್ನಲಾಗಿದೆ. ಬಾಡಿಗೆ ಪಡೆಯುವ ಈ ಕಾಪ್ಟರ್‌ಗಳನ್ನು ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿ ನಿಯೋ­ಜನೆ ಮಾಡಲಾಗುತ್ತದೆ.

ಇವುಗಳನ್ನು ಚಳಿಗಾಲದಲ್ಲಿ ಬಾಡಿಗೆಗೆ ಪಡೆದು ಆಹಾರ ಪದಾರ್ಥ, ಇಂಧನ, ಸೈನಿಕರ ಸಾಗಣೆಗಳಂತಹ ಕೆಲಸಗಳಿಗೆ ಬಳಕೆ ಮಾಡಿ­ಕೊ­ಳ್ಳುವ ಸಾಧ್ಯತೆ ಇದೆ. ಚೀತಾ, ಚೇತಕ್‌ ಕಾಪ್ಟರ್‌ಗಳನ್ನು ದೀರ್ಘ‌ ಕಾಲದಿಂದ ಬಳಕೆ ಮಾಡಲಾಗುತ್ತಿದೆ. ಅವುಗಳ ಮೇಲೆ ಹೆಚ್ಚಿನ ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಮುಂದಾಗಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next