Advertisement
ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ)ಯಲ್ಲಿ ಗುರುವಾರ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿಯಲ್ಲಿರುವ 194 ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳು ಹಾಗೂ ಕೆಪಿಎನಲ್ಲಿ ತರಬೇತಿಯಲ್ಲಿರುವ 36 ಪೊ›ಬೇಷನರಿ ಡಿವೈಎಸ್ಪಿ$ಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಆತ್ಮಸ್ಥೈರ್ಯ ಹೆಚ್ಚಲಿದೆ: ಮೊದಲ ಬಾರಿಗೆ ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳೊಂದಿಗೆ ಇಂತಹ ಸಂವಾದ ನಡೆದಿದ್ದು, ಈ ರೀತಿ ಸಂವಾದದಿಂದ ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಲೋಕಸೇವಾ ಆಯೋಗದ ಮೇಲೆ ಬಹಳ ಟೀಕೆ ಬರುತ್ತಿದ್ದು, ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಮೇಲೆ ಅನೇಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕೆಲವು ಬಾರಿ ಹಣ ಹಾಗೂ ಶಿಫಾರಸಿನಿಂದ ಅರ್ಹರಿಗೆ ಹುದ್ದೆಗಳು ಸಿಗದಂತಾಗಲಿದ್ದು, ಹೀಗಾಗಿ ನಮ್ಮ ಸರ್ಕಾರ ಸುಧಾರಣೆ ತಂದು ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಹೋಟಾ ಆಯೋಗದ ಶಿಫಾರಸು ನೀಡಿದ ನಂತರ ನಿಮಗೆ ಹುದ್ದೆ ಸಿಕ್ಕಿದೆ. ಈ ಹಿಂದೆ ಲಿಖೀತ ಪರೀಕ್ಷೆಯ ಅಂಕಗಳು ಪರೀûಾರ್ಥಿಗಳಿಗೆ ತಿಳಿಯುತ್ತಿತ್ತು.
ಆದರೆ, ಈ ಬಾರಿ ಸಂದರ್ಶನಕ್ಕೆ ಹೋಗುವವರೆಗೂ ಅಂಕಗಳು ತಿಳಿಯುವುದಿಲ್ಲ. ಹೀಗಾಗಿ ಈ ಬಾರಿ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕ ಡಾ.ಸಂದೀಪ್ ದವೆ, ಐಜಿಪಿ ವಿಪುಲ್ ಕುಮಾರ್ ಇನ್ನಿತರರು ಹಾಜರಿದ್ದರು.
ಜಸ್ಟ್ ಪಾಸ್ ಆದರೂ ಯಶಸ್ವಿಯಾದೆ: ಸಿಎಂವಕೀಲರಿಗೆ ಅಂಕಕ್ಕಿಂತ ಸಾಮಾನ್ಯಜ್ಞಾನ ಮುಖ್ಯ. ನಾನು ಸೀರಿಯಸ್ ಆಗಿ ಲಾ ಪ್ರಾಕ್ಟೀಸ್ ಮಾಡದಿದ್ದರೂ ಯಶಸ್ವಿ ಲಾಯರ್ ಆದೆ. ಪರೀಕ್ಷೆಯಲ್ಲಿ ತಾನು ಜಸ್ಟ್‌ಪಾಸ್ ಆಗಿದ್ದೆ, ತನ್ನೊಂದಿಗೆ ರ್‍ಯಾಂಕ್ ಪಡೆದವನು ಕೆಲಸ ಬಿಟ್ಟು ಬೇರೆಡೆ ಹೋದ. ಹೀಗಾಗಿ ಸಾಮಾನ್ಯಜಾnನ, ಹೃದಯವಂತಿಕೆ ಹಾಗೂ ಸಮಾಜವನ್ನು ಅರ್ಥಮಾಡಿಕೊಂಡಿದ್ದೇ ಆದಲ್ಲಿ ಯಾವುದೇ ವೃತ್ತಿ ಹಾಗೂ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ಆದ್ದರಿಂದ ನೀವೂ ಇದನ್ನೇ ಒಂದು ಉದಾಹರಣೆಯಾಗಿ ತೆಗದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ಹೊಟ್ಟೆ ಪಾಡಲ್ಲ, ಜನಸೇವೆ
ಸರ್ಕಾರಿ ಸೇವೆ ಎಂಬುದು ಹೊಟ್ಟೆಪಾಡಿಗಾಗಿ ಅಲ್ಲ, ಜನಸೇವೆಗೆ. ಹೀಗಾಗಿ ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಕೆಲಸ ಮಾಡಿ. ನೀವು ಒಮ್ಮೆ ಈ ಕೆಲಸಕ್ಕೆ ಸೇರಿದರೆ 30 ವರ್ಷ ಜನಸೇವೆ ಮಾಡಲು ಅವಕಾಶವಿರುತ್ತದೆ. ಆದರೆ, ರಾಜಕಾರಣಿಗಳು ಪ್ರತಿ 5 ವರ್ಷಕ್ಕೊಮ್ಮೆ ಜನರ ಮುಂದೆ ಹೋಗಿ, ತಮ್ಮ ಅಧಿಕಾರವನ್ನು ರಿನಿವಲ್ ಮಾಡಿಸಿಕೊಳ್ಳಬೇಕು. ಅವರು ಒಪ್ಪಿದರೆ ಮುಂದೆ ಬರುತ್ತೇವೆ, ಇಲ್ಲವಾದರೆ ಮನೆಗೆ ಹೋಗುತ್ತೇವೆ ಎಂದರು.