ರಾಮನಗರ: ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಲು ಟೋಲ್ ಫ್ರೀ ಸಂಖ್ಯೆ 1950 ಹಾಗೂ ಸಹಾಯ ವಾಣಿ ಸಂಖ್ಯೆ 080- 27275946 ಬಳಸಿ ಹಾಗೂ ಚುನಾವಣೆ ಕುರಿತಂತೆ ದೂರು ಸಲ್ಲಿಕೆಗಾಗಿ ಸಿವಿಜಿಲ್ (ಸಿಟಿಜನ್ ವಿಜಿಲ್ ಆ್ಯಪ್) ಮೊಬೈಲ್ ಆ್ಯಪ್ ಬಳಸುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಈಗಾಗಲೇ ಟೋಲ್ ಫ್ರೀ ಸಂಖ್ಯೆ 1950 ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ವಿವಿಧ ಬಗೆಯ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಅಂದರೆ ಮತದಾರರ ನೋಂ ದಣಿ, ಮತದಾರರ ಸ್ಥಳ ವರ್ಗಾವಣೆ ಮತ್ತು ಚುನಾವಣೆಯ ಮತದಾರರ ಗುರುತಿನ ಚೀಟಿಯನ್ನು ಪಡೆಯುವ ಕುರಿತು ಮಾಹಿತಿ ಪಡೆಯ ಬಹುದಾಗಿರುತ್ತದೆ. ಇದರ ಜೊತೆಗೆ ಸಹಾ ಯ ವಾಣಿ ಸಂಖ್ಯೆ 080-27275946ಗೂ ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ ಎಂದರು.
ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಲು ಮತ್ತು ವರ್ಗಾ ವಣೆ, ತಿದ್ದುಪಡಿ ಮಾಡಲು ಇದೇ ಏ.11 ರವರೆಗೆ ಅವಕಾಶ ಇರುತ್ತದೆ. ಸಾರ್ವಜನಿಕರು ಚುನಾವಣೆ ಸಂಬಂಧಿಸಿದ ಮಾರ್ಗದರ್ಶನ ಜೊತೆಗೆ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳ ಮಾಹಿತಿ ನೀಡಲು ಈ ಟೋಲ್ ಫ್ರೀ ಸಂಖ್ಯೆ 1950 ಹಾಗೂ ಸಹಾಯವಾಣಿ ಸಂಖ್ಯೆ 080-27275946 ಬಳಸಬಹು ದಾಗಿದೆ ಎಂದು ಹೇಳಿದರು.
ಭಾರತ ಚುನಾವಣಾ ಆಯೋಗವು ಕರಾರು ಹೊಕ್ಕಾಗಿ ಚುನಾವಣೆ ನೀತಿ ಸಂಹಿತೆ ಜಾರಿಗೆ ತರುವುದು ಮತ್ತು ಚು ನಾ ವಣೆ ಆಕ್ರಮ ತಡೆಗಟ್ಟಲು ಹಾಗೂ ಆಸೆ, ಆಮಿಷಗಳನ್ನು ಸ್ಥಳದಲ್ಲೇ ಚಿತ್ರೀಕರಿಸಲು ಸಿವಿಜಿಲ್ ಸಿಟಿಜನ್ ಆ್ಯಪ್ ಚಾಲ್ತಿಯಲ್ಲಿರುತ್ತದೆ. ಸಾರ್ವಜನಿಕರು ತಮ್ಮ ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರದ ವಿವರ, ಅಂಚೆ ಪಿನ್ ಕೋಡ್ ನಮೂದಿಸಿ ನೋಂದಾಯಿ ಸಿಕೊಳ್ಳಬೇಕು ಎಂದರು.
ಪರಿಶೀಲಿಸಿ ಕ್ರಮ: ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪೋಟೋ, ವಿಡಿಯೋ ಮೂಲಕ ನೇರ ಸೆರೆ ಹಿಡಿದು ವಾಯ್ಸ ಮೂಲಕ ಕಳು ಹಿಸಬಹುದು. ಇದು ನೇರವಾಗಿ ಚುನಾವ ಣಾಧಿಕಾರಿಗಳ ತಂಡಕ್ಕೆ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ತಂಡಗಳು ಕಾರ್ಯಪ್ರವೃತ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ಅಕ್ರಮ ತಡೆಗಟ್ಟಲು ಸದಾ ಕಾವಲಾಗಿರುತ್ತದೆ. ಪ್ರತಿಯೊಬ್ಬ ನಾಗರಿಕರು ಈ ಆ್ಯಪ್ ಅನ್ನು ಸ್ವಯಂಪ್ರೇರಿತವಾಗಿ ಬಳಸಿ ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.