Advertisement
ತಾಲೂಕಿನ ಗಡಿಯಂಚಿನ ನೆಕ್ಕುಂದಿ ಪೋಡಿಗೆ ಭೇಟಿ ನೀಡಿ ಬುಡಕಟ್ಟು ಉಪ ಯೋಜನೆಯಡಿ ತರಭೇತಿ ಮತ್ತು ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜೇಂದ್ರ ಪ್ರಸಾದ್ ದೇಶದಲ್ಲಿ ದಿನೇದಿನೇ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಆಹಾರ ಪದಾರ್ಥಗಳೂ ಹೆಚ್ಚಿನ ಉತ್ಪಾದನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಗಿರಿಜನರಿಗಾಗಿ ಹತ್ತು ಹಲವು ಯೋಜನೆಗಳನ್ನು ನೀಡುತ್ತಿದೆ. ಅಲ್ಲದೆ ಆ ಆಹಾರದಲ್ಲಿ ಮಾನವನಿಗೆ ದೈಹಿಕವಾಗಿ ಅಗತ್ಯವಿರುವ ಪೌಷ್ಠಿಕಾಂಶ ಮತ್ತು ಲಘು ಲವಣಾಂಶಗಳ ಆಹಾರ ಪದಾರ್ಥ ಉತ್ಪಾದನೆ ಮಾಡಬೇಕಿದೆ. ಆದರೆ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವಶ್ಯಕವಿರುವಷ್ಟು ಪೌಷ್ಠಿಕಾಂಶ ದೊರೆಯುತ್ತಿಲ್ಲ. ಆದುದರಿಂದ ಕೃಷಿ ವಿಶ್ವವಿದ್ಯಾನಿಲಯಗಳ ಮೂಲಕ ಉತ್ತಮವಾದ ಅಭಿವೃದ್ಧಿಪಡಿಸಿದ ಹೈಬ್ರೀಡ್ ಬಿತ್ತನೆ ಬೀಗಳನ್ನು ನೀಡಲಾಗುತ್ತಿದೆ. ಈ ಹೈಬ್ರೀಡ್ ತಳಿಗಳು ಸ್ಥಳೀಯವಾಗಿ ಬಳಕೆ ಮಾಡುವ ತಳಿಗಳಿಗಿಂತ 2-3ಪಟ್ಟು ಹೆಚ್ಚಿನ ಇಳುವರಿ ನೀಡುತ್ತವೆ. ಆದುದರಿಂದ ಈ ನೂತನ ತಳಿಗಳನ್ನು ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆದು ರೈತರೂ ಕೂಡ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು.
Related Articles
Advertisement
ಜಮೀನುಗಳಿಗೆ ಭೇಟಿ, ಪರಿಶೀಲನೆ: ಕಾರ್ಯಕ್ರಮಕ್ಕೂ ಮುನ್ನ ಕುಲಪರಿ ಡಾ.ರಾಜೇಂದ್ರ ಪ್ರಸಾದ್ ಅವರು ಮಾದೇವಮ್ಮ ಎಂಬ ರೈತ ಮಹಿಳೆಯ ಜಮೀನಿಗೆ ಭೇಟಿ ನೀಡಿ ವಿಶ್ವವಿದ್ಯಾನಿಲಯದವತಿಯಿಂದ ನೀಡಿರುವ ಎಂಎಲ್-365 ತಳಿಯ ರಾಗಿ ಬೆಳೆ ಮತ್ತು ತರಕಾರಿ ಬೆಳೆಗಳನ್ನು ಪರಿಶೀಲನೆ ಮಾಡಿದರು. ಇದೇ ವೇಳೆ ರೈತ ಮಹಿಳೆಯೊಂದಿಗೆ ಔಪಚಾರಿಕ ಚರ್ಚೆ ನಡೆಸಿ ವಿಶ್ವವಿದ್ಯಾನಿಲಯ ನೀಡುತ್ತಿರುವ ಸವಲತ್ತುಗಳ ಬಗ್ಗೆ ತಿಳಿಸಿ ಇದರ ಸದುಪಯೋಗಪಡೆದುಕೊಳ್ಳುವಂತೆ ತಿಳಿಸಿದರು.