Advertisement

ತವರಿನ ಕೊನೆ ಅಥ್ಲೆಟಿಕ್ಸ್‌ನ 100 ಮೀ.ನಲ್ಲಿ ಬೋಲ್ಟ್ ಗೆ ಚಿನ್ನ

06:25 PM Jun 12, 2017 | Team Udayavani |

ಕಿಂಗ್‌ಸ್ಟನ್‌: ತವರಿನಲ್ಲಿ ವೃತ್ತಿ ಜೀವನದ ಕೊನೆಯ ಆ್ಯತ್ಲೆಟಿಕ್‌ ಕೂಟದಲ್ಲಿ ಭಾಗವಹಿಸಿರುವ ವಿಶ್ವದ ಖ್ಯಾತ ಆ್ಯತ್ಲೀಟ್‌ ಜಮೈಕಾ ಜಿಂಕೆ ಖ್ಯಾತಿಯ ಉಸೇನ್‌ ಬೋಲ್ಟ್ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.  ಅವರು 10.3 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದರು. 

Advertisement

ವಿಶ್ವ ಚಾಂಪಿಯನ್‌ ಉಸೇನ್‌ ಬೋಲ್ಟ್ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯದಾಗಿ ಓಡಲಿದ್ದಾರೆ. ಆ ಬಳಿಕ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ. ಬೋಲ್ಟ್ ಒಲಿಂಪಿಕ್ಸ್‌ನಲ್ಲಿ 8, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 11 ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆ 28 ಪದಕ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next