Advertisement

ಗಾಳಿಯಲ್ಲೂ ಓಡಿ ಗೆದ್ದ ಉಸೇನ್‌ ಬೋಲ್ಟ್!

06:25 AM Sep 15, 2018 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ಉಸೇನ್‌ ಬೋಲ್ಟ್ ವಿಶ್ವ ವೇಗದ ಓಟಗಳ ಸರದಾರ. ಸಿಂಥೆಟಿಕ್‌ ಟ್ರ್ಯಾಕ್‌ಗಳಲ್ಲಿ ಚಿನ್ನದ ಹೆಜ್ಜೆ ಇಟ್ಟ ವೀರ. ಒಲಿಂಪಿಕ್ಸ್‌ ಇರಲಿ ಅಥವಾ ವಿಶ್ವ ಚಾಂಪಿಯನ್‌ಶಿಪ್‌ ಇರಲಿ, ಬೋಲ್ಟ್ ಅಂದರೆ ಜಿಂಕೆ. ಬೋಲ್ಟ್ ಅಂದರೆ ಚಿನ್ನ. ಈ ವಿಶ್ವ ಪರಾಕ್ರಮಿ ನಿವೃತ್ತಿಯ ಬಳಿಕವೂ ನಿರಂತರ ಸುದ್ದಿಯಾಗುತ್ತಲೇ ಇದ್ದಾರೆ.

Advertisement

ಇತ್ತೀಚಿಗೆ ಫ‌ುಟ್‌ಬಾಲ್‌ ಕ್ಲಬ್‌ ಪರ ಆಡಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದ ಬೋಲ್ಟ್ ಇದೀಗ ಹೊಸ ಕಸರತ್ತು ಮಾಡಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ “ಓಡಿ “(ತೇಲಾಡಿ) ಗೆದ್ದಿದ್ದಾರೆ!

ಶೂನ್ಯ ಗುರುತ್ವಾಕರ್ಷಣೆಯನ್ನು ಸೃಷ್ಟಿಸಲಾಗಿದ್ದ ಫ್ರಾನ್ಸ್‌ ವಿಮಾನದೊಳಗೆ ಬೋಲ್ಟ್ ಮೂವರೊಂದಿಗೆ ಓಡಿದ್ದಾರೆ; ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಓಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೋಲ್ಟ್ ಸಾಧನೆಗೆ ಅಭಿಮಾನಿಗಳಿಂದ ಶ್ಲಾಘನೆಯೂ ವ್ಯಕ್ತವಾಗಿದೆ.

ವಿಮಾನದೊಳಗೆ ಸಾಹಸ
ಫ್ರಾನ್ಸ್‌ನ ಮಧ್ಯ ತಯಾರಕ ಕಂಪೆನಿಯೊಂದು ಉಸೇನ್‌ ಬೋಲ್ಟ್ಗೆ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಓಡುವ ಸವಾಲನ್ನು ಒಡ್ಡಿತ್ತು. ಭವಿಷ್ಯದ ಬಾಹ್ಯಾಕಾಶ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇಂಥದೊಂದು ಶೂನ್ಯ ಗುರುತ್ವಾಕರ್ಷಣೆಯನ್ನೂ ವಿಮಾನದೊಳಗೆ ಸೃಷ್ಟಿಸಲಾಗಿತ್ತು. ಬೋಲ್ಟ್ ಸಂಸ್ಥೆಯ ವಿಶೇಷ ಆಹ್ವಾನದ ಮೇರೆಗೆ “ಫ್ರಾನ್ಸ್‌ ಏರ್‌ಬಸ್‌ ಎ310′ ವಿಮಾನ ಏರಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಉಸೇನ್‌ ಬೋಲ್ಟ್ ಓಡಿದರು.

“ಮೂವರೊಂದಿಗೆ ಓಡುವ ಸವಾಲು ಪಡೆದಿದ್ದ ನಾನು ಆರಂಭದಲ್ಲಿ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದೆ. ಅನಂತರ ಪ್ರಯತ್ನಿಸಿದೆ. ಓ…ದೇವರೆ ಏನಾಗುತ್ತಿದೆ ಎಂದು ನನಗೆ ನಾನೇ ಪ್ರಶ್ನಿಸಿಕೊಂಡಿದ್ದೆ. ಬಳಿಕ ಗಾಳಿಯಲ್ಲಿ ತೇಲಾಡಿಕೊಂಡು ಓಡಿದ ಕ್ಷಣ ವಾವ್‌ ಎನಿಸಿತು’ ಎಂದು ಬೋಲ್ಟ್ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Advertisement

ವೃತ್ತಿಪರ ಫ‌ುಟ್ಬಾಲಿಗ ಬೋಲ್ಟ್
ಆ್ಯತ್ಲೀಟ್‌ ಆಗಿದ್ದ ಉಸೇನ್‌ ಬೋಲ್ಟ್ ಈಗ ವೃತ್ತಿಪರ ಫ‌ುಟ್ಬಾಲಿಗರಾಗಿ ಬದಲಾಗಿದ್ದಾರೆ.  ಟ್ರ್ಯಾಕ್‌ ಸ್ಪರ್ಧೆಗೆ ವಿದಾಯ ಹೇಳಿದ ಬಳಿಕ ಅವರು ಆಸ್ಟ್ರೇಲಿಯದ ಸೆಂಟ್ರಲ್‌ ಕೋಸ್ಟ್‌ ಮ್ಯಾರಿನರ್ಸ್‌ ತಂಡದ ಜತೆ ಅಭ್ಯಾಸ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಜರ್ಮನಿಯ ಕ್ಲಬ್‌ ತಂಡದಲ್ಲಿ ತರಬೇತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next