ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾ ವಣೆಯಲ್ಲಿ ಈಗಾಗಲೇ 5.87 ಕೋಟಿಗೂ ಅಧಿಕ ಮಂದಿ ಹಕ್ಕು ಚಲಾಯಿಸಿದ್ದಾರೆ. ಅಲ್ಲದೆ, ಮೇಲ್ ಮೂಲಕ ಮತ ಚಲಾಯಿ ಸಿದವರ ಸಂಖ್ಯೆ ನಿರೀಕ್ಷೆಗೂ ಮೀರಿರುವ ಕಾರಣ, ಮತ ಎಣಿಕೆ ಪ್ರಕ್ರಿಯೆಯು ಪೂರ್ಣಗೊಳ್ಳುವಾಗ ನ.3 ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ, ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬೀಳುವಾಗ ವಿಳಂಬವಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಎಡಿಸನ್ ರಿಸರ್ಚ್ ಆ್ಯಂಡ್ ಕ್ಯಾಟ ಲಿಸ್ಟ್ ಎಂಬ ಸಂಸ್ಥೆಯು 50 ಪ್ರಾಂತ್ಯಗಳ ಚುನಾವಣ ಅಧಿಕಾರಿಗಳ ಸಮೀಕ್ಷೆ ನಡೆಸಿದ್ದು, ಈವರೆಗೆ 5.87 ಕೋಟಿ ಅಮೆರಿಕನ್ನರು ಮತ ಚಲಾಯಿಸಿರುವ ಮಾಹಿತಿ ಸಿಕ್ಕಿದೆ. 2016ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. 2016ರಲ್ಲಿ ಈ ಅವಧಿಯಲ್ಲಿ 5.83 ಕೋಟಿ ಮಂದಿ ಹಕ್ಕು ಚಲಾಯಿಸಿದ್ದರು.
ಪ್ರಬಲ ಪೈಪೋಟಿಯಿದೆ ಎಂದ ಶಲಭ್ ಕುಮಾರ್: “ಕೊರೊನಾ ಏನಾದರೂ ಬರದೇ ಇದ್ದಿದ್ದರೆ, ಟ್ರಂಪ್ ಅಭೂತ ಪೂರ್ವ ಜಯ ಗಳಿಸುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ, ಪೈಪೋಟಿ ಪ್ರಬಲವಾದಂತಿದೆ.’ ಹೀಗೆಂದು ಹೇಳಿರು ವುದು ಅಮೆರಿಕದಲ್ಲಿ “ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಉದ್ಘೋಷವನ್ನು ಮೊದಲ ಬಳಸಿದ್ದ ಭಾರತೀಯ ಅಮೆರಿ ಕನ್ ಶಲಭ್ ಕುಮಾರ್. ಟ್ರಂಪ್ ಹಾಗೂ ಪ್ರಧಾನಿ ಮೋದಿ ಅವರ ಅಭಿಮಾನಿ ಯಾಗಿರುವ 75 ವರ್ಷದ ಕುಮಾರ್, ಈ ಬಾರಿಯ ಸ್ಪರ್ಧೆ ಕಠಿಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಬಂದಿ ರದಿದ್ದರೆ ಆರ್ಥಿಕತೆ, ಷೇರು ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿರುತ್ತಿತ್ತು, ನಿರುದ್ಯೋಗವೂ ಕಡಿಮೆಯಿರುತ್ತಿತ್ತು. ಆಗ ಖಂಡಿತಾ ಟ್ರಂಪ್ ಗೆಲುವು ಸುಲಭ ವಾಗುತ್ತಿತ್ತು ಎಂದು ಹೇಳಿದ್ದಾರೆ.