Advertisement

ವಿಮಾನದಲ್ಲಿ ಕಾಣೆಯಾಗಿದ್ದ ಅಮೆರಿಕದ ಮಹಿಳೆಯ ಸೂಟ್ ಕೇಸ್ 4 ವರ್ಷದ ಬಳಿಕ ಪತ್ತೆ

04:46 PM Jan 14, 2023 | Team Udayavani |

ಚಿಕಾಗೋ: ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಕಾಣೆಯಾಗುವುದು ಸಾಮಾನ್ಯ ಸಂಗತಿ. ಕಾಣೆಯಾದ ಲಗೇಜು ಕೆಲವೊಂದು ಸಲ ಕೆಲವು ದಿನ ಬಿಟ್ಟು ಸಿಗುತ್ತದೆ, ಕೆಲವೊಮ್ಮೆ ಸಿಗದೇ ಇರಲೂಬಹುದು ಆದರೆ ಇಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು ಅಮೆರಿಕದ ಮಹಿಳೆಯೊಬ್ಬರು ನಾಲ್ಕು ವರ್ಷದ ಹಿಂದೆ ವಿಮಾನದಲ್ಲಿ ಕಳೆದುಕೊಂಡ ಲಗೇಜೊಂದು ಮತ್ತೆ ಮಹಿಳೆಯ ಕೈಸೇರುವಂತಾಗಿದೆ.

Advertisement

ನಾಲ್ಕು ವರ್ಷದ ಹಿಂದೆ ಒರೆಗಾನ್‌ನ ನಿವಾಸಿ ಎಪ್ರಿಲ್ ಗೇವಿನ್ ಅವರು ಪ್ರವಾಸಕ್ಕಾಗಿ ಚಿಕಾಗೋಗೆ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣ ಬೆಳೆಸಿದರು ಈ ವೇಳೆ ಅವರ ಸೂಟ್ ಕೇಸ್ ಕಾಣೆಯಾಗಿತ್ತು ಈ ಕುರಿತು ವಿಮಾನಯಾನ ಸಂಸ್ಥೆಗೂ ಮಹಿಳೆ ದೂರು ನೀಡಿದ್ದರು, ಅಲ್ಲದೆ ತನ್ನ ಸೂಟ್ ಕೇಸ್ ಕಾಣೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದನ್ನು ಪೋಸ್ಟ್ ಮಾಡಿದ್ದರು ಅಷ್ಟಾದರೂ ಆದರೆ ಸೂಟ್ ಕೇಸ್ ಮಾತ್ರ ಪತ್ತೆಯಾಗಿರಲಿಲ್ಲ.

ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ವರ್ಷದ ಬಳಿಕ ಟೆಕ್ಸಾಸ್‌ನ ಹೂಸ್ಟನ್‌ ನಿಂದ ಮಹಿಳೆಯ ಮೊಬೈಲ್ ಗೆ ಕರೆಯೊಂದು ಬಂದಿದ್ದು ಸೂಟ್ ಕೇಸ್ ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ ಇದರಿಂದ ಆಶ್ಚರ್ಯಗೊಂಡಿರುವ ಮಹಿಳೆ ನನ್ನ ಸೂಟ್ ಕೇಸ್ ಕಳೆದ ನಾಲ್ಕು ವರ್ಷಗಳಿಂದ ಯುನೈಟೆಡ್ ಏರ್‌ಲೈನ್ಸ್ ನಲ್ಲಿ ಸುತ್ತಾಡುತ್ತಿತ್ತು ಈಗ ನನ್ನ ಕೈ ಸೇರುವ ಸಮಯ ಬಂದಿದೆ ಹಾಗಾಗಿ ಯುನೈಟೆಡ್ ಏರ್‌ಲೈನ್ಸ್ ಗೆ ನನ್ನ ಧನ್ಯವಾದಗಳು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಯೋಧರ ಶೌರ್ಯವನ್ನು ಹೊಗಳಲು ಪದಗಳು ಸಾಕಾಗುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್

Advertisement

Udayavani is now on Telegram. Click here to join our channel and stay updated with the latest news.

Next