ನ್ಯೂಯಾರ್ಕ್: ಚಿಕಾಗೋದಿಂದ ಐಸ್‌ಲ್ಯಾಂಡ್‌ಗೆ ಪ್ರಯಾಣಿಸುತ್ತಿದ್ದ ವಿಮಾನದ ಅರ್ಧದಾರಿಯಲ್ಲೇ ಕೋವಿಡ್ -19 ಗೆ ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ ಅಮೆರಿಕಾ ದ ಮಹಿಳೆಯೊಬ್ಬರನ್ನು ವಿಮಾನದ ಬಾತ್ ರೂಮ್ ನಲ್ಲಿ 5 ಗಂಟೆಗಳ ಕಾಲ ಪ್ರತ್ಯೇಕವಾಗಿರಿಸಿದ ಬಗ್ಗೆ ಮಾಧ್ಯಮ ವರದಿಗಳು ತಿಳಿಸಿವೆ.
ಮಿಚಿಗನ್‌ನ ಶಿಕ್ಷಕಿ ಮಾರಿಸಾ ಫೋಟಿಯೊ ಅವರಿಗೆ ಡಿಸೆಂಬರ್ 19 ರಂದು ಪ್ರಯಾಣಿಸುತ್ತಿದ್ದ ವೇಳೆ ಅರ್ಧದಾರಿಯಲ್ಲೇ ಗಂಟಲು ನೋವು ಪ್ರಾರಂಭವಾಗಿದ್ದು,, ಕ್ಷಿಪ್ರ ಕೋವಿಡ್ ಪರೀಕ್ಷೆಯನ್ನು ಮಾಡಲು ಸ್ನಾನಗೃಹಕ್ಕೆ ಹೋಗಿದ್ದು, ಅಲ್ಲಿ ಅವರು ಸೋಂಕಿಗೆ ಒಳಗಾಗಿರುವುದನ್ನು ದೃಢಪಡಿಸಲಾಯಿತು ಎಂದು WABC-TV ವರದಿ ಮಾಡಿದೆ.
ವಿಮಾನ ಹಾರಾಟದ ಮೊದಲು, ಫೋಟಿಯೊ ಅವರು ಎರಡು ಬಾರಿ ಪಿಸಿಆರ್ ಪರೀಕ್ಷೆಗಳನ್ನು ಮತ್ತು ಸುಮಾರು ಐದು ಕ್ಷಿಪ್ರ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದು, ಇವೆಲ್ಲವೂ ನೆಗೆಟಿವ್ ಆಗಿದ್ದವು. ಆದರೆ ವಿಮಾನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಫೋಟಿಯೊಗೆ ಗಂಟಲು ನೋವು ಕಾಣಿಸಿಕೊಂಡಿತು.
ನಾನು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಯೋಚಿಸಿದೆ,ತಕ್ಷಣ, ಅದು ಪಾಸಿಟಿವ್ ಆಗಿತ್ತು ಎಂದು ಪೋಟಿಯೊ ಹೇಳಿದ್ದಾರೆ. ಅವರು ಲಸಿಕೆಗಳನ್ನು ಪಡೆದಿದ್ದಾರೆ ಮತ್ತು ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ. ಲಸಿಕೆ ಹಾಕದ ಜನರೊಂದಿಗೆ ಕೆಲಸ ಮಾಡುವುದರಿಂದ ಅವರು ಸತತವಾಗಿ ಪರೀಕ್ಷಿಸುತ್ತಿದ್ದರು.
ಅಟ್ಲಾಂಟಿಕ್ ಸಾಗರದ ಮೇಲಿರುವ ಬಾತ್‌ರೂಮ್‌ನಲ್ಲಿ ಪರೀಕ್ಷಾ ವರದಿ ಪಡೆದಾಗ, ನಾನು ಭಯಭೀತಳಾದೆ ಎಂದು ಅವರು ಹೇಳಿದ್ದಾರೆ. ನಾನು ಅಳುತ್ತಿದ್ದೆ, ನನ್ನ ಕುಟುಂಬದವರ ಕ್ಷೇಮದ ವಿಚಾರದಲ್ಲಿ ಹೆದರುತ್ತಿದ್ದೆ. ವಿಮಾನದಲ್ಲಿದ್ದ ಇತರ ಜನರಿಗಾಗಿ ನಾನು ಹೆದರುತ್ತಿದ್ದೆ. ನನಗಾಗಿಯೇ ನಾನು ನರ್ವಸ್ ಆಗಿದ್ದೆ. ಫ್ಲೈಟ್ ಅಟೆಂಡೆಂಟ್ ನನ್ನನ್ನು ಶಾಂತಗೊಳಿಸಲು ಸಹಾಯ ಮಾಡಿದರು ಎಂದು ಹೇಳಿರುವುದಾಗಿ ವರದಿಯಾಗಿದೆ.