Advertisement

ಅಮೆರಿಕಾ ಪ್ರತೀಕಾರ:ಸಿರಿಯಾ ವಾಯುನೆಲೆಗಳ ಮೇಲೆ ಭಾರೀ ಕ್ಷಿಪಣಿ ದಾಳಿ 

11:56 AM Apr 07, 2017 | Team Udayavani |

ಡಮಾಸ್ಕಸ್‌ : ಅಮೆರಿಕ ಮತ್ತು ಸಿರಿಯಾ ನಡುವೆ ನಡೆಯುತ್ತಿರುವ 6 ವರ್ಷಗಳಿಂದ ನಡೆಯುತ್ತಿರುವ ನಾಗರಿಕ ಸಮರ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರ ರಾತ್ರಿ ಸಿರಿಯಾದ ವಾಯುನೆಲೆಯನ್ನು ಗುರಿಯಾಗಿರಿಸಿಕೊಂಡು ಅಮೆರಿಕ  ವ್ಯಾಪಕ ಕ್ಷಿಪಣಿ ದಾಳಿ ನಡೆಸಿದೆ. 

Advertisement

ಬಂಡುಕೋರರನ್ನು ಗುರಿಯಾಗಿರಿಸಿಕೊಂಡು ಸಿರಿಯಾ ಪಡೆಗಳು ಖಾನ್‌ ಶೇಖೌನ್‌ ಎಂಬ ಪಟ್ಟಣದ ಮೇಲೆ ಕೆಮಿಕಲ್‌ ದಾಳಿ ನಡೆಸಿ ಅಮಾಯಕ ಮಕ್ಕಳು ಸೇರಿ 70 ಜನರ ಹತ್ಯೆಗೆ ಕಾರಣವಾಗಿದ್ದವು. ಈ ದಾಳಿಯನ್ನು ಬಲವಾಗಿ ಖಂಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಸಿರಿಯಾ ಎಲ್ಲಾ ಮೀತಿಗಳನ್ನು ಮೀರಿದೆ’ ಇದಕ್ಕಾಗಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು.

ಸಿರಿಯಾ ಅಧ್ಯಕ್ಷ  ಬಶರ್‌ ಅಲ್‌ ಅಸದ್‌ ನಿಯಂತ್ರಣದಲ್ಲಿರುವ ಶರ್ಯತ್‌ ಪಟ್ಟಣದ ವಾಯುನೆಲೆಯ ಮೇಲೆ ಅಮೆರಿಕ ನೌಕಾಪಡೆಯ ಹಡಗುಗಳ ಮೂಲಕ ಭಾರೀ ಕ್ಷಿಪಣಿ ದಾಳಿ ನಡೆಸಲಾಗಿದೆ. ದಾಳಿಯಿಂದಾಗಿ ಅಪಾರ ಪ್ರಮಾಣದ ಯುದ್ಧ ಸಾಮಗ್ರಿಗಳು, ವಿಮಾನಗಳು ನಾಶಗೊಂಡಿರುವುದಾಗಿ ವರದಿಯಾಗಿದೆ.ಹಲವು ಸೈನಿಕರು ಪ್ರಾಣಕಳೆದುಕೊಂಡಿರುವ ಬಗ್ಗೆ ಹೇಳಲಾಗಿದೆ.

ರಷ್ಯಾ ಪಡೆಗಳಿಗೆ ಮಾಹಿತಿ ನೀಡಿದ ಬಳಿಕ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿ ವೇಳೆ ರಷ್ಯಾ ಪಡೆಗಳು ಇರಲ್ಲಿಲ್ಲ ಎಂದು ಅಮೆರಿಕ ಹೇಳಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next